"ಈ ಹತ್ತು ವರ್ಷಗಳಲ್ಲಿ ರಚಿತ ರಾಮ್‌ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ"..ನಟಿಯ ಕುರಿತು ಸಾಧು ಕೋಕಿಲ ಶಾಕಿಂಗ್‌ ಕಾಮೆಂಟ್‌

Sadhu Kokila: ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್‌ ಕ್ವೀನ್‌ ರಚಿತರಾಮ್‌ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ.   

Written by - Zee Kannada News Desk | Last Updated : Aug 21, 2024, 09:37 AM IST
  • ಸಂಜು ವೆಡ್ಸ್‌ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ.
  • ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದ ಶೂಟಿಂಗ್‌ ಮುಗಿದ ಹಿನ್ನೆಲೆ ಮಂಗಳವಾರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು.
 "ಈ ಹತ್ತು ವರ್ಷಗಳಲ್ಲಿ ರಚಿತ ರಾಮ್‌ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ"..ನಟಿಯ ಕುರಿತು ಸಾಧು ಕೋಕಿಲ ಶಾಕಿಂಗ್‌ ಕಾಮೆಂಟ್‌ title=

Sadhu Kokila: ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್‌ ಕ್ವೀನ್‌ ರಚಿತರಾಮ್‌ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ. 

ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದ ಶೂಟಿಂಗ್‌ ಮುಗಿದ ಹಿನ್ನೆಲೆ ಮಂಗಳವಾರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಚಿತ್ರತಂಡ ಸಿನಿಮಾದ ಶೂಟಿಂಗ್‌ ಅನುಭವ ಹಾಗೂ ಸಿನಿಮಾದ ಕುರಿತು ಹಲವು ವಿಷಯಗಳನ್ನು ಈ ಸಮಯದಲ್ಲಿ ಹಂಚಿಕೊಂಡರು.

ಇದನ್ನೂ ಓದಿ: ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್‌ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?

ಇನ್ನೂ, ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಹಾಸ್ಯನಟ ಸಾಧು ಕೋಕಿಲ ಅವರು ಸಹ ಭಾಗಿಯಾಗಿದ್ದು, " ಈ ಸಿನಿಮಾದಲ್ಲಿ ನಾಗಶೇಕರ್‌ ಅವರ ನಿರ್ದೇಶನ ಇದ್ದು, ಇವರು ಬಹಳ ಪರಿಶ್ರಮ ಪಟ್ಟಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕ ಸಿನಿಮಾಗೆ ಸಾಥ್‌ ನೀಡಿದ್ದು, ಹೊರ ದೇಶಗಳ್ಳಿಯೂ ಸಿನಿಮಾದ ಶೂಟಿಂಗ್‌ ಬಹಳ ಸುಂದರವಾಗಿ ಮೂಡಿ ಬಂದಿದೆ. ಬೇರೆ ದೇಶದಲ್ಲಿ ಸಿನಿಮಾ ಶೂಟಿಂಗ್‌ ಮಾಡಿದ ಕಾರನ ಇದಕ್ಕೆಂದೇ ಲಕ್ಷಾಂತರ ರೂಗಳನ್ನು ಖರ್ಚು ಮಾಡಲಾಗಿದೆ" ಎಂದರು.

"ಇನ್ನೂ ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದಲ್ಲಿ ರಮ್ಯ ಅವರು ಸುಂದರವಾಗಿದ್ದ ಕಾರಣ ಸಿನಿಮಾ ಕೂಡ ಅಷ್ಟೆ ಸುಂದರವಾಗಿ ಮೂಡಿ ಬಂದಿತ್ತು. ಆದರೆ ʻಸಂಜು ವೆಡ್ಸ್‌ ಗೀತಾ-2ʼ ಸಿನಿಮಾದಲ್ಲಿ ರಚಿತರಾಮ್‌ ನಟಿಸಿದ್ದು, ನಾನು ಈ ಎಂಟತ್ತು ವರ್ಷಗಳಳಿ ರಚಿತರಾಮ್‌ ಅವರಂತೆ ಸುಂದರವಾಗಿ ಇರುವ ನಾಯಕಿಯರನ್ನು ನೋಡಲೇ ಇಲ್ಲ, ನೀವೇನಾದರೂ ನೋಡಿದ್ದೀರಾ..?" ʻಸಂಜು ವೆಡ್ಸ್‌ ಗೀತಾ-2ʼ ಎಂದು ಸಾಧು ಕೋಕಿಲ ಪ್ರಶ್ನೆ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News