Actre Bhagyashree : 52 ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಸ್ವಿಮಿಂಗ್ ಫುಲ್ ನಲ್ಲಿ ಎಂಜಾಯ್ ಮಾಡಿದ ಬಾಲಿವುಡ್ ನಟಿ

ಈ ನಟಿ ತನ್ನ ಕೆಲವು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ ಸಧ್ಯ ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ.

Written by - Channabasava A Kashinakunti | Last Updated : Sep 16, 2021, 12:42 PM IST
  • ಭಾಗ್ಯಶ್ರೀ ಮನಮೋಹಕ ಸೌಂದರ್ಯಕ್ಕೆ ಬೆರಗಾದ ಫ್ಯಾನ್ಸ್
  • ಸಾರಾ-ಜಾನ್ವಿ ಹೋಲಿಕೆ ಮಾಡಿದ ಫ್ಯಾನ್ಸ್
  • ಭಾಗ್ಯಶ್ರೀ ರೋಮ್ಯಾಂಟಿಕ್ ವಿಡಿಯೋ ವೈರಲ್
Actre Bhagyashree : 52 ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಸ್ವಿಮಿಂಗ್ ಫುಲ್ ನಲ್ಲಿ ಎಂಜಾಯ್ ಮಾಡಿದ ಬಾಲಿವುಡ್ ನಟಿ title=

ನವದೆಹಲಿ : 'ಮೈನೆ ಪ್ಯಾರ್ ಕಿಯಾ' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಾತ್ರೋರಾತ್ರಿ ಸ್ಟಾರ್ ಆದ ನಟಿ ಭಾಗ್ಯಶ್ರೀ ಈಗ 52 ವರ್ಷ, ಆದರೆ ಹಾಟ್ನೆಸ್, ಸ್ಟೈಲ್ ಮತ್ತು ಫಿಟ್ನೆಸ್ ವಿಷಯದಲ್ಲಿ ಇಂದಿಗೂ ಸಹ ಅವರು ಹೊಸ ನಟಿಯಾರಿಗೆ ಸ್ಪರ್ಧೆ ನೀಡುತ್ತಾರೆ. ಈ ನಟಿ ತನ್ನ ಕೆಲವು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ ಸಧ್ಯ ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ.

ಭಾಗ್ಯಶ್ರೀ ಮನಮೋಹಕ ದೇಹ ಸೌಂದರ್ಯಕ್ಕೆ ಮನ ಸೋತ ಫ್ಯಾನ್ಸ್

ಭಾಗ್ಯಶ್ರೀ(Bhagyashree) ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿರಾಗಿದ್ದು, ಆಗಾಗ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಾರೆ. ಈಗ ಹಂಚಿಕೊಂಡಿರುವ ಫೋಟೋಗಳು, ಭಾಗ್ಯಶ್ರೀ ರಜೆಯನ್ನು ಆನಂದಿಸುತ್ತಿರುವುದು ಕಂಡುಬರುತ್ತದೆ. ಅವರು ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ನೇರಳೆ ಮೊನೊಕಿನಿ ಶೈಲಿಯ ಬಿಕಿನಿಯನ್ನು ಧರಿಸಿದ್ದಾರೆ. ಭಾಗ್ಯಶ್ರೀ ಸ್ವಿಮಿಂಗ್ ಫುಲ್ ನಲ್ಲಿ ಮೋಜು ಮಾಡುತ್ತಿದ್ದಾರೆ. ಕೆಲವು ಫೋಟೋಗಳಲ್ಲಿ, ಭಾಗ್ಯಶ್ರೀ ಕೂಡ ಸ್ವಿಮಿಂಗ್ ಫುಲ್ ಹೊರಗೆ ಪೋಸ್ ನೀಡಿದ್ದಾರೆ. ಹಲವು ವರ್ಷಗಳ ನಂತರ, ನಟಿಯ ಇಂತಹ ಹಾಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Actor Sonu Sood ಮನೆಗೆ ಆದಾಯ ತೆರಿಗೆ ಸಮೀಕ್ಷೆಗಾಗಿ ತಲುಪಿದ ಅಧಿಕಾರಿಗಳ ತಂಡ

