Happy Birthday Salman Khan:ಸಲ್ಮಾನ್​ ಖಾನ್ ಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

Happy Birthday Salman Khan: ಹಾವು ಕಚ್ಚಿದ ಬಳಿಕ ಪ್ರಥಮ ಚಿಕಿತ್ಸೆ ಪಡೆದಿರುವ ಸಲ್ಮಾನ್​ ಖಾನ್ ಅವರು ತಮ್ಮ ಫಾರ್ಮ್​ಹೌಸ್​ ನಲ್ಲಿಯೇ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  

Edited by - Zee Kannada News Desk | Last Updated : Dec 27, 2021, 12:13 PM IST
  • ಸಲ್ಮಾನ್​ ಖಾನ್ ಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
  • ಫಾರ್ಮ್​ ಹೌಸ್​ನಲ್ಲಿ ಜನ್ಮದಿನ ಆಚರಿಸಿಕೊಂಡ ಬಾಲಿವುಡ್‌ನ ಭಾಯಿಜಾನ್
  • ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಜನ್ಮದಿನದ ಶುಭಾಶಯ ಕೋರುತ್ತಿರುವ ಅಭಿಮಾನಿಗಳು
Happy Birthday Salman Khan:ಸಲ್ಮಾನ್​ ಖಾನ್ ಗೆ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ  title=
ಸಲ್ಮಾನ್​ ಖಾನ್

ನವದೆಹಲಿ: ಇಂದು ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್  56 ನೇ ಹುಟ್ಟುಹಬ್ಬದ  (Salman Khan Birthday) ಸಂಭ್ರಮದಲ್ಲಿದ್ದಾರೆ. ಸಲ್ಮಾನ್​ ಖಾನ್​ ಫಾರ್ಮ್​ ಹೌಸ್​ನಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರ ಆಪ್ತರು, ಸ್ನೇಹಿತರು ಮತ್ತು ಅನೇಕ ಸೆಲೆಬ್ರಿಟಿಗಳು ಫಾರ್ಮ್​ ಹೌಸ್​ಗೆ ತೆರಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. 

ನಟ, ನಿರ್ಮಾಪಕ, ಟಿವಿ ಕಾರ್ಯಕ್ರಮ ನಿರೂಪಕ ಮತ್ತು ಉದ್ಯಮಿ ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಲ್ಲು ಭಾಯ್ 1965ರ ಡಿಸೆಂಬರ್ 27ರಂದು ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಅಪಾರ ಸಂಖ್ಯೆಯ ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ (Happy Birthday Salman Khan) ಕೋರುತ್ತಿದ್ದಾರೆ. 

 

 

ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಸಲ್ಮಾನ್ ಖಾನ್ (Salman Khan) 1988 ರಲ್ಲಿ 'ಬೀವಿ ಹೋ ತೋ ಐಸಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 'ಬೀಯಿಂಗ್ ಹ್ಯೂಮನ್' ಎಂಬ ಚಾರಿಟಿ ಸಂಸ್ಥೆಯನ್ನು ಕೂಡ ಸಲ್ಮಾನ್ ಮುನ್ನಡೆಸುತ್ತಿದ್ದಾರೆ. 'ಬೀಯಿಂಗ್ ಹ್ಯೂಮನ್' ಎಂಬ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಸಲ್ಮಾನ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ಹಲವರು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. 

ಹಾವು ಕಚ್ಚಿದ ಬಳಿಕ ಪ್ರಥಮ ಚಿಕಿತ್ಸೆ ಪಡೆದಿರುವ ಸಲ್ಮಾನ್​ ಖಾನ್ ಅವರು ತಮ್ಮ ಫಾರ್ಮ್​ಹೌಸ್​ ನಲ್ಲಿಯೇ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  

ಇದನ್ನೂ ಓದಿ: Sweet potatoes side-effects: ಗೆಣಸನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳಿವು...

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News