Video: ಗಡ್ಡ ಇಲ್ಲದೆ ಫುಲ್ ಹ್ಯಾಂಡ್ಸಂ ಆಗ್ಬಿಟ್ರು ನಮ್ಮ ಯಶ್! ರಾಧಿಕಾ ಈಗ ಫುಲ್ ಖುಷ್

ಗಡ್ಡ ಇಲ್ಲದ ಮುದ್ದು ಯಶ್ ಕಂಡು ಪತ್ನಿ ರಾಧಿಕಾ ಪಂಡಿತ್ 'ವೆಲ್ ಕಂ ಬ್ಯಾಕ್' ಎಂದಿದ್ದಾರೆ. ಅಷ್ಟೇ ಅಲ್ಲ, ಯಶ್ ನ್ಯೂ ಲುಕ್ ಬಗ್ಗೆ ರಾಧಿಕ ತಮ್ಮ ಸಂತೋಷವನ್ನೂ ಹಂಚಿಕೊಂಡಿದ್ದಾರೆ. 

Last Updated : Aug 25, 2018, 12:12 PM IST
Video: ಗಡ್ಡ ಇಲ್ಲದೆ ಫುಲ್ ಹ್ಯಾಂಡ್ಸಂ ಆಗ್ಬಿಟ್ರು ನಮ್ಮ ಯಶ್! ರಾಧಿಕಾ ಈಗ ಫುಲ್ ಖುಷ್ title=

ಬೆಂಗಳೂರು: ಕಳೆದ 2 ವರ್ಷಗಳಿಂದ ಗಡ್ಡ, ಕೂದಲು ಬೆಳೆಸಿ ಕೆಜಿಎಫ್ ಚಿತ್ರಕ್ಕಾಗಿ ನೂತನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮ ಹಿಂದಿನ ಗೆಟಪ್'ಗೆ ಹಿಂದಿರುಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಆಸೆಯಂತೆ ತಮ್ಮ ಗಡ್ಡ, ಕೂದಲು ಕತ್ತರಿಸಿ ಸೂಪರ್ ಹ್ಯಾಂಡ್ಸಂ ಆಗಿ ಕಾಣ್ತಿದ್ದಾರೆ.

ಕೆಜಿಎಫ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಇದೀಗ ನೂತನ ಚಿತ್ರ 'ಕಿರಾತಕ-2'ಗೆ ಯಶ್ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ತಮ್ಮ ಈ ಹಿಂದಿನ ಸೂಪರ್ ಗೆಟಪ್'ಗೆ ಮರಳಿರುವ ಯಶ್, ಎರಡು ವರ್ಷಗಳಿಂದ ಬಹಳ ಕಷ್ಟಪಟ್ಟು ಬೆಳೆಸಿದ್ದ ಗಡ್ಡ ಹಾಗೂ ಉದ್ದ ಕೂದಲನ್ನು ಬಹಳ ಬೇಸರದಿಂದಲೇ ಕತ್ತರಿಸಿದ್ದಾರೆ. ಈ ಕಟ್ಟಿಂಗ್ ಸೆಶನ್ ಅನ್ನು ಪತ್ನಿ ರಾಧಿಕಾ ಪಂಡಿತ್ ಅವರ ಉಪಸ್ಥಿತಿಯಲ್ಲಿ ವೀಡಿಯೋ ಮಾಡಲಾಗಿದ್ದು, ಯಶ್ ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಡ್ಡ ಇಲ್ಲದ ಮುದ್ದು ಯಶ್ ಕಂಡು ಪತ್ನಿ ರಾಧಿಕಾ ಪಂಡಿತ್ 'ವೆಲ್ ಕಂ ಬ್ಯಾಕ್' ಎಂದಿದ್ದಾರೆ. ಅಷ್ಟೇ ಅಲ್ಲ, ಯಶ್ ನ್ಯೂ ಲುಕ್ ಬಗ್ಗೆ ರಾಧಿಕ ತಮ್ಮ ಸಂತೋಷವನ್ನೂ ಹಂಚಿಕೊಂಡಿದ್ದಾರೆ. 

ಸ್ಯಾಂಡಲ್​ವುಡ್​ನ ರಾಕಿಂಗ್​ ಜೋಡಿ ಯಶ್​ ರಾಧಿಕಾ, ಕಳೆದ ತಿಂಗಳು ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಗರ್ಭಿಣಿ ಆಗಿರುವ ರಾಧಿಕಾ ಪಂಡಿತ್ ಯಶ್ ಜೋತೆ ಸಖತ್ ಮುದ್ದಾಗಿ ಕಾಣ್ತಿದ್ದಾರೆ. 

Trending News