ಸಾರಾ-ಜಾನ್ವಿ ಹೋಲಿಕೆ

ಭಾಗ್ಯಶ್ರೀ(Bhagyashree Photos) ಅವರ ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಆಕೆ ಇನ್ನೂ ಚಿಕ್ಕವಳು ಎಂದು ಹೇಳುತ್ತಿದ್ದಾರೆ. ಅನೇಕ ಅಭಿಮಾನಿಗಳು ಭಾಗ್ಯಶ್ರೀಯನ್ನ ಬಾಲಿವುಡ್ ಹೊಸ ನಟಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರ ಸೌಂದರ್ಯಕ್ಕೆ ಹೋಲಿಸಿದ್ದಾರೆ. ನಟಿಯರಗಿಂತ ಕಡಿಮೆ ಏನಿಲ್ಲ ಎಂದು ಎಂದು ಫ್ಯಾನ್ಸ್ ಹದಿ ಹೊಗಳಿದ್ದಾರೆ. ಅಂದಹಾಗೆ, ಭಾಗ್ಯಶ್ರೀ ತನ್ನ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಬಹುಶಃ ಈ ವಯಸ್ಸಿನಲ್ಲಿಯೂ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ಅದರ ಹೊಳಪು ಆಕೆಯ ಮುಖದಲ್ಲಿ ಗೋಚರಿಸುತ್ತದೆ.

ರೋಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ

ಕೆಲವು ತಿಂಗಳ ಹಿಂದೆ, ಭಾಗ್ಯಶ್ರೀ ಅವರ ವಿಡಿಯೋ ವೈರಲ್(Video Viral) ಆಗಿದ್ದು, ಅದರಲ್ಲಿ ಆಕೆ ತನ್ನ ಗಂಡನನ್ನು ಕಾಶ್ಮೀರದ ಸುಂದರ ಬಯಲಿನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಕೆಲವು ಜನರು ಈ ವೀಡಿಯೊವನ್ನು ಟೀಕಿಸಿದರು, ಆದರೆ ಹೆಚ್ಚಿನವರು ಈ ಯುವ ಶೈಲಿಯಲ್ಲಿ ಜೀವಿಸಿದ್ದಕ್ಕಾಗಿ ಅವರನ್ನು ಹೊಗಳಿದರು.

 

19 ನೇ ವಯಸ್ಸಿನಲ್ಲಿ ವಿವಾಹವಾಗಿದ್ದ ಭಾಗ್ಯಶ್ರೀ

ಕೇವಲ 19 ನೇ ವಯಸ್ಸಿನಲ್ಲಿ, ಭಾಗ್ಯಶ್ರೀ ಉದ್ಯಮಿ ಹಿಮಾಲಯ ದಾಸಾನಿ(Himalaya Dasani)ಯನ್ನು ವಿವಾಹವಾದರು. ಆದಾಗ್ಯೂ, ಅವರ ತಂದೆ ಈ ಮದುವೆಗೆ ವಿರೋಧವಾಗಿರುವುದರಿಂದ ಅವರ ಪೋಷಕರು ಆತನ ಮದುವೆಗೆ ಹಾಜರಾಗಲಿಲ್ಲ. ಭಾಗ್ಯಶ್ರೀ ಅವರ ಮಗನ ಜನನದ ನಂತರ, ಅವರ ಪೋಷಕರು ಭಾಗ್ಯಶ್ರೀ ಮತ್ತು ಹಿಮಾಲಯವನ್ನು ಭೇಟಿಯಾಗಲು ಪ್ರಾರಂಭಿಸಿದರು. 2009 ರಲ್ಲಿ, ಅವರು ಡಾನ್ಸ್ ರಿಯಾಲಿಟಿ ಶೋ 'ಲಕ್ ದಿಖ್ಲಾ ಜಾ ಸೀಸನ್ 3' ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಅವರು ತಮ್ಮ ಪತಿಯೊಂದಿಗೆ ಮಾಧ್ಯಮ ಸಂಸ್ಥೆಯ 'ಶ್ರೀನಿವೇಶ್ ಎಂಟರ್‌ಟೈನ್‌ಮೆಂಟ್' ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ : Deepika Padukone New House : ಮುಂಬೈನಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ ದೀಪಿಕಾ-ರಣವೀರ್ : ಬೆಲೆ ಕೇಳಿದ್ರೆ ದಂಗಾಗ್ತೀರಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News