ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಟೀಕೆ! ಮೌನ ಮುರಿದ ಅಮಿತಾಬ್ ಬಚ್ಚನ್… ಪೋಸ್ಟ್ ವೈರಲ್

Amithabh Bhacchan Post: ರಾಹುಲ್‌ ಗಾಂಧಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದು.. ಈ ಬಗ್ಗೆ ನಟ ಅಮಿತಾಬ್ ಮೌನ ಮುರಿದಿದ್ದಾರೆ..    

Written by - Savita M B | Last Updated : Feb 22, 2024, 12:27 PM IST
  • ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿ
  • ನಟಿಯರು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ
  • ಅಲ್ಲದೇ ಇದು ವಿಶ್ವ ಸುಂದರಿ ಅಭಿಮಾನಿಗಳನ್ನೂ ಕೆರಳಿಸಿದೆ
ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಟೀಕೆ! ಮೌನ ಮುರಿದ ಅಮಿತಾಬ್ ಬಚ್ಚನ್… ಪೋಸ್ಟ್ ವೈರಲ್ title=

Rahul Gandhi-Amithabh Bhacchanಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಲಿವುಡ್ ಅಮಿತಾಬ್ ಮತ್ತು ಐಶ್ವರ್ಯಾ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದ್ದು.. ಅನೇಕ ನಟಿಯರು ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.. ಅಲ್ಲದೇ ಇದು ವಿಶ್ವ ಸುಂದರಿ ಅಭಿಮಾನಿಗಳನ್ನೂ ಕೆರಳಿಸಿದೆ... 

ಹೌದು ರಾಹುಲ್‌ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗಾಗಿ ಕಾನ್ಫುರದಲ್ಲಿದ್ದಾಗ ಸಮೂಹವನ್ನ ಉದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ದಿನವನ್ನ ನೆನೆದ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದರು.. 

ಇದನ್ನೂ ಓದಿ-ನಟ ಶರಣ್ ಅವರಿಂದ ಬಿಡುಗಡೆಯಾಯಿತು "ಪುರುಷೋತ್ತಮನ‌ ಪ್ರಸಂಗ" ಚಿತ್ರದ ಟ್ರೇಲರ್!

ನರೇಂದ್ರ ಮೋದಿ ಅವರ ರಾಮ ರಾಜ್ಯದಲ್ಲಿ ದಲಿತರಿಗೆ ಹಾಗೂ ಇತರ ವರ್ಗದವರಿಗೆ ಪ್ರಾಶಸ್ತ್ಯ ದೊರಕುವುದಿಲ್ಲ.. ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ.. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಒಳಗೆ ಪ್ರವೇಶ ನೀಡಲಿಲ್ಲ ಎಂದು ನರೇಂದ್ರ ಮೋದಿ ಅವರ ವಿರುದ್ಧ ಟೀಕಾಸ್ತ್ರವನ್ನೇ ಹೂಡಿದ್ದರು.. 

ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ರಾಹುಲ್ ಗಾಂಧಿ, ಬಾಲಿವುಡ್ ನ ಶೆಹನ್ ಷಾ ಅಮಿತಾಬ್ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯ ರೈ ಅವರ ಬಗ್ಗೆ ಸಲ್ಲದ ಹೇಳಿಕೆಗಳನ್ನೂ ನೀಡಿದ್ದಾರೆ..

ಇದನ್ನೂ ಓದಿ-Dhananjay: ರಾಜಕೀಯಕ್ಕೆ ನಟರಾಕ್ಷಸನ ಎಂಟ್ರೀ! ಏನಂದ್ರು ಧನಂಜಯ್..??

ಇಷ್ಟೇ ಅಲ್ಲ ರಾಹುಲ್‌ ಗಾಂಧೀ ವಾರಣಾಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇನ್ನೊಂದು ರ್ಯಾಲಿಯಲ್ಲಿ ದೇಶದಲ್ಲಿ ಎರಡು ಪ್ರಮುಖ ಸಮಸ್ಯೆಗಳಿದ್ದು.. ಅವೇ ನಿರುದ್ಯೋಗ, ಹಣದುಬ್ಬರ, ಆದರೆ ಇವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯಾವು ಮಾಧ್ಯಮಗಳಲ್ಲೂ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ,, ಕೇವಲ ಮೋದಿಯವರನ್ನು ಮಾತ್ರ ತೋರಿಸುತ್ತಾರೆ.. ಅದನ್ನು ಬಿಟ್ಟರೆ ಐಶ್ವರ್ಯ ರೈ ಕುಣಿಯುವುದನ್ನ ಇಲ್ಲವೆಂದರೆ ಅಮಿತಾಭ್ ಬಚ್ಚನ್ ಅವರನ್ನ ತೋರಿಸುತ್ತಾರೆ ಎಂದರು.. ಸದ್ಯ ಈ ಮಾತು ಐಸೂ ಅಭಿಮಾನಿಗಳನ್ನು ಕೆರಳಿಸಿದ್ದು.. ರಾಹುಲ್‌ ಗಾಂಧಿ ಅವರ ಮೇಲೆ ಆಕ್ರೋಶದ ಅಲೆ ಹೆಚ್ಚಾಗುತ್ತಿದೆ.. 

ಆದರೆ ಇದೀಗ ಸೊಸೆ ಐಶ್ವರ್ಯಾ ರೈ ಹಾಗೂ ತಮ್ಮ ಬಗ್ಗೆ ರಾಹುಲ್‌ ಗಾಂಧಿ ಟೀಕೆ ಮಾಡಿರುವುದಕ್ಕೆ ಅಮಿತಾಬ್ ಬಚ್ಚನ್ ಮೌನ ಮುರಿದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.. ಆ ಪೋಸ್ಟ್‌ನಲ್ಲಿ "ಟಿ 4929 - ವರ್ಕ್ ಔಟ್ ಸಮಯ .. ದೇಹದ ಚಲನಶೀಲತೆ .. ಮನಸ್ಸಿನ ನಮ್ಯತೆ .. ಎಲ್ಲವನ್ನೂ ಕಾಯಬಹುದು.." ಎಂದು ಬರೆದುಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News