'ಸಲಾರ್' ಟ್ರೇಲರ್‌ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲ್ಲ: ಹೊಂಬಾಳೆ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣವೇನು?

Salaar: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಗೆ ಇನ್ನೇನು 42 ದಿನಗಳು ಮಾತ್ರ ಬಾಕಿಯಿದ್ದು, ಇದೀಗ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಇದು ನಿಜಾನಾ? ಹಾಗಾದ್ರೆ ಹೊಂಬಳೆ ಸಂಸ್ಥೆ ಯಾಕೆ ಇಂತಹ ನಿರ್ಧಾರ ಮಾಡಿದೆ? ಇದೆಲ್ಲವುದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

Written by - Zee Kannada News Desk | Last Updated : Nov 10, 2023, 05:26 PM IST
  • ಸಲಾರ್ ಸಿನಿಮಾ ಬಿಡುಗಡೆಗೆ ಇನ್ನೇನು 42 ದಿನಗಳು ಮಾತ್ರ ಬಾಕಿಯಿದೆ.
  • ಸಲಾರ್‌ ಮಲಯಾಳಂ ವರ್ಷನ್ ಪೃಥ್ವಿರಾಜ್ ಸುಕುಮಾರ್‌ಗೆ ನೀಡಿದೆ.
  • ಸಲಾರ್ ಚಿತ್ರದ ಒಂದೇ ಟ್ರೇಲರ್ ಬರುತ್ತೆ ಎನ್ನುವ ಊಹಾಪೋಹ ಶುರುವಾಗಿದೆ
'ಸಲಾರ್' ಟ್ರೇಲರ್‌ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲ್ಲ: ಹೊಂಬಾಳೆ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣವೇನು? title=

Salaar Trailer in Kannada: ಸಲಾರ್ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಪ್ರಶಾಂತ್ ನೀಲ್  ಕಟ್ಟಿಕೊಟ್ಟಿದ್ದು, ಎರಡು ಭಾಗಗಳಾಗಿ ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದೆ. ಪ್ರಭಾಸ್ ನಟನೆಯ ಈ ಸಿನಿಮಾದ ಒಂದೊಂದೇ ಅಪ್‌ಡೇಟ್ ಹೊರ ಬೀಳ್ತಿದ್ದು, ಶೀಘ್ರದಲ್ಲೇ ಚಿತ್ರದ ಟ್ರೇಲರ್ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಸಿನಿಮಾ ಬಿಡುಗಡೆಗೆ 42 ದಿನಗಳು ಮಾತ್ರ ಬಾಕಿಯಿದ್ದು, ದಿನದಿಂದ ದಿನಕ್ಕೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.

ಸಲಾರ್‌ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗುತ್ತಿದ್ದು, ಮಲಯಾಳಂ ವರ್ಷನ್ ಪೃಥ್ವಿರಾಜ್ ಸುಕುಮಾರ್‌ಗೆ ನೀಡಿರುವುದಾಗಿ ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಇನ್ನು'KGF' ಸರಣಿ, 'ಕಾಂತಾರ', 'ಧೂಮಂ' ಚಿತ್ರಗಳನ್ನು ಪೃಥ್ವಿರಾಜ್ ಕೇರಳದಲ್ಲಿ ರಿಲೀಸ್ ಮಾಡಿದ್ದು, ಈ ಸಿನಿಮಾದಲ್ಲಿ ಪೃಥ್ವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಅಲ್ಲಿ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗಪ್ಪಳಿಸಲಿದೆ.'ಸಲಾರ್' ತಮಿಳು ವರ್ಷನ್ ವಿತರಣೆ ಹಕ್ಕು ರೆಡ್ ಜೈಂಟ್ ಸಂಸ್ಥೆ ಕೊಂಡುಕೊಂಡಿದ್ದು, ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಂಡಿರುವುದಾಗಿ ಹೇಳಲಾಗ್ತಿದೆ. 

