ರಾಧಿಕಾ ಪಂಡಿತ್‌ ಅವರ Personal Photographer ಇವರೇ.! ಸಿಕ್ಕಾಪಟ್ಟೆ ಫೇಮಸ್‌ ಈ ವ್ಯಕ್ತಿ

Radhika Pandit Personal Photographer: ಹಬ್ಬ - ಹರಿದಿನ, ವಿಶೇಷ ಸಂದರ್ಭಗಳಲ್ಲಿ ಫೋಟೋ ಹಂಚಿಕೊಂಡ ತಮ್ಮ ಫ್ಯಾನ್ಸ್‌ಗೆ ಕನೆಕ್ಟ್‌ ಆಗುವ ರಾಧಿಕಾ ಪಂಡಿತ್‌ ಅವರ Personal Photographer ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೊಸ ಫೋಟೋ ಜೊತೆಗೆ ಈ ವಿಚಾರವನ್ನು ಸಹ ರಾಧಿಕಾ ಅವರೇ ರಿವೀಲ್‌ ಮಾಡಿದ್ದಾರೆ. 

Written by - Chetana Devarmani | Last Updated : Apr 10, 2023, 12:46 PM IST
  • ಹೊಸ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್‌
  • ರಾಧಿಕಾ ಅವರ Personal Photographer ಇವರೇ
  • ಈ ವಿಚಾರವನ್ನು ರಿವೀಲ್‌ ಮಡಿದ ರಾಧಿಕಾ
ರಾಧಿಕಾ ಪಂಡಿತ್‌ ಅವರ Personal Photographer ಇವರೇ.! ಸಿಕ್ಕಾಪಟ್ಟೆ ಫೇಮಸ್‌ ಈ ವ್ಯಕ್ತಿ  title=
Radhika Pandit

Radhika Pandit : ರಾಧಿಕಾ ಪಂಡಿತ್‌ ಬ್ಯೂಟಿ ಎರಡು ಮಕ್ಕಳಾದರೂ ಕಡಿಮೆಯಾಗಿಲ್ಲ. ಈಗಲೂ ಯುವಕರ ಹೃದಯವಾಸಿಯಾಗಿದ್ದಾರೆ ಈ ಸ್ಯಾಂಡಲ್‌ವುಡ್‌ ನಟಿ. ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಸರೆದರು. ಎರಡು ಮುದ್ದಾದ ಮಕ್ಕಳಿಗೆ ತಾಯಿಯಾದರು. ಅವರ ಸಂಪೂರ್ಣ ಗಮನ ಈಗ ಕುಟುಂಬದ ಕಡೆಯಿದೆ. 

ರಾಧಿಕಾ ಸಿನಿಮಾಗಳಿಗೆ ವಾಪಸ್‌ ಆಗಬೇಕೆಂಬುದು ಅವರ ಅಭಿಮಾನಿಗಳ ಕಡುಬಯಕೆ. ಆದರೆ, ಈ ಕೋರಿಕೆ ಸದ್ಯದಲ್ಲಿ ಈಡೇರುವ ಲಕ್ಷಣ ಕಾಣುತ್ತಿಲ್ಲ. ಸಿನಿಮಾದಲ್ಲಿ ನಟಿಸದಿದ್ದರೆ ಏನಂತೆ, ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ ರಾಧಿಕಾ. ಹಲವು ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಹಬ್ಬ - ಹರಿದಿನ, ವಿಶೇಷ ಸಂದರ್ಭಗಳಲ್ಲಿ ಫ್ಯಾನ್ಸ್‌ಗಳಿಗೆ ಫೋಟೋ ಮೂಲಕ ಸಂತಸ ನೀಡ್ತಾರೆ. ಇದೀಗ ರಾಧಿಕಾ ಹೊಸ ಫೋಟೋ ಶೇರ್ ಮಾಡಿದ್ದಾರೆ. ತುಂಬಾ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ. 

ಇದನ್ನೂ ಓದಿ: Kiccha Sudeep: ಸುದೀಪ್ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ

ಆಗಾಗ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ರಾಧಿಕಾ ಪಂಡಿತ್‌ ಅವರ ಬ್ಯೂಟಿಫುಲ್‌ ಫೋಟೋಗಳ ಹಿಂದಿನ ಕಣ್ಣು ಯಾವುದೆಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಹೊಸ ಫೋಟೋ ಜೊತೆಗೆ ರಾಧಿಕಾ ತಮ್ಮ ವೈಯಕ್ತಿಕ ಫೋಟೋಗ್ರಾಫರ್‌ ಯಾರೆಂಬುದನ್ನು ಸಹ ರಿವೀಲ್‌ ಮಾಡಿದ್ದಾರೆ. 

