ಕಾಂತಾರ 2 ಗಾಗಿ ರಿಷಬ್ ಶೆಟ್ಟಿ ಇಷ್ಟೊಂದು ಕೆಜಿ ತೂಕ ಕಳೆದುಕೊಂಡ್ರಾ?

Kantara 2 : ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದೆ. 10 ಸೈಮಾ 2023 ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ. 

Written by - Chetana Devarmani | Last Updated : Sep 19, 2023, 04:12 PM IST
  • ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ
  • ಕಾಂತಾರ 2 ಗಾಗಿ ಶುರುವಾಯ್ತು ಸಿದ್ಧತೆ
  • ತೂಕ ಕಳೆದುಕೊಂಡ ರಿಷಬ್‌ ಶೆಟ್ಟಿ
ಕಾಂತಾರ 2 ಗಾಗಿ ರಿಷಬ್ ಶೆಟ್ಟಿ ಇಷ್ಟೊಂದು ಕೆಜಿ ತೂಕ ಕಳೆದುಕೊಂಡ್ರಾ?   title=

Kantara 2 Movie Updates : ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರವು 2022 ರ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಯಿತು. ಇದೇ ಸಿನಿಮಾದಿಂದ ರಿಷಬ್‌ ಶೆಟ್ಟಿ ಭಾರತದಾದ್ಯಂತ ಮನ್ನಣೆಯನ್ನು ಪಡೆದರು. ಚಿತ್ರವು ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಯಿತು. ನಂತರ ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಯಿತು. ಕಾಂತಾರದ ದೊಡ್ಡ ಯಶಸ್ಸಿನ ನಂತರ, ನಿರ್ಮಾಪಕರು ಕಾಂತಾರಾ 2 ಮಾಡುವುದಾಗಿ ಘೋಷಿಸಿದರು. ನಟ ರಿಷಬ್ ಶೆಟ್ಟಿ ಈಗಾಗಲೇ ಮತ್ತೊಮ್ಮೆ ಕಂಬಳ ಚಾಂಪಿಯನ್ ಪಾತ್ರವನ್ನು ಹಾಕಲು ಸಜ್ಜಾಗುತ್ತಿದ್ದಾರೆ. ಈ ಪಾತ್ರಕ್ಕೆ ಸರಿಹೊಂದುವಂತೆ ಪ್ರಮುಖ ದೈಹಿಕ ತರಬೇತಿಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಹೊಸ ಫೋಟೊಶೂಟ್‌ನಲ್ಲಿ ನಕ್ಷತ್ರದಂತೆ ಮಿನುಗಿದ ʼಮುಂಗಾರು ಮಳೆ 2ʼ ಖ್ಯಾತಿಯ ನೇಹಾ ಶೆಟ್ಟಿ 

ಹೆಚ್ಚಿನ ನಿರೀಕ್ಷೆಗಳೊಂದಿಗೆ, ರಿಷಬ್ ಶೆಟ್ಟಿ ಕಂಬಳ ಚಾಂಪಿಯನ್ ಪಾತ್ರಕ್ಕೆ ಸರಿಹೊಂದುವಂತೆ ದೊಡ್ಡ ತೂಕ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಕಾಂತಾರ ಪ್ರೀಕ್ವೆಲ್‌ನಲ್ಲಿ ರಿಷಬ್ ತೆಳ್ಳಗೆ ಕಾಣುವ ಅಗತ್ಯವಿದೆ. ಹೀಗಾಗಿ, ಪ್ರಮುಖ ದೈಹಿಕ ತರಬೇತಿ ಮತ್ತು ಆಹಾರದ ನಿರ್ಬಂಧಗಳಿಗೆ ಒಳಗಾಗಿದ್ದಾರೆ. ತನ್ನ ಪಾತ್ರಕ್ಕಾಗಿ ಸುಮಾರು 11 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಕಾಂತಾರ ಚಿತ್ರವನ್ನು ಸುಮಾರು 16 ಕೋಟಿ ರೂಪಾಯಿಗಳ ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಚಿತ್ರದ ನಿರ್ಮಾಪಕರು ಈಗ ಪ್ರೇಕ್ಷಕರಿಗೆ ಭವ್ಯವಾದ ಸಿನಿಮೀಯ ಅನುಭವವನ್ನು ನೀಡಲು ಉತ್ಸುಕರಾಗಿದ್ದಾರೆ. ವರದಿಯ ಪ್ರಕಾರ, ಕಾಂತಾರ 2 ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗಲಿದೆ.  

ರಿಷಬ್ ಶೆಟ್ಟಿ ಮತ್ತೊಮ್ಮೆ ಕಥೆಯನ್ನು ಬರೆದಿದ್ದಾರೆ. ಈ ಕತೆ ಬಹಳಷ್ಟು ಆಕರ್ಷಕವಾಗಿದೆ ಎಂದು ಹಲವಾರು ವರದಿಗಳು ಬಹಿರಂಗಪಡಿಸಿವೆ. 

ಇದನ್ನೂ ಓದಿ : ಅತಿಲೋಕ ಸುಂದರಿಯ ಅಚ್ಚು..! ಮೋಡಿ ಮಾಡುತ್ತಿವೆ ಜಾನ್ವಿ ಫೋಟೋಸ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

Trending News