Puneeth Rajkumar : ಜೋಗ ಜಲಪಾತದ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್...ದೊಡ್ಮನೆ ಕುಡಿಯ ವಿಡಿಯೋ ನೋಡಿ

Puneeth Rajkumar Push Up Video Viral : ಫಿಟ್ನೇಸ್‌ ಕಡೆಗೆ ಹೆಚ್ಚು ಒಲವು ತೋರುತ್ತಿದ್ದ ಕನ್ನಡಿಗರ ಮನೆಮಗ ಅಪ್ಪು. ಇದೀಗ ಇವರ ಪುಶ್‌ ಅಪ್ಸ್‌, ಬ್ಯಾಕ್‌ ಫ್ಲಿಪ್‌ ಮಾಡುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.   

Written by - Savita M B | Last Updated : Jul 15, 2023, 11:30 AM IST
  • ಅಪ್ಪು ಹೆಸರು ಕೇಳಿದರೇ ಕಣ್ಣಂಚಲ್ಲಿ ನೀರು ಬರುತ್ತೆ
  • ಈ ಮದ್ಯ ಅಪ್ಪು ಅವರ ಹಳೆ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ
  • ವಿಡಿಯೋದಲ್ಲಿ ಅಪ್ಪು ಜೋಗ ಜಲಪಾತದ ಎತ್ತರದಲ್ಲಿ ಪುಶ್‌ ಆಪ್ಸ್‌ ಮಾಡಿದ್ದಾರೆ
Puneeth Rajkumar : ಜೋಗ ಜಲಪಾತದ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್...ದೊಡ್ಮನೆ ಕುಡಿಯ ವಿಡಿಯೋ ನೋಡಿ title=

Appu Push Up Post : ಸಾವಿನ ನೆನಪಿನಲ್ಲಿ ದೂರವಾದರೂ ಸಾವಿರ ನೆನಪುಗಳಲ್ಲಿ ಜೀವಿಸುತ್ತಿರುವ ಅಪ್ಪು ಹೆಸರು ಕೇಳಿದರೇ ಕಣ್ಣಂಚಲ್ಲಿ ನೀರು ಬರುತ್ತೆ. ಇವರ ಅಗಲುವಿಕೆಯನ್ನು ಇನ್ನು ಅರಗಿಸಿಕೊಳ್ಳಲಾಗದ ಎಷ್ಟೋ ಅಭಿಮಾನಿಗಳು ಅವರನ್ನು ನೆನಯದೇ ಇರುವ ದಿನಗಳಿಲ್ಲ, ಕ್ಷಣಗಳಿಲ್ಲ. ಈ ಮದ್ಯ ಅಪ್ಪು ಅವರ ಹಳೆ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಅಪ್ಪು ಅವರ ವಿಡಿಯೋ ನೋಡಿದ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತುಂಬಿವೆ...ಈ ವಿಡಿಯೋವನ್ನು ಸಂಗೀತ ನಿರ್ದೇಶಕ, ಗಾಯಕ ನವೀನ್‌ ಸಜ್ಜು ತಮ್ಮ ಪೇಸ್ ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ಪುನೀತ್‌ ರಾಜಕುಮಾರ್‌ ಪುಶ್‌ ಅಪ್ಸ್‌ ಮಾಡಿದ್ದಾರೆ. ಅವರ ಸಾಕಷ್ಟು ವಿಡಿಯೋಗಳು ವೈರ್‌ ಆಗಿರಬಹುದು ಆದರೆ ಇದು ತುಂಬಾನೇ ಸ್ಪೇಷಲ್‌. 

 

ಇದನ್ನೂ ಓದಿ-Anchor Anushree : ಈ ಹುಡುಗಿ ಯಾರೆಂದು ಗೊತ್ತ?..ಸ್ಕೂಲ್‌ ನೆನಪು ಮೆಲುಕು ಹಾಕಿದ ಟಾಪ್‌ ನಿರೂಪಕಿ

ಹೌದು ಈ ವಿಡಿಯೋದಲ್ಲಿ ಅಪ್ಪು ಜೋಗ ಜಲಪಾತದ ಎತ್ತರದಲ್ಲಿ ಪುಶ್‌ ಆಪ್ಸ್‌ ಮಾಡಿದ್ದಾರೆ. ಜೋಗ್‌ ಫಾಲ್ಸ್‌ ಎತ್ತರದ ಬಂಡೆಯ ತುದಿಯಲ್ಲಿ ಅಪ್ಪು 50 ಪುಶ್‌ ಆಪ್ಸ್‌ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.

ಪುನೀತ್‌ ರಾಜಕುಮಾರ್‌ ಫಿಟ್ನೆಸ್‌ಗೆ ಹೆಚ್ಚು ಗಮನ ನೀಡುತ್ತಿದ್ದರು. ಅವರ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ವಿಪರ್ಯಾಸವೆಂದರೇ ಇಂತಹ ಆರೋಗ್ಯವಂತ ಮತ್ತು ಉತ್ತಮ ವ್ಯಕ್ತಿಯನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು ಊಹಿಸಲಾಗದ ಸಂಗತಿ..ಆದರೆ ಅಪ್ಪು ಅಮರ ಎನ್ನುವಂತೆ ಅವರು ಎಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರ. 

ಇದನ್ನೂ ಓದಿ-ಸೈಫ್ ಮಾತ್ರವಲ್ಲ, ಈ ತಾರೆಯರು ಸಹ ರಾಜಮನೆತನದ ಕುಡಿಗಳು.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News