Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಿರಂತರ ಅಪ್ಡೇಟ್ಗಳು ಹೊರಬರುತ್ತಿವೆ. ಮುಂಬೈ ನಗರದ ಬಾಂದ್ರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ನಟ ಸೈಫ್ ಅಲಿ ಖಾನ್ ಮನೆಯೊಳಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ನ ಮೊದಲನೇ ಫೈನಲಿಸ್ಟ್ ಆಗಿರುವ ಹನುಮಂತು ಅವರ ಮನೆ ಹೇಗಿದೆ ಗೊತ್ತಾ..?
ಪೊಲೀಸರ ಪ್ರಕಾರ, ಘಟನೆಯ ತನಿಖೆಗಾಗಿ 10 ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ, ಸೈಫ್ ಅಲಿ ಖಾನ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರನೇ ಮಹಡಿಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿದ್ದು, ಸೈಫ್ ಅಲಿ ಅವರ ಮನೆ 12 ನೇ ಮಹಡಿಯಲ್ಲಿದೆ.
ಇನ್ನು ಈ ಘಟನೆ ನಡೆದ ಬಳಿಕ ಹಲವು ಪ್ರಶ್ನೆಗಳು ಕಾಡಲು ಪ್ರಾರಂಭಿಸುತ್ತಿವೆ. ಆದರೆ ಅವುಗಳಿಗೆ ಇನ್ನೂ ಉತ್ತರಗಳು ಸಿಕ್ಕಿಲ್ಲ. ಅಪರಿಚಿತ ವ್ಯಕ್ತಿ ಹೇಗೆ ಒಳಗೆ ಪ್ರವೇಶಿಸಿದನೆಂದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಪಡಿಸಲಾಗಿಲ್ಲ, ಆದರೆ ಸಿಸಿಟಿವಿ ದೃಶ್ಯಾವಳಿಗಳು ಈಗ ಶಂಕಿತನನ್ನು ತೋರಿಸುತ್ತಿವೆ. ಆ ವ್ಯಕ್ತಿ ಫೈರ್ ಎಕ್ಸಿಟ್ ಮೆಟ್ಟಿಲುಗಳ ಮೂಲಕ ಮನೆಗೆ ಪ್ರವೇಶಿಸಿ ಗಂಟೆಗಳ ಕಾಲ ಅಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೈಫ್ ತನ್ನ ಕುಟುಂಬದೊಂದಿಗೆ ವಾಸಿಸುವ 12 ನೇ ಮಹಡಿಯಲ್ಲಿರುವ ಅದೇ ಕಟ್ಟಡದ ಸಿಸಿಟಿವಿ ದೃಶ್ಯಗಳಲ್ಲಿ ಶಂಕಿತ ಆರೋಪಿಯ ಚಿತ್ರ ಸೆರೆಯಾಗಿದೆ.
ಇನ್ನು ಮನೆಯಲ್ಲಿ ಐಷಾರಾಮಿ ಕಾರುಗಳಿರುವಾಗ ಸೈಫ್ ಅವರನ್ನು ಅವರ ಹಿರಿಯ ಮಗ ಇಬ್ರಾಹಿಂ ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಹಾಗಾದ್ರೆ ಆ ಕಾರುಗಳ ಚಾಲಕರು ಎಲ್ಲಿದ್ರು? ಎಂಬುದು ಜನರ ಪ್ರಶ್ನೆ. ಅಷ್ಟೇ ಅಲ್ಲ, ಘಟನೆ ನಡೆಯುವ ಎರಡು ಗಂಟೆ ಮುನ್ನ ಯಾರೊಬ್ಬರು ಮನೆಗೆ ಪ್ರವೇಶಿಸಿಲ್ಲ. ಇದರ ಬಗ್ಗೆ ಸಿಸಿಟಿವಿಯ ಫೂಟೇಜ್ ಮಾಹಿತಿ ನೀಡುತ್ತಿದೆ. ಹೀಗಿರುವಾಗ, ದಾಳಿ ಮಾಡಲು ಬಂದವನನ್ನು ಅದಕ್ಕಿಂತಲೂ ಮುಂಚೆಯೇ ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ. ಇದನ್ನೆಲ್ಲಾ ನೋಡುವಾಗ ಇದೊಂದು ಅಕಸ್ಮಾತ್ ಆಗಿರುವ ಘಟನೆ ಅಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇದನ್ನೂ ಓದಿ: ʼನನ್ನ ಮಗನಲ್ಲಿ ʼಈʼ ಕೊರತೆ ಇರೋದ್ರಿಂದಾನೇ ಇನ್ನೂ ಮದುವೆಯಾಗಿಲ್ಲ: ಅಸಲಿ ಕಾರಣ ಬಿಚ್ಚಿಟ್ಟ ಸಲ್ಲುಮಿಯಾ ತಂದೆ!!
ಅಷ್ಟೇ ಅಲ್ಲದೆ, ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಯಾರು ಎಂಬುದು ಮನೆಯ ಸಿಬ್ಬಂದಿಯೊಬ್ಬರಿಗೆ ತಿಳಿದಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಆ ವ್ಯಕ್ತಿಯೇ ಆಗಂತುಕನನ್ನು ಮನೆಯೊಳಗೆ ಸೇರಿಸಲು ಸಹಾಯ ಮಾಡಿದ್ದು ಎಂದು ಸಹ ವರದಿಯಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಅನುಮಾನಗಳು ಭುಗಿಲೆದ್ದಿವೆ. ಒಟ್ಟಾರೆ ತನಿಖೆ ನಂತರವೇ ಸ್ಪಷ್ಟ ಉತ್ತರ ಬಯಲಾಗಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