ಶೂಟಿಂಗ್‌ ವೇಳೆ ಕರೆಂಟ್‌ ಹೋದಾಗ.. ರಜನಿಕಾಂತ್‌ ನನ್ನ ಹಿಂದೆ ಬಂದು...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ರಂಭಾ

Rambha on Rajinikanth : ನಟಿ ರಂಭಾ 90ರ ದಶಕದಲ್ಲಿ ಅಭಿಮಾನಿಗಳ ಕನಸಿನ ಕನ್ಯೆಯಾಗಿದ್ದವರು. ತೆರೆಗೆ ಬಂದ ಕೆಲವೇ ವರ್ಷಗಳಲ್ಲಿ ರಂಬಾ ಕ್ರೇಜ್‌ ಗಿಟ್ಟಿಸಿಕೊಂಡರು. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಹಲವು ಸ್ಟಾರ್‌ ನಟರ ಜೊತೆ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. ಸಧ್ಯ ರಜನಿಕಾಂತ್‌ ಕುರಿತು ರಂಭಾ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.

Written by - Krishna N K | Last Updated : Jan 4, 2024, 01:06 PM IST
  • ನಟಿ ರಂಭಾ 90ರ ದಶಕದಲ್ಲಿ ಅಭಿಮಾನಿಗಳ ಕನಸಿನ ಕನ್ಯೆ.
  • ತೆರೆಗೆ ಬಂದ ಕೆಲವೇ ವರ್ಷಗಳಲ್ಲಿ ರಂಬಾ ಕ್ರೇಜ್‌ ಗಿಟ್ಟಿಸಿಕೊಂಡರು.
  • ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಹಲವು ಸ್ಟಾರ್‌ ನಟರ ಜೊತೆ ನಟಿಸಿದ್ದಾರೆ.
ಶೂಟಿಂಗ್‌ ವೇಳೆ ಕರೆಂಟ್‌ ಹೋದಾಗ.. ರಜನಿಕಾಂತ್‌ ನನ್ನ ಹಿಂದೆ ಬಂದು...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ರಂಭಾ title=

Rajinikanth Rambha : ʼಅರುಣಾಚಲಂʼ ಚಿತ್ರ ತಮಿಳು ಸಿನಿರಂಗದ ಹಿಟ್‌ ಸಿನಿಮಾಗಳಲ್ಲಿ ಒಂದು. ಇತ್ತೀಚಿಗೆ ನಟಿ ರಂಭಾ ಈ ಸಿನಿಮಾ ಶೂಟಿಂಗ್‌ ವೇಳೆ ನಡೆದ ಘಟನೆ ಕುರಿತು ಬಹಿರಂಗವಾಗಿ ಮಾತನಾಡಿದ್ದು, ಸೆಟ್‌ನಲ್ಲಿ ಸೂಪರ್‌ ಸ್ಟಾರ್‌  ರಜಿನಿಕಾಂತ್ ಅವರು ತಮಗೆ ಹೊಡೆದಿದ್ದಾಗಿ ರಂಭಾ ಹೇಳಿಕೆ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹೌದು.. 1997 ರಲ್ಲಿ ಬಿಡುಗಡೆಯಾದ ಅರುಣಾಚಲಂ ಚಿತ್ರದಲ್ಲಿ ರಜನಿಕಾಂತ್ ನಾಯಕನಾಗಿ ನಟಿಸಿದ್ದರು. ಅಲ್ಲದೆ ದಿವಂಗತ ನಟಿ ಸೌಂದರ್ಯ ಮತ್ತು ರಂಬಾ ರಜನಿಗೆ ಜೋಡಿಯಾಗಿ ನಟಿಸಿದ್ದರು. ಸಧ್ಯ ಈ ಚಿತ್ರದ ಶೂಟಿಂಗ್‌ ವೇಳೆ ರಜನಿಕಾಂತ್‌ ಮಾಡಿದ ಕುಚೇಷ್ಟೆ ಘಟನೆಯನ್ನು ರಂಬಾ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ:’ಕನಸೊಂದು ಶುರುವಾಗಿದೆ’ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್.!

