ರಾಕಿಂಗ್‌ ಸ್ಟಾರ್‌ ಯಶ್‌ಗೂ ಬಂತು ರಾಮಮಂದಿರ ಉದ್ಘಾಟನೆಗೆ ಆಹ್ವಾನ!

Ram Mandir Inauguration: ಅಯೋಧ್ಯೆಯಲ್ಲಿ  ಜನವರಿ 22 ರಂದು ನಡೆಯಲ್ಲಿರುವ ರಾಮಮಂದಿರದ ಉದ್ಘಾಟನೆ  ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕನ್ನಡದ ಮತ್ತೋರ್ವ ಪ್ಯಾನ್ ಇಂಡಿಯಾ ಸ್ಟಾರ್ ಯಶ್‌ಗೆ ಆಹ್ವಾನ ಬಂದಿದೆ.  

Written by - Zee Kannada News Desk | Last Updated : Dec 26, 2023, 12:55 PM IST
  • ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ಭಾಗಿಯಾಗಲಿದ್ದಾರೆ.
  • ಈ ಹಿಂದೆ ಆಹ್ವಾನ ನಿದ್ದಿದ್ದ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿ ಮಾತ್ರ ಇದ್ದು, ಜೊತೆಗೆ ದಕ್ಷಿಣದ ಕೆಲವೇ ಕೆಲವು ನಟರಿಗೆ ಕಾರ್ಯಕ್ರಕ್ಕೆ ಆಹ್ವಾನ ನೀಡಲಾಗಿತ್ತು.
  • ನಟ ರಿಷಬ್ ಶೆಟ್ಟಿ ಜೊತೆಗೆ ಯಶ್‌ ರಾಮ ಮಂದಿರ ಉದ್ಘಾಟನೆಗೆ ತೆರಳುವುದು ಖಚಿತವಾಗಿದೆ.
ರಾಕಿಂಗ್‌ ಸ್ಟಾರ್‌ ಯಶ್‌ಗೂ ಬಂತು ರಾಮಮಂದಿರ ಉದ್ಘಾಟನೆಗೆ ಆಹ್ವಾನ!  title=

Yash Got Invitation For Ram Temple Inauguration: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ಭಾಗಿಯಾಗಲಿದ್ದಾರೆ. ಈ ಹಿಂದೆ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿತ್ತು. ಇದರ ಬೆನ್ನಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್‌ಗೂ ಆಹ್ವಾನ ಬಂದಿದೆ. 

ಈ ಹಿಂದೆ ಆಹ್ವಾನ ನಿದ್ದಿದ್ದ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿ ಮಾತ್ರ ಇದ್ದು, ಜೊತೆಗೆ ದಕ್ಷಿಣದ ಕೆಲವೇ ಕೆಲವು ನಟರಿಗೆ ಕಾರ್ಯಕ್ರಕ್ಕೆ ಆಹ್ವಾನ ನೀಡಲಾಗಿತ್ತು.ಇದೀಗ ರಿಷಬ್‌ ಜೊತೆಗೆ ಯಶ್‌ಗೂ ಕೂಡ ಈ ಆಹ್ವಾನ ಬಂದಿದ್ದು, ರಾಕಿಂಗ್‌ ಸ್ಟಾರ್‌ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ನಟ ಯಶ್ ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಈತನಿಗೆ ಎಲ್ಲಾ ಕಡೆಗಳಲ್ಲೂ ಫ್ಯಾನ್ಸ್ ಇದ್ದಾರೆ. ಹೀಗಾಗಿ ಸ್ಟಾರ್‌ಡಂ ಹೆಚ್ಚಾಗಿದ್ದು, ದೇಶದ ಪ್ರಮುಖ ಸೆಲಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ನಟ ರಿಷಬ್ ಶೆಟ್ಟಿ ಜೊತೆಗೆ ಯಶ್‌ ರಾಮ ಮಂದಿರ ಉದ್ಘಾಟನೆಗೆ ತೆರಳುವುದು ಖಚಿತವಾಗಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಮಗಳ ಫೇಸ್ ರಿವೀಲ್ ಮಾಡಿದ ಆಲಿಯಾ-ರಣಬೀರ್: ಉಫ್… ಥೇಟ್ ದಂತದ ಗೊಂಬೆಯೇ!

ಇದಕ್ಕೂ ಮುಂಚೆ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ರಜನಿಕಾಂತ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ, ಮೋಹನ್ ಲಾಲ್, ಧನುಷ್ ಮತ್ತು ರಿಷಬ್ ಶೆಟ್ಟಿ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಸದ್ಯ ಮತ್ತಷ್ಟು ಸೆಲಬ್ರಿಟಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. 

ಈ ಹಿಂದೆ ನಟ ಯಶ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸಕತ್ ವೈರಲ್ ಆಗಿದ್ದು, ಫೇಸ್‌ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ನಟ ಯಶ್ ಯಾವುದೇ ಮಾಹಿತಿ ನೀಡದಿರುವುದಕ್ಕೆ, ಹಲವು ಫ್ಯಾಕ್ಟ್‌ಚೆಕ್ ವೆಬ್ಸೈಟ್‌ಗಳು ಇದರ ಸತ್ಯಾಸತ್ಯತೆ ಕಂಡು ಹಿಡಿದು ಇದು ಸುಳ್ಳು ಎಂದು ಹೇಳಿದ್ದರು. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಸೆಲಬ್ರಿಟಿಗಳು ಸೇರಿದಂತೆ ಜನ ಸಾಮಾನ್ಯರು ಕೂಡ ಉದಾರವಾಗಿ ದೇಣಿಗೆ ನೀಡಿದ್ದಾರೆ. 

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News