ಮುಂಬೈ: ಬಾಲಿವುಡ್ ನಟಿ, ಅತಿಲೋಕ ಸುಂದರಿ, ಶ್ರೀದೇವಿ ಪ್ರಜ್ಞೆ ಅವರು ಪ್ರಜ್ಞೆ ಕಳೆದುಕೊಂಡ ನಂತರ ಮೃತಪಟ್ಟಿರುವುದಾಗಿ ದುಬೈ ಪೊಲೀಸರು ತಿಳಿಸಿದ್ದು, ಮೃತ ದೇಹವನ್ನು ಹಸ್ತಾಂತರಿಸುವುದು ತಡವಾಗಲಿದೆ ಎಂದು ತಿಳಿದುಬಂದಿದೆ.
ದಿವಂಗತ ನಟಿಯ ಕುಟುಂಬದ ಸದಸ್ಯರು ಮತ್ತು ಭಾರತೀಯ ಅಧಿಕಾರಿಗಳು ಮೃತ ದೇಹವನ್ನು ಭಾರತಕ್ಕೆ ತರಲು ಅಗತ್ಯವಾದ ಪ್ರಮಾಣಪತ್ರಗಳಿಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸಂಬಂಧ ತೆಗೆದುಕೊಳ್ಳಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರಕಾರಿ ಅಭಿಯೋಜಕರಿಗೆ ದುಬೈ ಪೊಲೀಸರು ವಹಿಸಿದ್ದಾರೆ. ಮೃತದೇಹವನ್ನು ಇಂದು ಹಸ್ತಾಂತರಿಸುವುದು ಕಷ್ಟಸಾಧ್ಯವಿದ್ದು, ಸ್ವದೇಶಕ್ಕೆ ಬರುವುದು ಮತ್ತಷ್ಟು ತಡವಾಗಲಿದೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ರಾಯಭಾರ ಮತ್ತು ದೂತಾವಾಸವು ಶ್ರೀದೇವಿ ಅವರ ಮೃತದೇಹವನ್ನು ಪಡೆಯುವ ವಿಚಾರದಲ್ಲಿ ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಹತ್ತಿರದ ಸಂಬಂಧಿ ಮೊಹಿತ್ ಮಾರ್ವಾ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ಅವರು ಬುಧವಾರ ದುಬೈಗೆ ಶ್ರೀದೇವಿ ತೆರಳಿದ್ದರು. ಅಲ್ಲಿನ ಹೋಟೆಲ್ನ ಸ್ನಾನಗೃಹದಲ್ಲಿ ಫೆ.24ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.