Ram Charan: ಗೇಮ್ ಚೇಂಜರ್ ನಂತರ ಮತ್ತೊಂದು ಸಿನಿಮಾಗೆ ಕೈ ಜೋಡಿಸ್ತಾರಾ ರಾಮ್‌ಚರಣ್ - ಶಂಕರ್..?

Ramcharan : ಆರ್‌ಆರ್‌ಆರ್‌ ಸಿನಿಮಾದ ಯಶಸ್ಸಿನ ನಂತರ ಆಚಾರ್ಯ ಸಿನಿಮಾದಿಂದ ಸೋಲಿನ ಕಹಿಯನ್ನು ಅನುಭವಿಸಿರುವ ರಾಮ್‌ಚರಣ್ ಸದ್ಯ ತಮಿಳು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸಿದ್ದು, ಮತ್ತೊಂದು ಹೊಸ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗುತ್ತಿದೆ.   

Written by - Savita M B | Last Updated : Aug 1, 2023, 02:20 PM IST
  • ರಾಮಚರಣ್‌ ವಿನಯ ವಿಧ್ಯೇಯ ರಾಮ ಚಿತ್ರದ ಮೂಲಕ ಹೀನಾಯ ಸೋಲನ್ನು ಕಂಡಿದ್ದರು.
  • ಇತ್ತೀಚೆಗೆ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ ಆದರೂ ಅವುಗಳ ನಂತರ ಬಂದ ಸಿನಿಮಾಗಳು ನೆಲಕಚ್ಚಿವೆ.
  • ಸದ್ಯ ರಾಮ್‌ಚರಣ್‌ ನಿರ್ದೇಶಕ ಎಸ್ ಶಂಕರ್ ಅವರ ನಿರ್ದೇಶನದ 'ಗೇಮ್ ಚೇಂಜರ್' ಸಿನಿಮಾದಲ್ಲಿ ನಟಿಸಿದ್ದಾರೆ.
Ram Charan: ಗೇಮ್ ಚೇಂಜರ್ ನಂತರ ಮತ್ತೊಂದು ಸಿನಿಮಾಗೆ ಕೈ ಜೋಡಿಸ್ತಾರಾ ರಾಮ್‌ಚರಣ್ - ಶಂಕರ್..?  title=

Game Changer : ರಂಗಸ್ಥಲಂ ನಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ ರಾಮಚರಣ್‌ ವಿನಯ ವಿಧ್ಯೇಯ ರಾಮ ಚಿತ್ರದ ಮೂಲಕ ಹೀನಾಯ ಸೋಲನ್ನು ಕಂಡಿದ್ದರು. ಅವರು ಇತ್ತೀಚೆಗೆ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ ಆದರೂ ಅವುಗಳ ನಂತರ ಬಂದ ಸಿನಿಮಾಗಳು ನೆಲಕಚ್ಚಿವೆ. 

ಸದ್ಯ ರಾಮ್‌ಚರಣ್‌ ತಮಿಳು ಚಿತ್ರರಂಗದ ಸಿನಿ ರಸಿಕರ ಅಚ್ಚುಮೆಚ್ಚಿನ ಸ್ಟಾರ್ ನಿರ್ದೇಶಕ ಎಸ್ ಶಂಕರ್ ಅವರ ನಿರ್ದೇಶನದ  'ಗೇಮ್ ಚೇಂಜರ್' ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಿರುವಾಗಲೇ ಹೊಸ ಸುದ್ದಿಯೊಂದು ಟಾಲಿವುಡ್ ನಲ್ಲಿ ಹರಿದಾಡುತ್ತಿದ್ದು, ಇದೇ ಕಾಂಬಿನೇಶನ್‌ನಲ್ಲಿ ಮತ್ತೊಂದು ಚಿತ್ರದ ಮಾತುಕತೆ ನಡೆದಿದೆ ಇದಕ್ಕೆ ರಾಮ್‌ಚರಣ್ ಸಹ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಡ್ಡೆಹೈಕ್ಳ ʼನ್ಯಾಷನಲ್‌ ಕ್ರಶ್‌ʼ..ಸೀತಾ ಮಹಾಲಕ್ಷ್ಮಿಯ ಏಜ್‌ ಎಷ್ಟು ಗೊತ್ತಾ..?

ಹೌದು, ರಾಮ್ ಚರಣ್ ಗೇಮ್ ಚೇಂಜರ್ ಬಳಿಕ ಯಾವುದೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ 'ಗೇಮ್ ಚೇಂಜರ್' ನಂತರವೇ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಈ ತಿಂಗಳಲ್ಲಿಯೇ ಈ ಕುರಿತು ಬಿಗ್‌ ಅಪ್ಡೇಟ್‌ ಹೊರಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. 

ಇನ್ನು 'ಗೇಮ್ ಚೇಂಜರ್' ಶಂಕರ್ ಜೀವನದ ಮೊದಲ ತೆಲುಗು ಸಿನಿಮಾವಾಗಿದ್ದು, ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯದಲ್ಲಿಯೇ ಚಿತ್ರತಂಡ ಅಪ್ಡೇಟ್‌ ನೀಡಲಿದೆ. 

ಇದನ್ನೂ ಓದಿ-"ಟೈಮ್‌ ಒಂದು ಸಾರಿ ಡಿಸೈಡ್‌ ಮಾಡಿದ್ರೆ ಏನೂ ಮಾಡೋಕೆ ಆಗೊಲ್ಲ" 'ಬ್ಯಾಂಗ್' ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News