Karnataka Election 2023: ʻಬಂದೆ ಬಿಡ್ತು ಊರಬ್ದಂಗೆ ನಡೆಯೋ ಎಲೆಕ್ಷನ್ನು..ʼ ಉಪೇಂದ್ರ ಧ್ವನಿಯಲ್ಲಿ ಕೇಳಿ ಚುನಾವಣೆ ಸಾಂಗ್‌.!

Karnataka Election 2023: ವಿ.ಮನೋಹರ್ ನಿರ್ದೇಶಿಸಿರುವ ದರ್ಬಾರ್‌ ಸಿನಿಮಾನದ ಎಲೆಕ್ಷನ್‌ ಸಾಂಗ್‌ ಎಲ್ಲೆಡೆ ವೈರಲ್‌ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯದ ಕುರಿತಾಗಿರುವ, ವಿಡಂಬನಾತ್ಮಕ ಸಾಹಿತ್ಯ ಇದರಲ್ಲಿದೆ.   

Written by - Chetana Devarmani | Last Updated : Apr 15, 2023, 12:23 PM IST
  • ʻಬಂದೆ ಬಿಡ್ತು ಊರಬ್ದಂಗೆ ನಡೆಯೋ ಎಲೆಕ್ಷನ್ನು..ʼ
  • ಉಪೇಂದ್ರ ಧ್ವನಿಯಲ್ಲಿ ಕೇಳಿ ಚುನಾವಣೆ ಸಾಂಗ್‌.!
Karnataka Election 2023: ʻಬಂದೆ ಬಿಡ್ತು ಊರಬ್ದಂಗೆ ನಡೆಯೋ ಎಲೆಕ್ಷನ್ನು..ʼ ಉಪೇಂದ್ರ ಧ್ವನಿಯಲ್ಲಿ ಕೇಳಿ ಚುನಾವಣೆ ಸಾಂಗ್‌.! title=

Karnataka Election 2023: ಎಲ್ಲೆಲ್ಲೂ ಚುನಾವಣೆ ಕಾವು ಜೋರಾಗಿದೆ. ಅಖಾಡ ರಂಗೇರಿದೆ. ಜನರ ಮನವೊಲಿಸಿ ಮತಬೇಟೆಯಾಡಲು ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ. ಪಕ್ಷಗಳು ಮತದಾರನ ಓಲೈಸಲು ರಣತಂತ್ರ ಹೆಣೆಯುತ್ತಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿ, ಬಂಡಾಯದ ಬಿಸಿ ಹೆಚ್ಚುತ್ತಿದೆ. ಚುನಾವಣಾ ಕಣದ ಫೈಲ್ವಾನರು ಸಜ್ಜಾಗಿದ್ದು, ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಎಲೆಕ್ಷನ್‌ ರಾಗ ಕೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯದ ಕುರಿತಾಗಿರುವ, ವಿಡಂಬನಾತ್ಮಕ ಕಥಾಹಂದರದ ಚಿತ್ರ ದರ್ಬಾರ್. 

ಇದನ್ನೂ ಓದಿ : ಈ ಖ್ಯಾತ ನಟನೊಂದಿಗೆ ನಿಶ್ಚಯವಾಗಿತ್ತು ಹೇಮಾ ಮಾಲಿನಿ ಮದುವೆ! ಸಂಬಂಧ ಮುರಿದು ಬಿದ್ದಿದ್ಯಾಕೆ?

ಸತೀಶ್‌ ಈ ಸಿನಿಮಾದಲ್ಲಿ ನಾಯಕ ನಟರಾದ ಚಿತ್ರವನ್ನು, ವಿ.ಮನೋಹರ್ ನಿರ್ದೇಶಿಸಿದ್ದಾರೆ. ಉಪೇಂದ್ರ ದನಿಯಾಗಿರುವ ಚುನಾವಣೆ ವಿಶ್ಲೇಶಿಸುವ ವಿಶೇಷ ಹಾಡು ಎಲ್ಲೆಡೆ ವೈರಲ್‌ ಆಗುತ್ತಿದೆ. ಚುನಾವಣೆ ಪ್ರಕ್ರಿಯೆಯನ್ನು ವಿಡಂಬನಾತ್ಮಕವಾಗಿ ಈ ಹಾಡಿನಲ್ಲಿ ಬಣ್ಣಿಸಿದ್ದಾರೆ. ಇದಕ್ಕೆ ಉಪೇಂದ್ರ ಧ್ವನಿಯಾಗಿದ್ದಾರೆ.

ಹಾಡು ಎಲೆಕ್ಷನ್ ರಾಜಕೀಯದ ಬಗ್ಗೆ ವಿವರಿಸುತ್ತದೆ. ಚುನಾವಣೆ ಹತ್ತಿರದಂತೆ ಪ್ರಚಾರ ಪ್ರಕ್ರಿಯೆಗಳು ಜೋರಾಗಿವೆ. ಈಗ ಚುನಾವಣೆ ಬಗ್ಗೆಯೇ ನಟ ಉಪೇಂದ್ರ ಹಾಡೊಂದನ್ನು ಹಾಡಿದ್ದಾರೆ. ಚುನಾವಣೆ ಸಮೀಪಿಸಿದ ಈ ದಿನಗಳಲ್ಲಿ ಈ ಹಾಡು ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : Prabhutva: ಪ್ರಭುತ್ವ ಸಿನಿಮಾದ ಹಿಂದಿ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News