Puttakana Makkalu: ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದ ಸಹನಾಗೆ ಬಿಗ್‌ ಶಾಕ್‌: ಜಡ್ಜ್‌ ಹೇಳಿದ್ದಾದರು ಏನು??

Puttakana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ತನ್ನ ಗಂಡನ ಮನೆಯಲ್ಲಿ ಅನುಭವಿಸಿದ ಸಂಕಷ್ಟದಿಂದ ನ್ಯಾಯಕ್ಕಾಗಿ ಕೋರ್ಟ್‌ಗೆ ಹೋದರೆ ಅಲ್ಲಿ ಆಕೆಯ ಬಿಗ್‌ ಶಾಕ್‌ ಆಗುತ್ತದೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Apr 26, 2024, 04:05 PM IST
  • ಸಹನಾಗೆ ಮುರಳಿ ಬಗ್ಗೆ ಇಟ್ಟಿಕೊಂಡಿರುವ ನಂಬಿಕೆಯು ಹುಸಿಯಾದಾಗ, ಆತನ ಮನೆಯವರ ಜೊತೆ ಹೊಂದಿಕೊಳ್ಳುವುದಕ್ಕೆ ಆಗದಾಗ ಡಿವೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.
  • ಕೌಸಲ್ಯಗೆ ಮುರಳಿಗೆ ವಿನೂತನ ಜೊತೆ ಮದುವೆ ಮಾಡಿಸಬೇಕೆಂದು ಅಂದುಕೊಂಡಿದ್ದಾಳೆ. ಇನ್ನೊಂದೆಡೆ ಸಹನಾಗೆ ಕೋರ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಸಹನೆಯಿಂದ ಉತ್ತರ ನೀಡುತ್ತಾಳೆ.
  • ಸುಮಾ ಅಕ್ಕನ ಫೋನ್ ತೆಗೆದುಕೊಂಡು ಹೋಗಿ ಕಾಳೀ ಹಾಗೂ ಸುಮಾ ಮೊಬೈಲ್‌ನಲ್ಲಿ ಡಿಲೀಟ್ ಆಗಿರುವ ವಿಡಿಯೋವನ್ನು ಮರಳಿ ಪಡೆಯಬಹುದಾ ಎಂದು ಮೊಬೈಲ್ ಅಂಗಡಿಯವರ ಹತ್ತಿರ ಕೇಳುತ್ತಾರೆ.
Puttakana Makkalu: ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದ ಸಹನಾಗೆ ಬಿಗ್‌ ಶಾಕ್‌: ಜಡ್ಜ್‌ ಹೇಳಿದ್ದಾದರು ಏನು?? title=

Sahana And Murali Divorse Case At Court: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಸಹನಾ ಭಾರವಾದ ಮನಸ್ಸಿನಿಂದ ನ್ಯಾಯಕ್ಕಾಗಿ ಕೋರ್ಟ್‌ ಮೊರ ಹೋದಗ ದೊಡ್ಡ ಆಘಾತವಾಗುತ್ತದೆ. ಸಹನಾಗೆ ವಿಚ್ಛೇದನ ಪಡೆಯಲು ಸ್ವಲ್ಪವೂ ಇಷ್ಟವಿರುವುದಿಲ್ಲ. ಆದರೆ ಈಕೆಗೆ ಮುರಳಿ ಬಗ್ಗೆ ಇಟ್ಟಿಕೊಂಡಿರುವ ನಂಬಿಕೆಯು ಹುಸಿಯಾದಾಗ, ಆತನ ಮನೆಯವರ ಜೊತೆ ಹೊಂದಿಕೊಳ್ಳುವುದಕ್ಕೆ ಆಗದಾಗ ಡಿವೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. 