ಇದನ್ನು ಓದಿ: Salar: ಪ್ರಭಾಸ್‌ ಸಿನಿಮಾದಲ್ಲಿ ಯಂಗ್ ಹೀರೋಯಿನ್ ಸ್ಪೆಷಲ್ ಸಾಂಗ್.. ಯಾರು ಗೊತ್ತಾ?

ಸಲಾರ್ ಇಂಡಿಯನ್ ಸಿನಿಮಾವಾಗಿದ್ದು, ತೆಲುಗು ಮಾತ್ರವಲ್ಲದೇ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದೆ. ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳ ಟೀಸರ್, ಟ್ರೇಲರ್, ಸಾಂಗ್‌ಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಮಾಡುತ್ತಾರೆ. ಆದರೆ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದ್ದು, ಹೊಂಬಾಳೆ ಸಂಸ್ಥೆ ಇದನ್ನು ಬ್ರೇಕ್ ಮಾಡ್ತಾ ಬರ್ತಿದೆ.

ಇದೀಗ ಸಲಾರ್ ಚಿತ್ರದ ಒಂದೇ ಟ್ರೇಲರ್ ಬರುತ್ತೆ ಎನ್ನುವ ಊಹಾಪೋಹ ಶುರುವಾಗಿದ್ದು, ಈ ಟೀಸರ್‌ ರೀತಿಯಲ್ಲೇ ಒಂದೇ ಟ್ರೈಲರ್ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆಯಂತೆ .ಈ ಹಿಂದೆ 5 ಭಾಷೆಯ ಸಾಹಿತ್ಯ ಸೇರಿಸಿ 'KGF- 2' ಚಿತ್ರದ 'ಮಾನ್‌ಸ್ಟರ್' ಸಾಂಗ್ ರಿಲೀಸ್ ಮಾಡಿದ್ದು, ಅದೇ ರೀತಿ ಇಂಗ್ಲೀಷ್ ಡೈಲಾಗ್ ಅಥವಾ 5 ಭಾಷೆಯ ಡೈಲಾಗ್ಸ್ ಮಿಕ್ಸ್ ಮಾಡಿ ಒಂದೇ ಟ್ರೈಲರ್ ಕಟ್ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ನಿಜವಾದರೆ ಇದೊಂದು ವಿಭಿನ್ನ ಪ್ರಯತ್ನ ಆಗುವುದರಲ್ಲಿ ಸಂದೇಹವಿಲ್ಲ.

ಇದನ್ನು ಓದಿ: Garadi movie review : ಭಟ್ರ ʼಗರಡಿʼಯಲ್ಲಿ ಪ್ರೀತಿಯ ಯುದ್ಧ..! ಬಿ.ಸಿ ಪಾಟೀಲ್‌ಗೆ ಡಿಬಾಸ್‌ ಉಸಿರು, ಸೂರ್ಯ ಬಲ

ಸಲಾರ್ ಸಿನಿಮಾ ಇಂಗ್ಲೀಷ್‌ಗೂ ಡಬ್ ಆಗಿ ರಿಲೀಸ್ ಆಗುತ್ತದೆ ಎನ್ನುವ ಲೆಕ್ಕಾಚಾರವೂ ಇದ್ದು, ಒಂದು ವೇಳೆ ಇಂಗ್ಲೀಷ್‌ನಲ್ಲಿ ಚಿತ್ರ ಬರೋದೆ ಆದರೆ ಇಂಗ್ಲೀಷ್ ಡೈಲಾಗ್ ಇರುವ ಒಂದೇ ಟ್ರೇಲರ್ ರಿಲೀಸ್ ಆಗುವ ಸಾಧ್ಯತೆಯಿದೆ. ಒಟ್ನಲ್ಲಿ ಟ್ರೈಲರ್ ವಿಚಾರದಲ್ಲೇ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿರುವುದು ಸುಳ್ಳಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News