Pushpa 2: ʻಪುಷ್ಪ-2ʼ ಫಸ್ಟ್‌ ಸಾಂಗ್‌ ಅಪ್‌ಡೇಟ್‌: 'ಪುಷ್ಪ ಪುಷ್ಪ​' ಪ್ರೋಮೋ ಔಟ್.!

Pushpa 2 Update: ಐಕಾನ್‌ ಸ್ಟಾರ್‌  ಅಲ್ಲು ಅರ್ಜುನ್​ ನಟನೆಯ ಬಹುನಿರೀಕ್ಷಿತ ʻಪುಷ್ಪ-2ʼ ಸಿನಿಮಾದ ಮೊದಲ ಹಾಡು ʻಪುಷ್ಪ ಪುಷ್ಪ ಪುಷ್ಪರಾಜ್....ʼ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Apr 24, 2024, 05:27 PM IST
  • ಪುಷ್ಪರಾಜ್‌ನ ಹೊಸ ಅವತಾರವನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸದ್ಯ "ಪುಷ್ಪ ಪುಷ್ಪ" ಸಾಂಗ್‌ನ ಲಿರಿಕಲ್ ಪ್ರೋಮೋ ರಿಲೀಸ್‌ ಆಗಿದೆ.
  • ʻಪುಷ್ಪ: ದಿ ರೈಸ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಅಲ್ಲು ಅರ್ಜುನ್‌ ಮ್ಯಾನರಿಸಂ, ಡ್ಯಾನ್ಸ್ ನೋಡಿ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಅಭಿಮಾನಿಗಳಲ್ಲೂ ಫೀವರ್​ ಹುಟ್ಟಿಸಿತ್ತು.
  • ʻಪುಷ್ಪ 2: ದಿ‌ ರೂಲ್ʼ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡಿದ್ದಾರೆ.
Pushpa 2: ʻಪುಷ್ಪ-2ʼ ಫಸ್ಟ್‌ ಸಾಂಗ್‌ ಅಪ್‌ಡೇಟ್‌: 'ಪುಷ್ಪ ಪುಷ್ಪ​' ಪ್ರೋಮೋ ಔಟ್.!  title=

Pushpa 2 First Song Promo Released: ಟಾಲಿವುಡ್‌ ಐಕಾನ್‌ ಸ್ಟಾರ್‌  ಅಲ್ಲು ಅರ್ಜುನ್​ ಅಭಿನಯದ ಬಹುನಿರೀಕ್ಷಿತ ʻಪುಷ್ಪ-2ʼ ಚಿತ್ರದ ಫಸ್ಟ್‌ ಸಾಂಗ್‌ ಪ್ರೋಮೋ ರಿಲೀಸ್‌ ಆಗಿದೆ. ಈಗಾಗಲೇ ಈ ಸಿನಿಮಾದ ಟೀಸರ್  ಅರ್ಜುನ್ ಹುಟ್ಟುಹಬ್ಬದಂದು ಚಿತ್ರತಂಡ ರಲೀಸ್‌ ಮಾಡಿತ್ತು. ಈ ಝಲಕ್‌ ನೋಡಿದ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ. ಮತ್ತಷ್ಟು ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಚಿತ್ರದ ಮೊದಲ ಹಾಡಿನ ತುಣುಕು ಬಿಡುಗಡೆಯಾಗಿದೆ.

ಪುಷ್ಪರಾಜ್‌ನ ಹೊಸ ಅವತಾರವನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸದ್ಯ "ಪುಷ್ಪ ಪುಷ್ಪ" ಸಾಂಗ್‌ನ ಲಿರಿಕಲ್ ಪ್ರೋಮೋ ರಿಲೀಸ್‌ ಆಗಿದೆ. ಈ ಹಾಡಿನ ಝಲಕ್‌ನಲ್ಲಿ ಚಿತ್ರದ ಮೊದಲ ಹಾಡಿನ​ ರಿಲೀಸ್​ ಡೇಟ್ ಅನ್ನು ಕೂಡ ರಿಲೀಸ್‌ ಮಾಡಲಾಗಿದೆ. ʻಪುಷ್ಪ ಪುಷ್ಪ ಪುಷ್ಪರಾಜ್....ʼ  ಫುಲ್‌ ಸಾಂಗ್‌ ಇದೇ ಮೇ 1 ಬುಧವಾರದಂದು ಬೆಳಗ್ಗೆ 11.07ಕ್ಕೆ ರಿಲೀಸ್ ಆಗಲಿದೆ. ಪ್ರೋಮೋ ಮೂಲಕ ಈ ಮಾಸ್‌ ಹಾಡು ಇನ್ನಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Pushpa 2: ʻಪುಷ್ಪ 2ʼ ತಂಡದಿಂದ ಸರ್ಪ್ರೈಸ್: ಫಸ್ಟ್‌ ಸಾಂಗ್‌ ಅಪ್‌ಡೇಟ್‌ ರಿವೀಲ್!

ʻಪುಷ್ಪ: ದಿ ರೈಸ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಅಲ್ಲು ಅರ್ಜುನ್‌ ಮ್ಯಾನರಿಸಂ, ಡ್ಯಾನ್ಸ್ ನೋಡಿ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಅಭಿಮಾನಿಗಳಲ್ಲೂ ಫೀವರ್​ ಹುಟ್ಟಿಸಿತ್ತು. ಈ ಚಿತ್ರದ ಡೈಲಾಗ್‌ಗಳು ಮತ್ತು ಸಿಗ್ನೇಚರ್ ಡ್ಯಾನ್ಸ್ ಕೂಡ ಎಲ್ಲರನ್ನೂ ಹುಚ್ಚೆಬ್ಬಿಸಿತ್ತು. ಇದೀಗ ಅಲ್ಲು ಅರ್ಜುನ್‌ ಮತ್ತೊಮ್ಮೆ ಫ್ಯಾನ್ಸ್‌ ಕ್ರೇಜ್‌ ಹೆಚ್ಚಿಸಲು ಭರ್ಜರಿಯಾಗಿ ಎಂಟ್ರೀ ನೀಡಲು ರೆಡಿಯಾಗಿದ್ದಾರೆ. ಅದರಂತೆ ಪುಷ್ಪ 2 ಸಿನಿಮಾ ಪ್ರಚಾರ ಕೂಡ ಜೋರಾಗಿದೆ.

ʻಪುಷ್ಪ 2: ದಿ‌ ರೂಲ್ʼ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ  ಬಣ್ಣ ಹಚ್ಚಿದ್ದಾರೆ. ಹಾಗೆಯೇ ಇದರಲ್ಲಿ ಅನೇಕ ಕಲಾವಿದರಾದ ಫಹಾದ್ ಫಾಜಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದ ಹಾಡುಗಳನ್ನು ಸಂಗೀತ ಸಂಯೋಜಕ ದೇವಿ ಶ್ರೀಪ್ರಸಾದ್ ಕಂಪೋಸ್‌ ಮಾಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News