Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!

ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಕ್ರಿಕೆಟ್ ಆಟಗಾರ ಶಿಖರ್ ಧವನ್ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Last Updated : Apr 25, 2019, 07:22 PM IST
 Watch: ಪದ್ಮಾವತ್ 'ಖಲಿ ಬಲಿ' ಹಾಡಿಗೆ ಶಿಖರ್ ಧವನ್, ರಣವೀರ್ ಸಿಂಗ್ ಡ್ಯಾನ್ಸ್..!  title=
Photo courtesy: Instagram

ನವದೆಹಲಿ: ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಕ್ರಿಕೆಟ್ ಆಟಗಾರ ಶಿಖರ್ ಧವನ್ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

 
 
 
 

 
 
 
 
 
 
 
 
 

Khoob Jamega rang, Jab ho Gabbar aur Khilji sang! Learning each other's moves ;)

A post shared by Shikhar Dhawan (@shikhardofficial) on

ಪದ್ಮಾವತ್ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಮೂಲಕ ಗಮನ ಸೆಳೆದಿದ್ದ ರಣವೀರ್ ಸಿಂಗ್,  ನಂತರ ಈ ಪಾತ್ರದ ಮೂಲಕ  ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದರು. ಈ ಚಿತ್ರಕ್ಕೆ ಪ್ರಾರಂಭದಲ್ಲಿ ಬಿಡುಗಡೆಗೆ ಹಲವಾರು ಅಡೆತಡೆಗಳು ಎದುರಾಗಿದ್ದರು ಕೂಡ ನಂತರ ಹಲವಾರು ಸಂಧಾನಗಳ ಮೂಲಕ ಚಿತ್ರ ಕೊನೆಗೂ ತೆರೆಗೆ ಬಂದಿತ್ತು. ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಿದ್ದ ರಣವೀರ್ ಸಿಂಗ್ ಈ ಹಾಡಿಗಾಗಿ ಡ್ಯಾನ್ಸ್ ಮಾಡಿದ್ದರು.

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಖಲಿ ಬಲಿ ಹಾಡಿನ ಸ್ಟೆಪ್ ಗಳನ್ನು ಕ್ರಿಕೆಟ್ ಆಟಗಾರ ಶಿಖರ್ ಧವನ್ ಅವರಿಗೆ ರಣವೀರ್ ಸಿಂಗ್ ಕಲಿಸಿಕೊಡುತ್ತಿದ್ದಾರೆ.ಈ ವೀಡಿಯೋವನ್ನು ಶಿಖರ್ ಧವನ್ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Trending News