ʼವಿಕ್ರಾಂತ್‌ ರೋಣಾʼ ನೋಡಿದ ರಾಮ್‌ಗೋಪಾಲ್‌ ವರ್ಮಾ ಸಿನಿರಂಗಕ್ಕೆ ಎಚ್ಚರಿಕೆ ಕೊಟ್ಟಿದ್ಯಾಕೆ?

ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ರಿಲೀಸ್ ಮಾಡುವ ಜವಾಬ್ದಾರಿಯನ್ನ ನಟ ಸಲ್ಮಾನ್ ಖಾನ್ ಅವರೇ ಹೊತ್ತಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿದ್ದು ‘ವಿಕ್ರಾಂತ್ ರೋಣ’ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.  

Written by - Bhavishya Shetty | Last Updated : May 22, 2022, 03:55 PM IST
  • ಜುಲೈ 28ಕ್ಕೆ ತೆರೆ ಮೇಲೆ ಬರಲಿದೆ ವಿಕ್ರಾಂತ್‌ ರೋಣ ಸಿನಿಮಾ ʼ
  • ಕಿಚ್ಚ ಸಿನಿಮಾಕ್ಕೆ ರಾಮ್‌ಗೋಪಾಲ್‌ ವರ್ಮಾ ಫಿದಾ
  • ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ ನಿರ್ದೇಶಕ
ʼವಿಕ್ರಾಂತ್‌ ರೋಣಾʼ ನೋಡಿದ ರಾಮ್‌ಗೋಪಾಲ್‌ ವರ್ಮಾ ಸಿನಿರಂಗಕ್ಕೆ ಎಚ್ಚರಿಕೆ ಕೊಟ್ಟಿದ್ಯಾಕೆ?  title=
Ram Gopal Varma

Vikrant Rona: ಕಿಚ್ಚ ಸುದೀಪ್‌ ಅಭಿನಯದ ʼವಿಕ್ರಾಂತ್‌ ರೋಣʼ ಸಿನಿಮಾ ಜುಲೈ 28ರಂದು ತೆರೆ ಮೇಲೆ ಅಪ್ಪಳಿಸಲಿದೆ. ಈಗಾಗಲೇ ಕೆಜಿಎಫ್‌ ಚಾಪ್ಟರ್‌ 2 ಅಬ್ಬರದಿಂದ ದೇಶದೆಲ್ಲೆಡೆ ಸ್ಯಾಂಡಲ್‌ವುಡ್‌ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಚಿತ್ರ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಎಚ್ಚರಿಕೆಯ ಸಂದೇಶವೊಂದನ್ನು ಸಿನಿರಂಗಕ್ಕೆ ರವಾನಿಸಿದ್ದಾರೆ. 

ಇದನ್ನು ಓದಿ: Kriti Kartik Affair: ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೊನ್ ಸಂಬಂಧದ ಗುಟ್ಟು ರಟ್ಟು..!

ಕನ್ನಡ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಮಿಚುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, "ಈ ಸುದ್ದಿ ಕೇಳಿ ಸಂತಸವಾಯಿತು. ಚಿತ್ರದ ಕೆಲ ದೃಶ್ಯಗಳನ್ನು ನಾನು ಈಗಾಗಲೇ ನೋಡಿದ್ದೇನೆ. ಕನ್ನಡ ಸಿನಿರಂಗದಿಂದ ಮತ್ತೊಂದು ದೊಡ್ಡ ಸಿನಿಮಾ ತೆರೆಮೇಲೆ ಬರಲಿದೆ. ಬ್ಲಾಕ್‌ಬಸ್ಟರ್ ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ನಟಿಸಿದ್ದಾರೆ" ಎಂದು ಆರ್‌ಜಿವಿ ಟ್ವೀಟ್‌ ಮೂಲಕ ಹೇಳಿದ್ದಾರೆ. ಟ್ವೀಟ್‌ ಜೊತೆ ವಿಕ್ರಾಂತ್‌ ರೋಣ ಸಿನಿಮಾದ ಟೀಸರ್‌ನ್ನು ಸಹ ಶೇರ್‌ ಮಾಡಿಕೊಂಡ ರಾಮ್‌ಗೋಪಾಲ್‌ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಷ್ಟೇ ಅಲ್ಲದೆ, ‘ವಿಕ್ರಾಂತ್ ರೋಣ’ ಸಿನಿಮಾಗೆ ಬಲ ತುಂಬಲು ಖುದ್ದು ನಟ ಸಲ್ಮಾನ್ ಖಾನ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ‌. ನಟ ಸಲ್ಮಾನ್ ಖಾನ್ ಹಾಗೂ ಕನ್ನಡಿಗ ಕಿಚ್ಚ ಸುದೀಪ್ ಅವರ ಬಾಂಧವ್ಯ ಎಷ್ಟು ಗಾಢವಾಗಿದೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಹೀಗೆ ಇವರಿಬ್ಬರ ಸ್ನೇಹ ಇದೀಗ ಮತ್ತಷ್ಟು ಗಾಢವಾಗಿದೆ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್  ರೋಣ’ ಸಿನಿಮಾಗೆ ಸಲ್ಮಾನ್ ಸಾಥ್ ನೀಡಿದ್ದಾರೆ. ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ರಿಲೀಸ್ ಮಾಡುವ ಜವಾಬ್ದಾರಿಯನ್ನ ನಟ ಸಲ್ಮಾನ್ ಖಾನ್ ಅವರೇ ಹೊತ್ತಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿದ್ದು ‘ವಿಕ್ರಾಂತ್ ರೋಣ’ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.

ಇದನ್ನು ಓದಿ: ನಟ ಕಿಚ್ಚ ಸುದೀಪ್‌ ಸಿನಿಮಾಗೆ ಆನೆಬಲ..! ‘ವಿಕ್ರಾಂತ್ ರೋಣ’ನಿಗೆ ‘ಪಿವಿಆರ್‌’ ಸಾಥ್..!‌

ಇನ್ನೊಂದೆಡೆ  ವಿಕ್ರಾಂತ್ ರೋಣ ಸಿನಿಮಾಗೆ ಪಿವಿಆರ್‌ ಸಾಥ್‌ ನೀಡಿದೆ. ಸಿನಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ‘ಪ್ರಿಯಾ ವಿಲೇಜ್‌ ರೋಡ್‌ಶೋ’. ಹೀಗೆ ಪ್ಯಾನ್‌ ವರ್ಲ್ಡ್‌ ಸಿನಿಮಾ ವಿಕ್ರಾಂತ್ ರೋಣಗೆ ಪಿವಿಆರ್‌ ಹೆಗಲು ಕೊಟ್ಟಿದೆ. ಈ ಮೂಲಕ ವಿಕ್ರಾಂತ್ ರೋಣನ ಸದ್ದು ಎಲ್ಲೆಲ್ಲೂ ಮೊಳಗುತ್ತಿದೆ. ಈ ಕುರಿತು ವಿಕ್ರಾಂತ್ ರೋಣ ತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್‌ ಸಿಕ್ಕಂತಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News