ಫೋಟೋ ಕೆಳಗೆ ವಿಶೇಷ ಕ್ಯಾಪ್ಶನ್ ಒಂದನ್ನು ಕೊಟ್ಟಿದ್ದು, ತಮ್ಮ ಫೋಟೋಗ್ರಾಫರ್ ಯಾರು ಎಂಬುದನ್ನು ತಿಳಿಸಿದ್ದಾರೆ. 2008ರಲ್ಲಿ ರಿಲೀಸ್‌ ಆದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಬೆಳ್ಳಿತೆರೆಗೆ ಕಾಲಿಟ್ಟರು. ಲಕ್ ಎಂಬಂತೆ ನಟಿಸಿದ ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕಿತು. ಪುನೀತ್ ರಾಜ್​ಕುಮಾರ್, ಧ್ರುವ ಸರ್ಜಾ ಹೀಗೆ ಕನ್ನಡದ ಸ್ಟಾರ್‌ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡುವ ಅವಕಾಶವೂ ದೊರೆಯಿತು. ಅಲ್ಲದೇ ಯಶ್‌ ಅವರ ಜೊತೆಗೂ ಅನೇಕ ಸಿನಿಮಾಗಳಲ್ಲಿ ರಾಧಿಕಾ ಅಭಿನಯಿಸಿದರು. ಇವಿರಿಬ್ಬರ ಕೆಮಿಸ್ಟ್ರಿ ಜನರ ಮನಗೆದ್ದಿತು. 2016 ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು, ಆ ಬಳಿಕ 2019ರಲ್ಲಿ ರಿಲೀಸ್ ಆದಿಲಕ್ಷ್ಮೀ ಪುರಾಣ ಸಿನಿಮಾ ಬಿಡುಗಡೆಯಾಯಿತು. ಅದರ ನಂತರ ರಾಧಿಕಾ ಪಂಡಿತ್‌ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. 

 

 

ಇದನ್ನೂ ಓದಿ: ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ? ಅತಿದೊಡ್ಡ Clue ಬಿಟ್ಟು ಕೊಟ್ಟ ಡೈರೆಕ್ಟರ್‌!

ಈಗಲೂ ರಾಧಿಕಾ ಪಂಡಿತ್‌ ಅವರ ಅಭಿಮಾನಿಗಳ ಸಂಖ್ಯೆಗೇನೂ ಕಮ್ಮಿಯಿಲ್ಲ. ಹೊಸ ಫೋಟೋ ಶೇರ್‌ ಮಾಡಿರುವ ರಾಧಿಕಾ ಪಂಡಿತ್‌, "ನಿಮ್ಮ ಇರುವಿಕೆಗೆ ಬೆಲೆ ಕೊಡುವ ಜನರನ್ನು ಎಂದಿಗೂ ಬಿಟ್ಟು ಕೊಡಬೇಡಿ. ಫೋಟೋ ಯಾರು ತೆಗೆದಿದ್ದು ಎಂದು ಕೇಳುವ ಎಲ್ಲರಿಗೂ ನನ್ನ ಉತ್ತರ ಇಲ್ಲಿದೆ. ನನಗೆ ವೈಯಕ್ತಿಕವಾಗಿ ಇರೋದು ಒಬ್ಬರೇ ಒಬ್ಬ ಫೋಟೋಗ್ರಾಫರ್‌" ಎಂದು ಬರೆದಿದ್ದಾರೆ. ಈ ಮೂಲಕ ತಮ್ಮ ಫೋಟೋಗ್ರಾಫರ್ ಯಶ್ ಎಂಬುದನ್ನು ರಿವೀಲ್ ಮಾಡಿದ್ದಾರೆ. ಈ ಕ್ಯೂಟ್‌ ಕ್ಯಾಪ್ಶನ್‌ ಮೂಲಕ ರಾಧಿಕಾ ಅವರ ಫೋಟೋಗಳನ್ನು ಸೆರೆ ಹಿಡುಯುವ ವ್ಯಕ್ತಿ ಬೇರಾರೂ ಅಲ್ಲ ಅವರ ಪತಿ, ಸೂಪರ್‌ ಸ್ಟಾರ್‌ ಯಶ್‌ ಎಂಬುದನ್ನ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News