ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ ವಿಜಯಲಕ್ಷ್ಮಿ ತಾಯಿ ನಿಧನ

ನನ್ನ ಬಳಿ ಅಗತ್ಯ ಚಿಕಿತ್ಸೆ ಪಡೆಯಲು ಹಣವಿಲ್ಲ, ಯಾರಾದರೂ ಹಣದ ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ನಟಿ ವಿಜಯಲಕ್ಷ್ಮಿ ಬೇಡಿಕೊಂಡಿದ್ದರು.

Written by - Zee Kannada News Desk | Last Updated : Sep 27, 2021, 08:34 PM IST
  • ಖ್ಯಾತ ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯಾ ಸುಂದರಂ ನಿಧನರಾಗಿದ್ದಾರೆ
  • ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 75 ವರ್ಷ ವಯಸ್ಸಾಗಿತ್ತು
  • ಅಕ್ಕ-ಅಮ್ಮ ಮತ್ತು ತಮ್ಮ ಆರೋಗ್ಯ ಸರಿಯಿಲ್ಲ, ದಯವಿಟ್ಟು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದ ನಟಿ
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ ವಿಜಯಲಕ್ಷ್ಮಿ ತಾಯಿ ನಿಧನ title=
ಖ್ಯಾತ ನಟಿ ವಿಜಯಲಕ್ಷ್ಮಿ ತಾಯಿ ನಿಧನ (Photo Courtesy: @Zee News)

ಬೆಂಗಳೂರು: ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ(Vijayalakshmi) ಅವರ ತಾಯಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಲಕ್ಷ್ಮಿಯವರ ತಾಯಿ ವಿಜಯಾ ಸುಂದರಂ(75) ಇಂದು (ಸೆ.27) ಮೃತಪಟ್ಟಿದ್ದಾರೆ ಅಂತಾ ವರದಿಯಾಗಿದೆ.  

ಕಳೆದ ಕೆಲವು ದಿನಗಳ ಹಿಂದೆ ‘ನಮ್ಮ ತಾಯಿಯ ಆರೋಗ್ಯ ಸರಿಯಿಲ್ಲ, ನಮ್ಮ ಅಕ್ಕನ ಆರೋಗ್ಯವೂ ಹದಗೆಟ್ಟಿದೆ, ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ನಟಿ ವಿಜಯಲಕ್ಷ್ಮಿ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ ಇಂದು ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರ ತಾಯಿ ವಿಜಯಾ ಸುಂದರಂ(Vijaya Sundaram) ಸೋಮವಾರ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಗಾಂಧಿನಗರದ ಸಂತೃಪ್ತಿ ಹೊಟೇಲ್​​ನಲ್ಲಿ ವಿಜಯಲಕ್ಷ್ಮಿ ಕುಟುಂಬ ವಾಸವಾಗಿತ್ತು ಅಂತಾ ತಿಳಿದುಬಂದಿದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಗೊತ್ತಾ? ಭವಿಷ್ಯ ನುಡಿದ ಜ್ಯೋತಿಷಿ..!

ಸದ್ಯ ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಅವರ ಸಹೋದರಿ ಉಷಾ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಸ್ವತಃ ವಿಜಯಲಕ್ಷ್ಮಿಯವರೇ ಹೇಳಿಕೊಂಡಿದ್ದರು. ‘ನನ್ನ ಬಳಿ ಅಗತ್ಯ ಚಿಕಿತ್ಸೆ ಪಡೆಯಲು ಹಣವಿಲ್ಲ. ಯಾರಾದರೂ ಹಣದ ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ಲೈವ್ ಬಂದು ನಟಿ ಬೇಡಿಕೊಂಡಿದ್ದರು.

‘ನನ್ನ ಮತ್ತು ಅಕ್ಕನ ಆರೋಗ್ಯ ತುಂಬಾ ಗಂಭೀರವಾಗಿದೆ. ನಾನು ಯಾವಾಗ ಬೇಕಾದರೂ ಸಾವನ್ನಪ್ಪಬಹುದು. ಹೀಗಾಗಿ ನನಗೆ ಹಣದ ಸಹಾಯ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ’ ಅಂತಾ ವಿಜಯಲಕ್ಷ್ಮಿ ಕನ್ನಡ ಚಿತ್ರರಂಗ(Kannada Film Industry)ದ ಪ್ರಮುಖ ನಟರ ಬಳಿ ಮನವಿ ಮಾಡಿಕೊಂಡಿದ್ದರು.   

ಇದನ್ನೂ ಓದಿ: ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಗಾಸಿಪ್: ಬೋಲ್ಡ್ ನಟನೆಯಿಂದ ಹಾಳಾಯ್ತಾ ಸಂಬಂಧ?

‘ಕೊರೊನಾ ಸೋಂಕಿ(CoronaVirus)ನಿಂದ ನಾನು ತುಂಬಾ ನರಳುತ್ತಿದ್ದೇನೆ. 5 ದಿನಗಳಿಂದ ನನಗೆ ಜ್ವರ ಬಂದಿದೆ. ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇವೆ. ನಾನು ಕೊವಿಡ್​ ಸೆಂಟರ್​ಗೆ ಹೋಗಬೇಕು. ಈ ಬಗ್ಗೆ ಕಲಾವಿದರ ಸಂಘಕ್ಕೂ ಮನವಿ ಮಾಡಿದ್ದೇನೆ. ನನಗೆ ಸಹಾಯ ಮಡುವಂತೆ ಎಲ್ಲರ ಜೊತೆ ಮಾತನಾಡಿರೂ ಪ್ರಯೋಜನವಾಗಿಲ್ಲ. ನನಗೆ ಕೊವಿಡ್​ ನ್ಯುಮೋನಿಯಾ ಅಟ್ಯಾಕ್​ ಆಗಿದೆ. ನಾನು ಉಳಿಯುವ ರೀತಿ ಕಾಣುತ್ತಿಲ್ಲ. 5 ದಿನದಿಂದ ನಾನು ಸರಿಯಾಗಿ ಊಟ ಕೂಡ ಮಾಡಿಲ್ಲ. ನಾನು ಎಲ್ಲಿಯೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದೇನೆ. ನನ್ನ ಅಕ್ಕ-ಅಮ್ಮನ ಆರೋಗ್ಯವೂ ಸರಿಯಿಲ್ಲ. ಹೀಗಾಗಿ ಅವರಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣವಿಲ್ಲ. ಯಾರಾದರೂ ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ನಟಿ ವಿಜಯಲಕ್ಷ್ಮಿ ಬೇಡಿಕೊಂಡಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News