ʼಕಬ್ಜʼ ಸಿನಿಮಾ ಕುರಿತು ಅಂದು ʼಅಪ್ಪುʼ ನುಡಿದಿದ್ದ ಭವಿಷ್ಯ ಇಂದು ಸತ್ಯವಾಗಿವೆ..! 

ನಿರ್ದೇಶಕ ಆರ್. ಚಂದ್ರು ಅಂದ್ರೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಅದೇನು ಅಕ್ಕರೆ.. ಅದೇನೋ ಪ್ರೀತಿ. ಚಂದ್ರು ಜೊತೆ ಶಿವರಾಜ್‍ಕುಮಾರ್ ಅವರು ಮೈಲಾರಿ ಸಿನಿಮಾ ಮಾಡಿದ್ದಾಗ ಅಪ್ಪುನೇ ದನಿಯಾಗಿದ್ರು.. ʼಮೈಲಾಪುರ ಮೈಲಾರಿʼ ಅಂತ ಕಂಠ ಕುಣಿಸಿ, ಆ ಹಾಡಿಗೊಂದು ಎನರ್ಜಿ ತುಂಬಿದ್ರು. ಕುಂತಲ್ಲೇ ಕುಣಿಸುವಂತಹ ಪವರ್ ತುಂಬಿದ್ರು. ಅಂದಿನಿಂದಲೂ ಆರ್.ಚಂದ್ರು ಮೇಕಿಂಗ್.. ತೆರೆಮೇಲೆ ಕಥೆ ಹೇಳುವ ಶೈಲಿ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು.

Written by - YASHODHA POOJARI | Edited by - Krishna N K | Last Updated : Mar 15, 2023, 07:11 PM IST
  • ನಿರ್ದೇಶಕ ಆರ್. ಚಂದ್ರು ಅಂದ್ರೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಡುವೆ ಉತ್ತಮ ಬಾಂಧವ್ಯ ಇತ್ತು.
  • ಚಂದ್ರು ಜೊತೆ ಶಿವರಾಜ್‍ಕುಮಾರ್ ಅವರು ಮೈಲಾರಿ ಸಿನಿಮಾ ಮಾಡಿದ್ದಾಗ ಅಪ್ಪುನೇ ದನಿಯಾಗಿದ್ರು..
  • ಪ್ಯಾನ್ ವರ್ಲ್ಡ್‌ ಸಿನಿಮಾ ಮಾಡ್ತೀನಿ ಅಂತ ಆರ್. ಚಂದ್ರು ಹೊರಟಾಗ. ಅಪ್ಪು ಅಚ್ಚರಿ ವ್ಯಕ್ತಪಡಿಸಿದ್ರು..
ʼಕಬ್ಜʼ ಸಿನಿಮಾ ಕುರಿತು ಅಂದು ʼಅಪ್ಪುʼ ನುಡಿದಿದ್ದ ಭವಿಷ್ಯ ಇಂದು ಸತ್ಯವಾಗಿವೆ..!  title=

Kabzaa : ನಿರ್ದೇಶಕ ಆರ್. ಚಂದ್ರು ಅಂದ್ರೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಅದೇನು ಅಕ್ಕರೆ.. ಅದೇನೋ ಪ್ರೀತಿ. ಚಂದ್ರು ಜೊತೆ ಶಿವರಾಜ್‍ಕುಮಾರ್ ಅವರು ಮೈಲಾರಿ ಸಿನಿಮಾ ಮಾಡಿದ್ದಾಗ ಅಪ್ಪುನೇ ದನಿಯಾಗಿದ್ರು.. ʼಮೈಲಾಪುರ ಮೈಲಾರಿʼ ಅಂತ ಕಂಠ ಕುಣಿಸಿ, ಆ ಹಾಡಿಗೊಂದು ಎನರ್ಜಿ ತುಂಬಿದ್ರು. ಕುಂತಲ್ಲೇ ಕುಣಿಸುವಂತಹ ಪವರ್ ತುಂಬಿದ್ರು. ಅಂದಿನಿಂದಲೂ ಆರ್.ಚಂದ್ರು ಮೇಕಿಂಗ್.. ತೆರೆಮೇಲೆ ಕಥೆ ಹೇಳುವ ಶೈಲಿ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು.

