Covid 3rd Wave: ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ರಾಧೆ ಶ್ಯಾಮ್’ಗಿಲ್ಲ ಆತಂಕ!

'ರಾಧೆ-ಶ್ಯಾಮ್’ ಚಿತ್ರತಂಡ ಶನಿವಾರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರಲ್ಲಿ ಸಿನಿಮಾ ಬಿಡುಗಡೆಯ ದಿನಾಂಕ ಜನವರಿ 14 ಎಂದು ಪ್ರಕಟಿಸಿದೆ.

Written by - Zee Kannada News Desk | Last Updated : Jan 2, 2022, 10:29 AM IST
  • ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ
  • ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆಗೆ ನಿರ್ದೇಶಕ-ನಿರ್ಮಾಪಕರ ಹಿಂದೇಟು
  • ಜ.7ರಂದು ಬಿಡುಗಡೆಯಾಗಬೇಕಿದ್ದ ‘ಆರ್‌ಆರ್‌ಆರ್‌’ ಬಿಡುಗಡೆ ಮುಂದೂಡಿಕೆ
Covid 3rd Wave: ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ, ‘ರಾಧೆ ಶ್ಯಾಮ್’ಗಿಲ್ಲ ಆತಂಕ! title=
‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ

ನವದೆಹಲಿ: ಖ್ಯಾತ ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌’(RRR) ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿಕೆ ಮಾಡಿದೆ. ದೇಶದಲ್ಲಿ ದಿಢೀರ್ ಆಗಿ ಒಮಿಕ್ರಾನ್ ರೂಪಾಂತರಿ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, 3ನೇ ಅಲೆಯ ಆತಂಕ ಶುರುವಾಗಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ.

 ಕೋವಿಡ್-19(COVID-19) ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಚಿತ್ರೋದ್ಯಮವು ಆತಂಕಕ್ಕೆ ಒಳಗಾಗಿದೆ. ಬಿಡುಗಡೆಗೆ ಸಿದ್ಧವಾಗಿದ್ದ ಬಿಗ್ ಬಜೆಟ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ದೇಶಕರು-ನಿರ್ಮಾಪಕರು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಸಿನಿಮಾಗಳು ಬಿಡುಗಡೆ​ ದಿನಾಂಕವನ್ನು ಮುಂದೂಡಿಯಾಗುತ್ತಿವೆ.

ಇದನ್ನೂ ಓದಿ: ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲು, ಕಾರಣ ಇದೇ ನೋಡಿ.!

ಕೆಲ ರಾಜ್ಯಗಳು ಚಿತ್ರಮಂದಿಗಳನ್ನು ಬಂದ್ ಮಾಡುವುದು ಸೇರಿದಂತೆ ಕಠಿಣ ಕೋವಿಡ್-19 ನಿರ್ಬಂಧಗಳ ಜೊತೆಗೆ ಲಾಕ್ ಡೌನ್ ಹೇರಿಕೆಯ ಚಿಂತನೆ ನಡೆಸಿವೆ. ಈ ಕಾರಣದಿಂದ ಜನವರ 7ರಂದು ಬಿಡುಗಡೆಗೆ ಸಿದ್ಧವಾಗಿದ್ದ ‘ಆರ್​ಆರ್​ಆರ್​’ ಸಿನಿಮಾ(RRR Movie Postponed)ವನ್ನು ಅನಿವಾರ್ಯವಾಗಿ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

ಇಂದು(ಜ.2) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ‘ಆರ್​ಆರ್​ಆರ್​’ ಪ್ರಿರಿಲೀಸ್(RRR pre-release event)ಕಾರ್ಯಕ್ರಮ ನಡೆಸಲು ಚಿತ್ರತಂಡವು ನಿರ್ಧರಿಸಿತ್ತು. ರಾಮ್ ಚರಣ್ ತೇಜ, ಜ್ಯೂನಿಯರ್ NTR, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಇಡೀ ಚಿತ್ರತಂಡವೇ ಸಿಲಿಕಾನ್ ಸಿಟಿಗೆ ಆಗಮಿಸಲು ಸಜ್ಜಾಗಿತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿರುವುದರಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ 500 ಕೋಟಿ ಮೌಲ್ಯದ ಪಚ್ಚೆ ಶಿವಲಿಂಗ..!

‘ರಾಧೆ-ಶ್ಯಾಮ್’ಗಿಲ್ಲ ಕೊರೊನಾ ಆಂತಕ..!

ಕೊರೊನಾ ಕಾರಣದಿಂದ ‘ಆರ್​ಆರ್​ಆರ್​’ ಸಿನಿಮಾ(RRR Movie) ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಆದರೆ ‘ರಾಧೆ-ಶ್ಯಾಮ್’(Radhe Shyam) ಚಿತ್ರತಂಡ ಶನಿವಾರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರಲ್ಲಿ ಸಿನಿಮಾ ಬಿಡುಗಡೆಯ ದಿನಾಂಕ ಜನವರಿ 14 ಎಂದು ಪ್ರಕಟಿಸಿದೆ. ಹೀಗಾಗಿ ‘ರಾಧೆ-ಶ್ಯಾಮ್’ಗೆ ಕೊರೊನಾ ಆತಂಕವಿಲ್ಲವೆಂದು ಚಿತ್ರದ ನಿರ್ದೇಶಕ-ನಿರ್ಮಾಪಕರು ಹೇಳಿದಂತಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾದರೆ ಅಥವಾ ಲಾಕ್ ಡೌನ್ ಆದರೆ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ‘ರಾಧೆ-ಶ್ಯಾಮ್’ ಕೂಡ ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.  ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News