ರಶ್ಮಿಕಾ ಫೇಕ್‌ ವಿಡಿಯೋ ವೈರಲ್:‌ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕೆಂದ ಅಮಿತಾಬ್ ಬಚ್ಚನ್!

Rashmika Mandanna: ಕಳೆದರಡು ದಿನಗಳಿಂದ ರಶ್ಮಿಕಾ ಮಂದಣ್ಣ ಹೆಸರಿನಲ್ಲಿ  ಫೇಕ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಬೇರೆ ಯುವತಿಯ ವಿಡಿಯೋ ರಶ್ಮಿಕಾ ಮುಖ ಮಾರ್ಪ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಈ ಸುದ್ದಿ ನೋಡಿ ಅಮಿತಾಬ್‌ ಬಚ್ಚನ್‌ ಕೇಸ್‌ ಹಾಕಬೇಕೆಂದು ಅಗ್ರಹಿಸಿದ್ದಾರೆ.

Written by - Zee Kannada News Desk | Last Updated : Nov 6, 2023, 11:05 AM IST
  • ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಫೇಕ್ ವಿಡಿಯೋವೊಂದು ವೈರಲ್ ಆಗುತ್ತಿದೆ.
  • ಝರಾ ಪಟೇಲ್ ಎಂಬ ಯುವತಿಯ ಹಾಟ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್.
  • ರಶ್ಮಿಕಾಗೆ ಕಳಂಕ ತರಲು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ರಶ್ಮಿಕಾ ಫೇಕ್‌ ವಿಡಿಯೋ ವೈರಲ್:‌ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕೆಂದ ಅಮಿತಾಬ್ ಬಚ್ಚನ್! title=

Rashmika Mandannaʼs Fake Video Viral: ಕೆಲವು ದಿನಗಳಿಂದ ಸೋಷಿಯಲ್‌ ಮಿಡಿಯಾದಲ್ಲಿ ರಶ್ಮಿಕಾ ಮಂದಣ್ಣ ಹೆಸರಿನಲ್ಲಿ  ಫೇಕ್ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಯುವತಿಯ ವಿಡಿಯೋ ರಶ್ಮಿಕಾ ಮುಖ ಮಾರ್ಪ್ ಮಾಡಿದ್ದರಿಂದ, ಈ ವಿಡಿಯೋದಲ್ಲಿರೋದು ರಶ್ಮಿಕಾ ಮಂದಣ್ಣ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಅದು ಆಕೆಯ ವಿಡಿಯೋ ಅಲ್ಲ.

ಅಸಲಿ ವಿಷಯವೇನೆಂದರೆ ಝರಾ ಪಟೇಲ್ ಎಂಬ ಯುವತಿಯ ಹಾಟ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿದ್ದು, ಈ ವಿಡಿಯೋ ಬಗ್ಗೆ ಪತ್ರಕರ್ತ ಅಮಿತ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಎರಡು ವಿಡಿಯೋಗಳನ್ನು ಹಂಚಿಕೊಂಡು ವೈರಲ್ ವಿಡಿಯೋ ಸತ್ಯಾಸತ್ಯತೆಯನ್ನು ಬಯಲು ಮಾಡಿದ್ದರು.

ಇದನ್ನು ಓದಿ: ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ "ಇದು ನಮ್ ಶಾಲೆ"

ಸತ್ಯವೇನೆಂದರೆ ಝರಾ ಪಟೇಲ್ ಎಂಬ ಯುವತಿ ತುಂಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿರುವುದನ್ನು ನೋಡಬಹುದು. ಈ ಯುವತಿ ಡೀಪ್ ನೆಕ್ ಡ್ರೆಸ್‌ನಲ್ಲಿ ಆಕೆ ಕಾಣಿಸಿಕೊಂಡಿದ್ದು, ಆದರೆ ಆಕೆಯ ಮುಖವನ್ನು ರಶ್ಮಿಕಾ ಮಂದಣ್ಣ ರೀತಿ ಬದಲಿಸಲಾಗಿದೆ. ಕೆಲವರು ಇದನ್ನು ನೋಡಿ ರಶ್ಮಿಕಾ ಮಂದಣ್ಣ ಇಷ್ಟು ಹಾಟ್ ಆಗಿ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರಾ? ಎಂದು ಹುಬ್ಬೇರಿಸಿದ್ದಾರೆ. ಆದರೆ ಮಾರ್ಪ್ ವಿಡಿಯೋದಲ್ಲಿ ಯುವತಿ ಲಿಫ್ಟ್‌ ಒಳಗೆ ಬರುವ ವೇಳೆ ಆಕೆಯ ಮುಖವನ್ನು ರಶ್ಮಿಕಾ ರೀತಿ ಬದಲಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ನಟಿ ರಶ್ಮಿಕಾಗೆ ಕಳಂಕ ತರಲು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿರುವುದರ ಜೊತೆಗೆ, ಸದ್ಯ ಈ ಬಗ್ಗೆ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ. ಅಮಿತಾಬ್ ತಕ್ಷಣ ಈ ಬಗ್ಗೆ ಕಾನೂನಾತ್ಮಕವಾಗಿ ದೂರು ದಾಖಲಿಸಬೇಕು ಎಂದು ಟ್ವೀಟ್ ಮಾಡುವುದರ ಜೊತೆಗೆ ಪತ್ರಕರ್ತ ಅಮಿತ್ ಟ್ವೀಟ್ ರೀ ಟ್ವೀಟ್ ಮಾಡಿ ಬಿಗ್‌ ಬಿ "ಹೌದು ಇದು ಕಾನೂನಾತ್ಮಕವಾಗಿ ಬಲವಾದ ಪ್ರಕರಣ" ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: LEO OTT: ಬಿಡುಗಡೆಯಾದ ಒಂದು ತಿಂಗಳೊಳಗೆ ಡಿಜಿಟಲ್‌ ವೇದಿಕೆ ಪ್ರವೇಶಿಸಿದ ವಿಜಯ್‌ ಸಿನಿಮಾ!

ಗುಡ್‌ ಬೈ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ತಂದೆ- ಮಗಳಾಗಿ ನಟಿಸಿದ್ದರು. ಬಾಲಿವುಡ್ ಪ್ರವೇಶಿಸಿದ ಬಹಳ ಕಡಿಮೆ ಅವಧಿಯಲ್ಲಿ ಬಿಗ್‌ ಬಿ ಜೊತೆ ನಟಿಸೋ ಅವಕಾಶ ಗಿಟ್ಟಿಸಿ ರಶ್ಮಿಕಾ ಎಲ್ಲರ ಹುಬ್ಬೇರಿಸಿದ್ದರು. ವಿಕಾಸ್ ಬೇಹ್ಲ್ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News