ಜೊತೆಗೊಂದು ಸಿನಿಮಾ ಮಾಡೋಣ ಅಂತ್ಲೂ ಸಹ ಸಾಕಷ್ಟು ಬಾರಿ ಹೇಳಿಕೊಂಡಿದ್ರು.. ಆದ್ರೆ ಅದು ಸಾಧ್ಯವಾಗಲಿಲ್ಲ ಅನ್ನೋದು ವಿಧಿ ಕೈವಾಡ. ಇನ್ನು ಕಬ್ಜ ಸಿನಿಮಾ ಆರ್. ಚಂದ್ರು ಮಹತ್ವಕಾಂಕ್ಷೆಯ ಚಿತ್ರ. ಈ ಬಿಗ್‌ ಬಜೆಟ್ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ.. ಪ್ಯಾನ್ ವರ್ಲ್ಡ್‌ ಸಿನಿಮಾ ಮಾಡ್ತೀನಿ ಅಂತ ಆರ್. ಚಂದ್ರು ಹೊರಟಾಗ. ಅಪ್ಪು ಅಚ್ಚರಿ ವ್ಯಕ್ತಪಡಿಸಿದ್ರು.. ಇಷ್ಟೊಂದು ರಿಸ್ಕ್ ತೆಗೆದುಕೊಂಡಿದ್ದೀರಿ ಹುಷಾರು ಅಂತ ಎಚ್ಚರಿಸಿದ್ರು ಅಲ್ಲದೆ, ಜೊತೆಗೆ ನಾನಿದ್ದೀನಿ ಅಂತ ಬೆನ್ನೆಲುಬಾಗಿ ನಿಂತಿದ್ದರಂತೆ.

ಇದನ್ನೂ ಓದಿ: ಕಾಲೇಜ್ ಡೇಸ್‌ನಲ್ಲಿ ಜಾಸ್ತಿ ಹುಡುಗ್ರು ನನ್ನಿಂದೆ ಬಿಳ್ತಿದ್ರು..! ಆಗ ನಾನೇ ಹೀರೋಯಿನ್

ಆರ್ ಚಂದ್ರು ಸ್ಯಾಂಡಲ್‍ವುಡ್‍ನ ಬಿಗ್ ಬಜೆಟ್ ಸಿನಿಮಾ ಮಾಡ್ತಿದ್ದಾರೆ ಅಂದಾಗ ಪುನೀತ್‍ಗೂ ಆ ಸಿನಿಮಾ ಸೆಟ್‍ಗೆ ಹೋಗಬೇಕು. ಹೇಗೆ ಮೇಕಿಂಗ್ ಮಾಡ್ತಿದ್ದಾರೆ ನೋಡಬೇಕು ಎಂಬ ಕುತೂಹಲ ಹುಟ್ಟದೇ ಇರಲಿಲ್ಲ. ಹೀಗಾಗಿನೇ ಕಬ್ಜ ಸೆಟ್‍ಗೆ ನಗುಮುಖದ ರಾಜಕುಮಾರ ಎಂಟ್ರಿಕೊಟ್ಟಿದ್ದರು. ಮಾನಿಟರ್‌ನಲ್ಲಿ ಶಾಟ್ಸ್ ನೋಡ್ತಾ ಖುಷಿಪಟ್ಟಿದ್ರು. ನೀವು ಸಾಮಾನ್ಯರಲ್ಲ ಅಂತ ಚಂದ್ರು ಬೆನ್ನು ತಟ್ಟಿದ್ರು. ಇದು ದೊಡ್ಡ ಸಿನಿಮಾ ಆಗುತ್ತೆ ಅಂತ ಭವಿಷ್ಯ ನೋಡಿದ್ರು..

