Priyanka Singh: ʻಒಂದು ರಾತ್ರಿಗೆ ನಿನ್ನ ರೇಟ್‌ ಎಷ್ಟು?ʼ : ಖಡಕ್‌ ಆಗಿ ಉತ್ತರಿಸಿದ ಬಿಗ್‌ ಬಾಸ್‌ ಪ್ರಿಯಾಂಕಾ!

Priyanka Singh Response: ಪ್ರಿಯಾಂಕಾ ಸಿಂಗ್ ಸೋಶಿಯಲ್‌ ಮಿಡಿಯಾದಲ್ಲಿ ನೆಟ್ಟಿಗನೊಬ್ಬನು ಒಂದು ರಾತ್ರಿಗೆ ನಿನ್ನ ರೇಟ್‌ ಎಷ್ಟು ಎಂದು ಕೇಳಿದಕ್ಕೆ ಖಾರವಾಗಿ ಉತ್ತರವನ್ನು ನೀಡಿದ್ದಾರೆ. ಹಾಗಿದ್ರೇ ಆತ ಯಾರು? ಈಕೆಯ ಉತ್ತರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ  

Written by - Zee Kannada News Desk | Last Updated : Apr 25, 2024, 10:28 AM IST
  • ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ಪ್ರಿಯಾಂಕಾ ಸಿಂಗ್‌ ಆಗಾಗ ಫೋಟೋಶೂಟ್‌ ಮಾಡಿಸಿ ಫ್ಯಾನ್ಸ್‌ ಜೊತೆಗೆ ಶೇರ್‌ ಮಾಡಿಕೊಳ್ಳುತ್ತಿದ್ದು, ಈಕೆಯ ಫೋಟೋಸ್‌ ಕೂಡ ವೈರಲ್‌ ಆಗಿತ್ತು.
  • ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಹೋದಾಗಾ ಪ್ರಿಯಾಂಕ ಸಿಂಗ್‌ಗೆ ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದು, ಅವುಗಳಲ್ಲಿ ಒಬ್ಬರ ಪ್ರಶ್ನೆಗೆ ಆಕ್ರೋಶ ಹೊರಹಾಕಿದ್ದಾರೆ.
  • ಪ್ರಿಯಾಂಕಾ ಸಿಂಗ್‌ ಮೊದಲು ಜಬರ್ದಸ್ತ್ ಕಾಮೆಡಿ ಶೋನಲ್ಲಿ ಸಾಯಿ ತೇಜ ಆಗಿ ಪೇಕ್ಷಕರ ಗಮನ ಸೆಳೆದಿದ್ದರು. ಅದರಲ್ಲಿ ಇವರು ಲೇಡಿ ಗೆಟಪ್‌ಗಳನ್ನು ಹಾಕಿಕೊಂಡು ಮನೋರಂಜಿಸುತ್ತಿದ್ದರು.
Priyanka Singh: ʻಒಂದು ರಾತ್ರಿಗೆ ನಿನ್ನ ರೇಟ್‌ ಎಷ್ಟು?ʼ : ಖಡಕ್‌ ಆಗಿ ಉತ್ತರಿಸಿದ ಬಿಗ್‌ ಬಾಸ್‌ ಪ್ರಿಯಾಂಕಾ! title=

Priyanka Singh Response To Netizen: ತೆಲುಗು ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ  ಪ್ರಿಯಾಂಕಾ ಸಿಂಗ್ ಸೋಶಿಯಲ್‌ ಮಿಡಿಯಾದಲ್ಲಿ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ಪ್ರಿಯಾಂಕಾ ಸಿಂಗ್‌ ಆಗಾಗ ಫೋಟೋಶೂಟ್‌ ಮಾಡಿಸಿ ಫ್ಯಾನ್ಸ್‌ ಜೊತೆಗೆ ಶೇರ್‌ ಮಾಡಿಕೊಳ್ಳುತ್ತಿದ್ದು, ಈಕೆಯ ಫೋಟೋಸ್‌ ಕೂಡ ವೈರಲ್‌ ಆಗಿತ್ತು. ಈಕೆಯದೇ ಒಂದು ಯೂಟ್ಯೂಬ್‌ ಚಾನಲ್ ಕೂಡ ಇದೆ.

ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಕೂಡ ಬಂದು ಅಭಿಮಾನಿಗಳ ಜೊತೆಗೆ ಮಾತನಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಹೋದಾಗಾ ಪ್ರಿಯಾಂಕ ಸಿಂಗ್‌ಗೆ ಸಾಕಷ್ಟು ಜನ ಪ್ರಶ್ನೆಗಳನ್ನು ಕೇಳಿದ್ದು, ಅವುಗಳಲ್ಲಿ ಒಬ್ಬರ ಪ್ರಶ್ನೆಗೆ ಆಕ್ರೋಶ ಹೊರಹಾಕಿದ್ದಾರೆ. ಈಕೆ ಸ್ಕ್ರೀನ್‌ಶಾಟ್ ಸಮೇತ  ಅದಕ್ಕೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಪ್ರಿಯಾಂಕಾಗೆ ನೆಟ್ಟಿಗನೊಬ್ಬರು ಕಾಮೆಂಟ್‌ನಲ್ಲಿ ನೀವು ನನ್ನೊಂದಿಗೆ ಡೇಟಿಂಗ್ ಮಾಡುತ್ತೀಯಾ? ಒಂದು ರಾತ್ರಿಗೆ ಎಷ್ಟು ತಗೋತಿಯಾ? ಎಂದು ಪ್ರಶ್ನಿಸಿದ್ದಾನೆ. 

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !

ಇದರಿಂದ ಕೆಂಡಾಮಂಡಲವಾದ ಪ್ರಿಯಾಂಕಾ ಈತನಿಗೆ ಕೊಂಚ ಖಾರವಾಗಿಯೇ ಉತ್ತರ ನೀಡಿದ್ದಾರೆ. ಪ್ರಿಯಾಂಕಾ ಸೋಶಿಯಲ್‌ ಮಿಡಿಯಾದಲ್ಲಿ "ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ,ಒಂದು ಕೆಲಸ ಮಾಡು, ನಿಮ್ಮ ತಂದೆ ನಿಮ್ಮ ತಾಯಿ ಜೊತೆ ಆ ಕೆಲಸ ಮಾಡಲು ಎಷ್ಟು ತೆಗೆದುಕೊಂಡರೋ ಕೇಳಿ ತಿಳಿದುಕೊಂಡು ಅಷ್ಟು ನನಗೆ ಕೊಡು" ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ. ಪ್ರಿಯಾಂಕ ಸಿಂಗ್ ಕಾಮೆಂಟ್ ನೋಡಿ ಆತನಿಗೆ ಶಾಕ್‌ ಆಗಿದ್ದು, ಸದ್ಯ ಅದಕ್ಕೆ ಸಂಬಂಧಿಸಿ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. 

ಪ್ರಿಯಾಂಕಾ ಸಿಂಗ್‌ ಮೊದಲು ಜಬರ್ದಸ್ತ್ ಕಾಮೆಡಿ ಶೋನಲ್ಲಿ ಸಾಯಿ ತೇಜ ಆಗಿ ಪೇಕ್ಷಕರ ಗಮನ ಸೆಳೆದಿದ್ದರು. ಅದರಲ್ಲಿ ಇವರು ಲೇಡಿ ಗೆಟಪ್‌ಗಳನ್ನು ಹಾಕಿಕೊಂಡು ಮನೋರಂಜಿಸುತ್ತಿದ್ದು, ತದನಂತರ ದಿಢೀರ್ ನಾಪತ್ತೆ ಆಗಿದ್ದರು. ಆ ಸಮಯದಲ್ಲಿ ಸಾಯಿ ತೇಜ ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದರು. ಸಾಯಿ ತೇಜ ಲಿಂಗ ಬದಲಾವಣೆ ಸರ್ಜರಿ ಮೂಲಕ ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದು, ಇದರ ಬಗ್ಗೆ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News