ಒಂದು ಕಡೆ ಮೊದಲಿನಿಂದಲೂ ಕೌಸಲ್ಯಾಗೆ ಆತುರ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಮುರಳಿಯನ್ನು ಸಹನಾಳಿಂದ ದೂರ ಮಾಡಬೇಕು ಎಂಬ ಆಸೆ. ಈಕೆ ಸಹನಾಳನ್ನು ಸೊಸೆಯೆಂದು ಖಂಡಿತವಾಗಿಯೂ ಒಪ್ಪಿಕೊಳ್ಳುವುದು ಇಲ್ಲ. ಕೌಸಲ್ಯಗೆ ಮುರಳಿಗೆ ವಿನೂತನ ಜೊತೆ ಮದುವೆ ಮಾಡಿಸಬೇಕೆಂದು ಅಂದುಕೊಂಡಿದ್ದಾಳೆ. ಇನ್ನೊಂದೆಡೆ ಸಹನಾಗೆ ಕೋರ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಸಹನೆಯಿಂದ "ನನಗೆ ಅತ್ತೆ ಹಾಗೂ ಮುರಳಿ ಅಕ್ಕನ ಗಂಡ ಬಹಳ ಹಿಂಸೆ ನೀಡಿರುವುದು ನಿಜ. ಆದರೆ, ಮುರಳಿಯವರು ನನಗೆ ಯಾವುದೇ ಕಾರಣಕ್ಕೂ ಕೂಡ ತೊಂದರೆ ನೀಡಿಲ್ಲ. ಅವರ ಮನೆಯವರ ಜೊತೆ ನನಗೆ ಬದುಕಲು ಆಗುತ್ತಿಲ್ಲ" ಉತ್ತರ ನೀಡುತ್ತಾಳೆ.

ಇದನ್ನೂ ಓದಿ:  Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್‌ ಹಾಕಿದ ನಟರಾಕ್ಷಸ!

ಕೋರ್ಟ್‌ನಲ್ಲಿ ನ್ಯಾಯಾಧೀಶರು ಅವಾಗ ಮುರಳಿಯನ್ನು "ಇದಕ್ಕೆಲ್ಲ ನೀವು ಏನು ಹೇಳುತ್ತೀರಿ?" ಎಂದು ಪ್ರಶ್ನೆ ಮಾಡಿದರು. ಆಗ ಮುರಳಿ "ನನ್ನ ತಂದೆ ತಾಯಿಗೆ ಕೊಡುತ್ತಿರುವ ಮರ್ಯಾದೆಯನ್ನೂ ನಾನು ಸಹನಾಗೆ ನೀಡುತ್ತಿದ್ದೆ. ಆದರೆ, ಅದನ್ನು ಸಹನಾ ಅವರು ಉಳಿಸಿಕೊಂಡಿಲ್ಲ ಎನ್ನುವುದು ನನ್ನ ನೋವು. ನನ್ನ ತಾಯಿ ಊಟಕ್ಕೆ ವಿಷ ಹಾಕಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಹಾಗೆಯೇ ನನ್ನ ಭಾವ ಇವರನ್ನು ಕಾಮದ ದೃಷ್ಟಿಯಲ್ಲಿ ನೋಡುತ್ತಿದ್ದರು ಎಂದು ಹೇಳುತ್ತಾರೆ. ಆದರೆ ನನಗೆ ನನ್ನ ಅಮ್ಮ ಸರಿಯಾಗಿ ಇದ್ದಾರೆ ಎಂದು ಅನ್ನಿಸುತ್ತಿದೆ. ದೇವರ ಹಾಗೆ ಇರುವ ನನ್ನ ಅಮ್ಮ ಯಾವ ತಪ್ಪೂ ಮಾಡಿರಲು ಸಾಧ್ಯವೇ ಇಲ್ಲ" ಎಂದು ಹೇಳುತ್ತಾನೆ. 