ಚಂದ್ರು ಮೇಕಿಂಗ್ ಶೈಲಿಗೆ ಫಿದಾ ಆಗಿದ್ರು ಪವರ್‍ಸ್ಟಾರ್.. ಅನ್ನ ಬೆಂದಿದಿಯಾ ಇಲ್ವ ಅಂತ ತಿಳಿಯೋಕೆ ಒಂದು ಅಗಳು ಮುಟ್ಟಿದ್ರೆ ಸಾಕಲ್ವಾ? ಹಾಗೆ ಶೂಟಿಂಗ್ ಸಮಯದಲ್ಲಿನ ಕೆಲವು ಶಾಟ್ಸ್ ನೋಡಿಯೇ ಇದು ಇಂಡಿಯನ್ ಸಿನಿಮಾದ ಬಿಗ್ಗೆಸ್ಟ್ ಥಿಂಗ್ ಆಗುತ್ತೆ ಅಂತ ಹೃದಯದಿಂದ ನುಡಿದಿದ್ರು ಕೋಟ್ಯಾನು ಕೋಟಿ ಹೃದಯದ ಅರಸು.. ಕನ್ನಡಿಗರ ನಿಜ ದೈವ.. ಪರಮಾತ್ಮ ಅಪ್ಪು

ಇದನ್ನೂ ಓದಿ: ಡಾಲಿ ʼಹೊಯ್ಸಳʼ ಸಿನಿಮಾದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್..!

ಕಬ್ಜ ರಿಲೀಸ್‍ಗೆ ಸಜ್ಜಾಗಿದೆ.. ಅಪ್ಪು ನುಡಿದಂತೆಯೇ ಬಿಗ್ಗೆಸ್ಟ್ ಥಿಂಗ್ ಆಗಿದೆ.. ಎಲ್ಲೆಡೆ ಸುನಾಮಿ ಸುಂಟರಗಾಳಿಯನ್ನ ಎಬ್ಬಿಸಿದೆ.. ಟ್ರೈಲರ್ ನೋಡಿ ಅಮಿತಾಭ್ ಫಿದಾ ಆಗಿದ್ದಾರೆ.. ಬಹುಪರಾಕ್ ಹೇಳಿದ್ದಾರೆ.. ಅಮಿತಾಭ್ ಪುತ್ರರತ್ನ ಅಭಿಷೇಕ್ ಕೂಡ ಜೈ ಅಂದಿದ್ದಾರೆ.. ಅಜಯ್ ದೇವಗನ್ ಉಘೇ ಉಘೇ ಅಂದ್ರೆ? ರಾಕೇಶ್ ರೋಷನ್ ಸಹ ಮನಸಾರೆ ಕೊಂಡಾಡಿದ್ದಾರೆ... ಇದು ಕನ್ನಡ ಸಿನಿಮಾದ ಗತ್ತು ತಾಕತ್ತು..

ವಿಶೇಷ ಅಂದ್ರೆ ಕರುನಾಡ ರಾಜರತ್ನ.. ಕರ್ನಾಟಕ ರತ್ನನಿಗೆ ಈ ಬಿಗ್ಗೆಸ್ಟ್ ಸಿನಿಮಾನಾ ಟ್ರಿಬ್ಯೂಟ್ ಮಾಡ್ತಿದ್ದಾರೆ.. ನಗುಮೊಗದ ರಾಜಕುಮಾರನಿಗೆ ಎಂದೂ ಮಾಸದ ಬೆಟ್ಟದ ಹೂವಿಗೆ ಅರ್ಪಣೆ ಮಾಡ್ತಿದ್ದಾರೆ ಆರ್.ಚಂದ್ರು.. ಹೀಗಾಗಿ ಮಾರ್ಚ್ 17 ಕನ್ನಡಿಗರು ಎಂದೂ ಮರೆಯದ ದಿನ, ಅಪ್ಪು ಹುಟ್ಟಿದ ಸುದಿನ ಕಬ್ಜ ತೆರೆಗೆ ಅಪ್ಪಳಿಸ್ತಿದೆ.. ಬಾಕ್ಸಾಫೀಸ್‍ಗೆ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News