ರಾಧಿಕಾ ಮೀಟ್ಸ್‌ ರಾಕಿಭಾಯ್‌..! ಸ್ಪೇಷಲ್‌ ವಿಡಿಯೋ ಹಂಚಿಕೊಂಡ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ

Yash KGF 2 : ಏಪ್ರಿಲ್ 14 ರಂದು ರಿಲೀಸ್‌ ಆದ ಕೆಜಿಎಫ್‌ 2 ದೇಶಾದ್ಯಂತ ಅಬ್ಬರಿಸಿ ಬೊಬ್ಬರಿದಿತ್ತು. ಎಲ್ಲಿ ನೋಡಿದ್ರೂ ರಾಕಿ ಭಾಯ್‌ ಹವಾ. ಕನ್ನಡದ ಗಡಿ ದಾಟಿ ಸಿನಿ ರಸಿಕರ ಮನಗೆಲ್ಲುವಲ್ಲಿ ʼರಾಜಾ ಕೃಷ್ಣಪ್ಪ ಬೈರಿಯಾʼ ಯಶಸ್ವಿಯಾಗಿದ್ದ. ಇಂದಿಗೆ ಕೆಜಿಎಫ್‌ 2 ಸಿನಿಮಾ ರಿಲೀಸ್‌ ಆಗಿ ಒಂದು ವರ್ಷ ಕಳೆದ ಹಿನ್ನೆಲೆ ಸ್ಪೇಷಲ್‌ ವಿಡಿಯೋ ಒಂದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

Written by - Krishna N K | Last Updated : Apr 14, 2023, 12:25 PM IST
  • ಇಂದಿಗೆ ಕೆಜಿಎಫ್‌ 2 ಸಿನಿಮಾ ರಿಲೀಸ್‌ ಆಗಿ ಒಂದು ವರ್ಷ.
  • ಸ್ಪೇಷಲ್‌ ವಿಡಿಯೋ ಹಂಚಿಕೊಂಡ ರಾಧಿಕಾ ಯಶ್‌.
  • ರಾಧಿಕಾ ಮೀಟ್ಸ್‌ ರಾಕಿಭಾಯ್‌ ಎಂದು ಟೈಟಲ್‌ ನೀಡಿದ ಸಿಂಡ್ರೆಲ್ಲಾ.
ರಾಧಿಕಾ ಮೀಟ್ಸ್‌ ರಾಕಿಭಾಯ್‌..! ಸ್ಪೇಷಲ್‌ ವಿಡಿಯೋ ಹಂಚಿಕೊಂಡ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ title=

Radhika pandit Yash : ಸ್ಯಾಂಡಲ್‌ವುಡ್‌ ಸ್ಟಾರ್‌ ಜೋಡಿಗಳಲ್ಲಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಜೋಡಿ ಕೂಡ ಒಂದು. ಮುದ್ದಾದ ಮಕ್ಕಳ ಜೊತೆ ಸದಾ ತುಂಟಾಟ ಆಡಿಕೊಂಡಿರುವ ಸಿಂಡ್ರೆಲ್ಲಾ ಆಗಾಗ ಕೆಲವೊಂದಿಷ್ಟು ವಿಡಿಯೋಗಳನ್ನು ಪ್ಯಾನ್ಸ್‌ಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇಂದಿಗೆ ಕೆಜಿಎಫ್‌ 2 ಸಿನಿಮಾ ರಿಲೀಸ್‌ ಆಗಿ ಒಂದು ವರ್ಷ ಕಳೆದ ಹಿನ್ನೆಲೆ ಸ್ಪೇಷಲ್‌ ವಿಡಿಯೋ ಒಂದನ್ನು ಮಾರ್ಗರೇಟ್‌ ಹಂಚಿಕೊಂಡಿದ್ದಾರೆ.

ಹೌದು... ಏಪ್ರಿಲ್ 14 ರಂದು ರಿಲೀಸ್‌ ಆದ ಕೆಜಿಎಫ್‌ 2 ದೇಶಾದ್ಯಂತ ಅಬ್ಬರಿಸಿ ಬೊಬ್ಬರಿದಿತ್ತು. ಎಲ್ಲಿ ನೋಡಿದ್ರೂ ರಾಕಿ ಭಾಯ್‌ ಹವಾ. ಕನ್ನಡದ ಗಡಿ ದಾಟಿ ಸಿನಿ ರಸಿಕರ ಮನಗೆಲ್ಲುವಲ್ಲಿ ʼರಾಜಾ ಕೃಷ್ಣಪ್ಪ ಬೈರಿಯಾʼ ಯಶಸ್ವಿಯಾಗಿದ್ದ. ಉಗ್ರಂ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಜರ್ನಿ ಸ್ಟಾರ್ಟ್‌ ಮಾಡಿದ್ದ ಪ್ರಶಾಂತ್‌ ನೀಲ್‌ ಇಂಡಿಯನ್‌ ಸಿನಿ ಇಂಡಸ್ಟ್ರಿಯ ಮೊಸ್ಟ್‌ ಟ್ಯಾಲೆಂಟೆಡ್ ಡೈರೆಕ್ಟರ್‌ಗಳಲ್ಲಿ ಒಬ್ಬರಾಗಿ ಇಂದು ಸ್ಟಾರ್‌ ನಟರ ಜೊತೆ ಸಾಲು ಸಾಲು ಬಿಗ್‌ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

 
 
 
 

 
 
 
 
 
 
 
 
 
 
 

A post shared by Hombale Films (@hombalefilms)

ಇದನ್ನೂ ಓದಿ: Shah Rukh Khan - Karan Johar : ಎಲ್ಲರೆದುರೇ ಕರಣ್‌ ಜೋಹರ್‌ಗೆ ಶಾರುಖ್ ಖಾನ್‌ ಕ್ಲಾಸ್‌.!

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋಗಿತ್ತು. ಇದೀಗ ಈ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಇದರ ಹಿನ್ನೆಲೆ ಹೊಂಬಾಳೆ ಫಿಲ್ಮ್ಸ್ ವಿಡಿಯೋ ಒಂದನ್ನು ಹಂಚಿಕೊಂಡು, ಕೆಜಿಎಫ್‌ ಅಧಿಪತಿಯ ಅಧ್ಯಾಯದ ಫವರ್‌ ಫುಲ್‌ ಕಥೆಯನ್ನು ಕೊಂಡಾಡಿದೆ.

ಇದರ ಬೆನ್ನಲ್ಲೆ, ಯಶ್‌ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಕೂಡ ಕೆಜಿಎಫ್‌ ಸಿನಿಮಾದ ಶೂಟಿಂಗ್‌ ವೇಳೆ ಸೆಟ್‌ಗೆ ಭೇಟಿ ನೀಡಿದ್ದ ಸ್ಪೇಷಲ್‌ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ರಾಕಿ ಭಾಯ್‌ ಮೀಟ್ಸ್‌ ರಾಧಿಕಾ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ನೋಡಿ ಪ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ವಿಡಿಯೋದಲ್ಲಿ ರಾಕಿ ವಾಕ್‌ ಮಾಡ್ಕೊಂಡು ಬಂದು ರಾಧಿಕಾ ಹೆಗಲ ಮೇಲೆ ಮಲಗಿದ್ದ ತನ್ನ ಮಗಳಿಗೆ ಮುದ್ದು ನೀಡುವ ದೃಶ್ಯ ಕಾಣಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News