ರಿಯಲ್‌ ಸ್ಟಾರ್‌ ಕನಸು ಏನ್‌ ಗೊತ್ತಾ..! ಫ್ಯಾನ್ಸ್‌ ಮುಂದೆ ಉಪ್ಪಿ ಮನದ ಮಾತು

ಸೂಪರ್‌ ಸ್ಟಾರ್‌ ಉಪೇಂದ್ರ ಅವರು ಸಿನಿಮಾಗಳ ಮೂಲಕವೇ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ರವಾನಿಸಿದ ವ್ಯಕ್ತಿ. ಸದ್ಯ ರಾಜಕೀಯದತ್ತ ಮುಖ ಮಾಡಿರುವ ಅವರು ಪ್ರಜಾಕೀಯವನ್ನು ಪರಿಚಯಿಸಿದ್ದಾರೆ. ಪ್ರಾಜಾಕೀಯದ ಮೂಲಕ ಜನರಿಗೆ ನೈಜ ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುವ ಪರಿಯನ್ನು ತಿಳಿಸಲು ಹೊರಟಿದ್ದಾರೆ. ಇದೀಗ ರಿಯಲ್‌ ಸ್ಟಾರ್‌ ತಮ್ಮ ಕನಸ ಏನು ಎಂಬುವುದರ ಕುರಿತು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

Written by - Krishna N K | Last Updated : Nov 20, 2022, 12:16 PM IST
  • ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಕನಸು ಏನ್‌ ಗೊತ್ತಾ..!
  • ಫ್ಯಾನ್ಸ್‌ ಮುಂದೆ ಬುದ್ಧಿವಂತ ಉಪ್ಪಿಯ ಮನದ ಮಾತು
  • ಪ್ರಜಾಕೀಯದ ಅದ್ಭುತ ಕಲ್ಪನೆಯನ್ನು ಜನರ ಮುಂದಿಟ್ಟ ಸೂಪರ್‌ ಸ್ಟಾರ್‌
ರಿಯಲ್‌ ಸ್ಟಾರ್‌ ಕನಸು ಏನ್‌ ಗೊತ್ತಾ..! ಫ್ಯಾನ್ಸ್‌ ಮುಂದೆ ಉಪ್ಪಿ ಮನದ ಮಾತು title=

ಬೆಂಗಳೂರು : ಸೂಪರ್‌ ಸ್ಟಾರ್‌ ಉಪೇಂದ್ರ ಅವರು ಸಿನಿಮಾಗಳ ಮೂಲಕವೇ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ರವಾನಿಸಿದ ವ್ಯಕ್ತಿ. ಸದ್ಯ ರಾಜಕೀಯದತ್ತ ಮುಖ ಮಾಡಿರುವ ಅವರು ಪ್ರಜಾಕೀಯವನ್ನು ಪರಿಚಯಿಸಿದ್ದಾರೆ. ಪ್ರಾಜಾಕೀಯದ ಮೂಲಕ ಜನರಿಗೆ ನೈಜ ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುವ ಪರಿಯನ್ನು ತಿಳಿಸಲು ಹೊರಟಿದ್ದಾರೆ. ಇದೀಗ ರಿಯಲ್‌ ಸ್ಟಾರ್‌ ತಮ್ಮ ಕನಸ ಏನು ಎಂಬುವುದರ ಕುರಿತು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಹೌದು.. ನಟ ಉಪೇಂದ್ರ ಅವರು ತಮ್ಮ ಕನಸಿನ ಕುರಿತು ಅಭಿಮಾನಿಗಳ ಮುಂದೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಕುರಿತು 16ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ನಿರೂಪಕಿ ಕೇಳಿದ ಕನಸಿನ ಪ್ರಶ್ನೆಗೆ ಉಪ್ಪಿ ನಗುತ್ತಾ... ನನ್ನ ಕನಸು ಏನ್‌ ಗೊತ್ತಾ ಅಂತ ನಿರೂಪಕಿಯ ಕೈ ಹಿಡಿದು ಒಂದು ನಿಮಿಷ ಬನ್ನಿ ಎಂದು ವೇದಿಕೆಯ ಮೇಲಿಂದ ಅಭಿಮಾನಿಗಳತ್ತ ಕರೆದುಕೊಂಡು ಬರುತ್ತಾರೆ.

ಇದನ್ನೂ ಓದಿ:  ಸಾರಥಿಗೆ ಸರ್ಕಾರದಿಂದ ಮತ್ತೊಂದು ಗೌರವ : ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ DBoss ನೇಮಕ

ನಂತರ, ಮಾತು ಆರಂಭಿಸಿದ ಬುದ್ದಿವಂತ, ಅಭಿಮಾನಿಗಳ ಮುಂದೆ ನಿಂತು.. ಅಭಿಮಾನಿಗಳತ್ತ ಕೈ ತೋರಿಸಿ.. ನನ್ನ ಕನಸು ಇದು.. ಸ್ಟೇಜ್‌ ಅನ್ನೋದು, ನಾಯಕ ಅನ್ನೋದು ಹೋಗಿ, ಸ್ಟೇಜ್‌ ಲೆಸ್‌ ನಾಯಕರು ಅನ್ನೋದು ಆಗ್ಬೇಕು. ನಾಯಕನೇ ಇಲ್ಲದಿರುವಂತ ಪ್ರಪಂಚವಾಗ್ಬೇಕು. ಜನರೆಲ್ಲ ಪ್ರಭುಗಳಾಗಬೇಕು. ಅದು ನನ್ನ ಕನಸು. ಅದೇ ಪ್ರಜಾಕೀಯ ಎಂದು ತಮ್ಮ ಅದ್ಭುತ ಪ್ರಜಾಕೀಯದ ಕಲ್ಪನೆಯನ್ನು ಜನರ ಮುಂದಿಟ್ಟರು.

 

ಅಲ್ಲದೆ, ಮತ್ತೇ ನನ್ನ ಮೇಲೆ ಹೋಗಿ ಮೇಲೆ ಹೋಗಿ ಅಂತಾರೆ.. ತಪ್ಪಲ್ವಾ..? ಇದು ಬ್ಯೂಟಿಫುಲ್‌ ಅಂತ ಜನ ನಾಯಕನಾದವನು ಜನರ ಮಧ್ಯ ಇರಬೇಕು ಎನ್ನುವ ಮಾತನ್ನು ಅರ್ಥಗರ್ಭಿತವಾಗಿ ಹೇಳಿದರು. ಉಪ್ಪಿ ಒಂದು ಅದ್ಭುತ ವಿಚಾರಗಳುಳ್ಳ ಮನುಷ್ಯ. ಅದೇಷ್ಟೋ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡಿರುವ ಬುದ್ದಿವಂತ. ಆದ್ರೆ ರಾಜಕೀಯದ ಹಣದಾಟದ ಮುಂದೆ ಸ್ವಲ್ಪ ಹಿಂದೆ ಹೆಜ್ಜೆ ಇಡಬೇಕಾಯಿತು ಅಷ್ಟೇ.. ಪರವಾಗಿಲ್ಲ ನಿಮ್ಮ ಸಂದೇಶಗಳು ಕಾರ್ಯರೂಪಕ್ಕೆ ಒಂದಲ್ಲ ಒಂದು ದಿನ ಬಂದೇ ಬರ್ತಾವೆ ಅಂತಾರೆ ಉಪೇಂದ್ರ ಅವರ ಅಪ್ಪಟ ಅಭಿಮಾನಿಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News