ಕೋರ್ಟ್ ಯಾವತ್ತೂ ಸಾಕ್ಷಿ ಆಧಾರವನ್ನು ಕೇಳುತ್ತಿದ್ದರಿಂದ, ಸಹನಾ ಎಷ್ಟೇ ನಿಜ ಹೇಳಿದರು ಸಾಕ್ಷಿ ಏನಿದೆ? ನಿಮ್ಮಲ್ಲಿ ಎಂದು ಕೋರ್ಟ್ ಹೇಳುತ್ತದೆ. ಇದನ್ನು ಕೇಳಿದ ಸಹನಾಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಅದೇ ವೇಳೆ ಸಹನಾ "ನಾನು ಮೊಬೈಲ್‌ನಲ್ಲಿ ಅವರು ಮಾಡುತ್ತಿದ್ದ ಕಿತಾಪತಿಯನ್ನು ಸೆರೆ ಹಿಡಿಯುತ್ತಿದ್ದೆ. ಆದರೆ ಅದೆಲ್ಲವೂ ಡಿಲೀಟ್ ಆಗಿದೆ" ಎಂದು ಹೇಳುತ್ತಾಳೆ. ಅದೇ ಸಂದರ್ಭದಲ್ಲಿ ಕಂಠಿ ಕೂಡ "ಸಹನಾ ಅವರಿಗೆ ತೊಂದರೆ ಆಗಿರುವುದಂತು ನಿಜ. ಆದರೆ ಅದನ್ನು ಯಾರ ಜೊತೆ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದರು" ಎಂದು ಸಾಕ್ಷಿ ಹೇಳುತ್ತಾನೆ.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಿ ಹಕ್ಕು ಚಲಾಯಿಸಿದ ಸಿನಿರಂಗದ ತಾರೆಯರು!! ಪೋಟೋಸ್‌ ಇಲ್ಲಿವೆ

ಸಹನಾಗೆ ಕೋರ್ಟ್ ಸಾಕ್ಷಿ ಕೇಳಿದಾಗ ಕೊಡಲು ಯಾವ ಆಧಾರ ಇರುವುದಿಲ್ಲ. ಇನ್ನೂ ಸುಮಾ ಅಕ್ಕನ ಫೋನ್ ತೆಗೆದುಕೊಂಡು ಹೋಗಿ ಕಾಳೀ ಹಾಗೂ ಸುಮಾ ಮೊಬೈಲ್‌ನಲ್ಲಿ ಡಿಲೀಟ್ ಆಗಿರುವ ವಿಡಿಯೋವನ್ನು ಮರಳಿ ಪಡೆಯಬಹುದಾ ಎಂದು ಮೊಬೈಲ್ ಅಂಗಡಿಯವರ ಹತ್ತಿರ ಕೇಳುತ್ತಾರೆ. ಮತ್ತೊಂದೆಡೆ ಪುಟ್ಟಕ್ಕ ಕೂಡ ದೇವರ ಬಳಿ ಪ್ರಾರ್ಥನೆ  ಮಾಡುತ್ತಾ "ನನ್ನ ಜೀವನ ಹೀಗಾಯ್ತು. ಆದರೆ, ನನ್ನ ಮಗಳ ಜೀವನ ಹಾಳಾಗಿ ಹೋಗಲು ನಾನು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಹಾಗೆಯೇ ನನ್ನ ಜೀವನವನ್ನ ನೀನು ತೆಗೆದುಕೊಂಡು ನನ್ನ ಮಗಳ ಜೀವನವನ್ನು ಸರಿ ಮಾಡು ದೇವರೇ" ಎಂದು ಕೇಳಿಕೊಳ್ಳುತ್ತಾರೆ. 

ನ್ಯಾಯಾಲಯದಲ್ಲಿ ಜಡ್ಜ್ ವಾದ ವಿವಾದವನ್ನು ಪರಿಶೀಲನೆ ಮಾಡಿದ ನಂತರ ಕೊನೆಗೆ ಅಂತಿಮವಾಗಿ ತೀರ್ಪು ನೀಡುವಾಗ ಸಹನಾ ಕುಸಿದು ಹೋಗುತ್ತಾಳೆ. ನ್ಯಾಯಾಲಯವು ಸಹನಾ ಅವರು ಸುಳ್ಳು ಆರೋಪ ಹೊರಿಸಿದ ಕಾರಣಕ್ಕೆ ಅವರಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುತ್ತದೆಂದು ಕೋರ್ಟ್ ಆದೇಶ ನೀಡುತ್ತದೆ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ ಸಾಕ್ಷಿ ನನ್ನ ಬಳಿ ಇದೆ ಎಂದು ಹೇಳುವ ಧ್ವನಿ ಕೇಳಿಬರುತ್ತದೆ. ಮುಂದೆ ಶಿಕ್ಷೆ ಯಾರಿಗೆ ಆಗುತ್ತದೆ? ಕೋರ್ಟ್‌ ಸಾಕ್ಷಿ ನೋಡಿದ ಬಳಿಕ ತೀರ್ಪು ಬದಲಾಯಿಸುತ್ತಾ? ಇದನ್ನು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News