Rashmika Mandanna: ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!

Rashmika Mandanna: ರಶ್ಮಿಕಾ ಮಂದಣ್ಣ ಅವರು ಸಂಜಯ್ ಲೀಲಾ ಬನ್ಸಾಲಿ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿದ್ದಾರೆ. ಬುಧವಾರ ರಾತ್ರಿ ಖ್ಯಾತ ಚಲನಚಿತ್ರ ನಿರ್ದೇಶಕರ ಕಚೇರಿಗೆ ಹೋಗುತ್ತಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. 

Written by - Chetana Devarmani | Last Updated : Dec 29, 2022, 07:20 PM IST
  • ಬುಧವಾರ ರಾತ್ರಿ ಸಂಜಯ್ ಲೀಲಾ ಬನ್ಸಾಲಿ ಭೇಟಿಯಾದ ರಶ್ಮಿಕಾ
  • ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲಿದ್ದಾರಾ ರಶ್ಮಿಕಾ?
  • ನಿರ್ದೇಶಕರ ಕಚೇರಿಗೆ ಹೋಗುತ್ತಿರುವ ವಿಡಿಯೋ ವೈರಲ್‌
Rashmika Mandanna: ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!  title=
ರಶ್ಮಿಕಾ

Rashmika Mandanna: ನಟಿ ರಶ್ಮಿಕಾ ಮಂದಣ್ಣ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಬುಧವಾರ ರಾತ್ರಿ ಖ್ಯಾತ ಚಲನಚಿತ್ರ ನಿರ್ದೇಶಕರ ಕಚೇರಿಗೆ ಹೋಗುತ್ತಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ಆ ನಂತರ ಈ ಊಹಾಪೋಹಗಳು ಹುಟ್ಟಿಕೊಂಡಿವೆ. 

ರಶ್ಮಿಕಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ಹೋಗುವಾಗ ಹಳದಿ ಬಣ್ಣದ ಬಟ್ಟೆ ಮತ್ತು ಕಪ್ಪು ಮಾಸ್ಕ್‌ನ್ನು ಧರಿಸಿದ್ದರು. ಅವರು ಈಗಾಗಲೇ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಚರ್ಚಿಸಿದ್ದಾರೆಯೇ ಅಥವಾ ಅವರು ಭೇಟಿಯಾಗುತ್ತಿರುವುದು ಇದೇ ಮೊದಲಾ ಎಂಬುದು ಸ್ಪಷ್ಟವಾಗಿಲ್ಲ. ಅದೇನೇ ಇರಲಿ, ರಶ್ಮಿಕಾ ಅವರ ಬಾಲಿವುಡ್ ಪ್ರಯಾಣದ ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ರಶ್ಮಿಕಾ ಬಾಲಿವುಡ್‌ನ ಬಿಗ್‌ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ : Viral Video : ಹೆಣ ಎದ್ದು ಸಿಗರೇಟ್‌ ಸೇದಿದ್ರೆ? ಹೊಗೆಹಾಕಿಸಿಕೊಂಡ ವ್ಯಕ್ತಿಯೇ ಹೊಗೆ ಬಿಟ್ಟಾಗ...

ರಶ್ಮಿಕಾ ತಮ್ಮ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ನಟನೆಯ ವರಿಸು ಸಿನಿಮಾದಲ್ಲಿ ರಾಮಿಕಾ ನಟಿಸಿದ್ದು, 2023 ರಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ದಿಲ್ ರಾಜು ಮತ್ತು ಶಿರೀಷ್ ತಮ್ಮ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್, ಜಯಸುಧಾ, ಶ್ರೀಕಾಂತ್, ಶಾಮ್, ಯೋಗಿ ಬಾಬು, ಸಂಗೀತಾ ಮತ್ತು ಸಂಯುಕ್ತ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಶ್ಮಿಕಾ ಅವರ ಬಾಲಿವುಡ್‌ ಸಿನಿಮಾ ಮಿಷನ್ ಮಜ್ನು ಸಹ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು 1971 ರ ಭಾರತ - ಪಾಕಿಸ್ತಾನ ಯುದ್ಧದ ಮೊದಲು ಮತ್ತು ಆ ಸಮಯದಲ್ಲಿ ನಡೆದ ಪಾಕಿಸ್ತಾನದ ಹೃದಯಭಾಗದಲ್ಲಿ ಭಾರತದ ಅತ್ಯಂತ ಧೈರ್ಯಶಾಲಿ ರಹಸ್ಯ ಕಾರ್ಯಾಚರಣೆಯ ಕಥೆಯನ್ನು ಹೇಳುತ್ತದೆ. ಚಿತ್ರವನ್ನು ಮುಂದಿನ ವರ್ಷ ಜನವರಿ 20 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 

ಇದನ್ನೂ ಓದಿ : BBK9 Finale : ಬಿಗ್ ಬಾಸ್ ಐವರು ಫೈನಲಿಸ್ಟ್‌ಗಳಿಗೂ ಇದೆ ಒಂದೊಂದು ಪ್ಲಸ್​ ಪಾಯಿಂಟ್​

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News