ಒಂದು ದಿನ ಅರುಣಾಚಲಂ ಚಿತ್ರದ ಶೂಟಿಂಗ್‌ ವೇಳೆ ಇದ್ದಕ್ಕಿದ್ದಂತೆ ಎಲ್ಲಾ ದ್ವೀಪಗಳು ಆರಿಹೋದವು. ಆಗ ರಂಭಾ ಬೆನ್ನಿಗೆ ಯಾರೋ ಹೊಡೆದರು, ಇದರಿಂದ ಭಯಗೊಂಡ ಅವರು ತಕ್ಷಣ ಕಿರುಚಿದ್ದರು. ಬೆಳಕು ಬಂದ ಕೂಡಲೇ ಎಲ್ಲರನ್ನು ನಿಲ್ಲಿಸಿ, ‘ರಂಭಾಗೆ ಹೊಡೆದದ್ದು ಯಾರು?’ ಅಂತ ಪ್ರಶ್ನೆ ಕೇಳಲಾಯಿತು. ಕೊನೆಗೆ ರಂಭಾ ಅವರನ್ನು ಹೆದರಿಸಿದ್ದು, ರಜನಿಕಾಂತ್ ಎಂಬುದು ತಿಳಿದು ಬಂದಿತ್ತು.

ಅಲ್ಲದೆ, ಇದೇ ಸಂದರ್ಶನದಲ್ಲಿ ರಜನಿ ಮಾಡಿದ ಮತ್ತೊಂದು ತಮಾಷೆಯನ್ನು ರಂಬಾ ಹಂಚಿಕೊಂಡಿದ್ದಾರೆ. ಅರುಣಾಚಲಂ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದರು. ಆಗ ಅವರನ್ನು ಸ್ವಾಗತಿಸಿದ ರಂಬಾ ಓಡಿ ಬಂದು ಅಪ್ಪಿಕೊಂಡಿದ್ದರು. ಇದನ್ನು ನೋಡಿದ ರಜನಿ ರಂಬಾಗೆ "ನಾನು ಗುಡ್ ಮಾರ್ನಿಂಗ್ ಹೇಳ್ತೇನೆ ಸರ್.. ಅವರು ಓಡಿ ಬಂದು ನನ್ನ ಅಪ್ಪಿಕೊಳ್ಳುತ್ತಾರೆ.. ಇನ್ನು ಮುಂದೆ ಯೂನಿಟ್ ಗೆ ಯಾರೇ ಬಂದರೂ ಹೀಗೆ ಸ್ವಾಗತ ಮಾಡ್ತಾಳೆ" ಅಂತ ಕಾಡಿಸಿದ್ದಾಗಿ ರಂಭಾ ಹೇಳಿ ನಕ್ಕಿದ್ದರು. 

ಇದನ್ನೂ ಓದಿ:'ಸಲಾರ್ 2' ಅಪ್ಡೇಟ್‌: ಸೀಕ್ವೆಲ್ ರಿಲೀಸ್‌ ಬಗ್ಗೆ ಮಾತನಾಡಿದ ವಿಜಯ್‌ ಕಿರಗಂದೂರು!

ನಟಿ ರಂಭಾ 90ರ ದಶಕದಲ್ಲಿ ಅಭಿಮಾನಿಗಳ ಕನಸಿನ ಕನ್ಯೆಯಾಗಿದ್ದವರು. ತೆರೆಗೆ ಬಂದ ಕೆಲವೇ ವರ್ಷಗಳಲ್ಲಿ ರಂಬಾ ಕ್ರೇಜ್‌ ಗಿಟ್ಟಿಸಿಕೊಂಡರು. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಹಲವು ಸ್ಟಾರ್‌ ನಟರ ಜೊತೆ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. 2010ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಮದುವೆ ನಂತರ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News