Sai Pallavi: ಅಮಿರ್​ ಖಾನ್ ಪುತ್ರನ ಜತೆ ಸಾಯಿ ಪಲ್ಲವಿ ಸುತ್ತಾಟ, ಫೋಟೋ ವೈರಲ್​

Sai Pallavi Junaid Khan Photos : ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಜಪಾನ್‌ನಲ್ಲಿ ನ್ಯಾಚುರಲ್‌ ಬ್ಯೂಟಿ ಸುತ್ತಾಟ ನಡೆಸಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. 

Written by - Chetana Devarmani | Last Updated : Feb 13, 2024, 07:45 AM IST
  • ಅಮೀರ್ ಖಾನ್ ಪುತ್ರ ಜುನೈದ್ ಖಾನ್
  • ಅಮಿರ್​ ಖಾನ್ ಪುತ್ರನ ಜತೆ ಸಾಯಿ ಪಲ್ಲವಿ
  • ಜಪಾನ್‌ನಲ್ಲಿರುವ ಫೋಟೋಗಳು ವೈರಲ್‌
Sai Pallavi: ಅಮಿರ್​ ಖಾನ್ ಪುತ್ರನ ಜತೆ ಸಾಯಿ ಪಲ್ಲವಿ ಸುತ್ತಾಟ, ಫೋಟೋ ವೈರಲ್​  title=

Sai Pallavi With Aamir Khan Son In Japan: ಬಾಲಿವುಡ್ ನ ಸ್ಟಾರ್ ಕಿಡ್ ಜುನೈದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಜುನೈದ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಮಗ. ಜುನೈದ್‌ ಯಾವಾಗ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಜುನೈದ್ ಖಾನ್ ಮೊದಲ ಪ್ರಾಜೆಕ್ಟ್ 'ಮಹಾರಾಜ್' ಅನೌನ್ಸ್‌ ಆಗಿದ್ದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಇದು ಈ ವರ್ಷ ಬಿಡುಗಡೆಯಾಗಲಿದೆ. 

ಜುನೈದ್ ಪ್ರಸ್ತುತ ತಮ್ಮ ಮುಂದಿನ ಹೆಸರಿಡದ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದು ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದೆ. ಜುನೈದ್ ಈ ಸಿನಿಮಾವನ್ನು ಜಪಾನ್ ನಲ್ಲಿ ಶೂಟ್ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಈಗ ಜುನೈದ್ ಖಾನ್ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಸೌತ್‌ ಬ್ಯೂಟಿ ಸಾಯಿ ಪಲ್ಲವಿ ಸಹ ಕಾಣಿಸಿಕೊಂಡಿದ್ದಾರೆ. ಜುನೈದ್ ಮತ್ತು ಸಾಯಿ ಪಲ್ಲವಿ ಅವರ ಹೆಸರಿಡದ ಚಿತ್ರದ ಸೆಟ್‌ನಿಂದ ಈ ಫೋಟೋ ಸೋರಿಕೆಯಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಡಾಲಿ ಪಿಕ್ಚರ್ಸ್‌ನಿಂದ ಹೊಸ ಸಿನಿಮಾ, ಹೀರೋ ಯಾರು ಗೊತ್ತಾ..?  

ಜುನೈದ್ ಖಾನ್ ಹಾಗೂ ಸಾಯಿಪಲ್ಲವಿ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜಪಾನ್‌ನಲ್ಲಿ ಸೆಟ್ಟೇರಿರುವ ಚಿತ್ರದ ಸೆಟ್‌ನ ಫೋಟೋಗಳು ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ ಚಿತ್ರ ತಂಡವು ಜಪಾನ್‌ನ ಸಪೊರೊದಲ್ಲಿ ಸ್ನೋ ಫೆಸ್ಟಿವಲ್‌ನಲ್ಲಿ ಚಿತ್ರೀಕರಣವನ್ನು ನಡೆಸುತ್ತಿರುವಂತೆ ತೋರುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Koimoi.com (@koimoi)

 

ಅಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ದಕ್ಷಿಣದ ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿಯೊಂದಿಗೆ ಜುನೈದ್ ಖಾನ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಜುನೈದ್ ಖಾನ್ ಅವರ ಲುಕ್ ಸಾಕಷ್ಟು ವಿಭಿನ್ನವಾಗಿದೆ ಮತ್ತು ಅದ್ಭುತವಾಗಿದೆ.‌ ಜೊತೆಗೆ ನಾಯಕಿಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ, ಎಂದಿನಂತೆ ಸರಳ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ. 

ಇದನ್ನೂ ಓದಿ: ನಟಿ ಶ್ರೀಲೀಲಾ ಡಯೆಟ್ ಪ್ಲಾನ್..‌ ಫಿಗರ್‌ ಮೈಂಟೇನ್ ಮಾಡೋಕೆ ಏನು ತಿನ್ನೋದು ಗೊತ್ತಾ?

ಸಿದ್ಧಾರ್ಥ್ ಪಿ ಮಲ್ಹೋತ್ರಾ ನಿರ್ದೇಶನದ ಆದಿತ್ಯ ಚೋಪ್ರಾ ಅವರ ಐತಿಹಾಸಿಕ ಮಹಾಕಾವ್ಯ 'ಮಹಾರಾಜ್' ಮೂಲಕ ಜುನೈದ್ ಖಾನ್ ತಮ್ಮ ಸಿನಿ ಕರಿಯರ್‌ ಆರಂಭಿಸಿದರು. ಅವರು ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರ ಇದೇ ವರ್ಷ ತೆರೆಗೆ ಬರಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News