Priyanka Chopra : ಕಿರಿಯನಾದ್ರೂ ಜವಾಬ್ದಾರಿಯುತ ಅಪ್ಪ; ನಿಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ನಿಕ್‌ ..!

Priyanka Chopra : ಜೂನ್‌ 18 ವಿಶ್ವಾದ್ಯಂತ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಜನಸಾಮಾನ್ಯರು, ಸೆಲೆಬ್ರಿಟಿಗಳು ತಮ್ಮ ಜೀವನದ ಪ್ರತಿ ಹಂತದಲ್ಲಿ ಸೂಪರ್‌ ಹಿರೋ ಆಗಿರುವ ತಂದೆ ಹಾಗೂ ಮಕ್ಕಳ ಜೊತೆಗಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಟೋಗಳು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.   

Written by - Savita M B | Last Updated : Jun 19, 2023, 02:40 PM IST
  • ತಮಗಿಂತ 10 ವರ್ಷ ಕಿರಿಯರಾದ ನಿಕ್‌ ಜೋನಸ್‌ರನ್ನು ಪ್ರಿಯಾಂಕಾ ಚೋಪ್ರಾ ಮದುವೆಯಾದರು
  • ನಟಿ ಈಗ ಒಂದು ಹೆಣ್ಣು ಮಗುವಿನ ತಾಯಿ.
  • ತಮ್ಮ ಚಿಕ್ಕ ಕುಟುಂಬದೊಂದಿಗೆ ವಿದೇಶದಲ್ಲಿ ಖುಷಿಯಾಗಿದ್ದಾರೆ.
Priyanka Chopra : ಕಿರಿಯನಾದ್ರೂ ಜವಾಬ್ದಾರಿಯುತ ಅಪ್ಪ; ನಿಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ನಿಕ್‌ ..!  title=

Nickjonas : ಪ್ರಿಯಾಂಕಾ ಚೋಪ್ರಾ ತಮಗಿಂತ 10 ವರ್ಷ ಕಿರಿಯರಾದ ನಿಕ್‌ ಜೋನಸ್‌ ಅವರೊಂದಿಗೆ ಡೇಟ್‌ ಮಾಡುವ ಸುದ್ದಿಯನ್ನು ತಿಳಿದವರು ಇವರದ್ದು ಇನ್ನು ಮುಂದುವರೆಯುವುದಿಲ್ಲ ಎಂದೆಲ್ಲಾ ಟೀಕೆಗಳನ್ನು ಮಾಡಿದ್ದರು. ಆದರೆ ಈ ಜೋಡಿ ಯಾವುದಕ್ಕೂ ತಲೆಕೊಡದೇ ಮನೆಯವರನ್ನು ಒಪ್ಪಿಸಿ 2018 ಡಿಸೆಂಬರ್‌ನಲ್ಲಿ ಭರ್ಜರಿಯಾಗಿ ಮದುವೆಯಾಗಿ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು. 

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಜೀವನದ ಮೂರು ವ್ಯಕ್ತಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಜನಿಸಿದ್ದು ಬಿಹಾರದ ಮಿಡಲ್‌ಕ್ಲಾಸ್‌ ಫ್ಯಾಮಿಲಿಯಲ್ಲಿ.

ಈಗ ಅವರು ಗ್ಲೋಬಲ್‌ ಸ್ಟಾರ್‌. ಅಮೆರಿಕಾದ ಖ್ಯಾತ ಪಾಪ್‌ ಗಾಯಕ ನಿಕ್‌ ಜೋನಸ್‌ ಅವರನ್ನು ವಿವಾಹವಾದ ನಟಿ ಈಗ ಒಂದು ಹೆಣ್ಣು ಮಗುವಿನ ತಾಯಿ. ತಮ್ಮ ಚಿಕ್ಕ ಕುಟುಂಬದೊಂದಿಗೆ ವಿದೇಶದಲ್ಲಿ ಖುಷಿಯಾಗಿದ್ದಾರೆ. ಸದ್ಯಕ್ಕೆ ಇವರು ಬಾಲಿವುಡ್‌ಗಿಂತ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ-ಆಶಿಕಾ ರಂಗನಾಥ್‌ ಗಂಡ ಈ ನಟನ ಹಾಗೆ ಇರಬೇಕಂತೆ.. ಆದ್ರೆ ನಟಿ ಪ್ರಪೋಸ್‌ ಮಾಡೋದು ಬೇರೆಯವ್ರಿಗಂತೆ..

ಇನ್ನು ಬಾನುವಾರ ವಿಶ್ವ ತಂದೆಯರ ದನದಂದು ನಟಿ ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ನಿಕ್‌, ಮಾವ ಪೌಲ್‌, ತಾಯಿ ಮಧು ಚೋಪ್ರಾ, ಅಶೋಕ್‌ ಚೋಪ್ರಾ ಫೋಟೋಗಳನ್ನು ಹಂಚಿಕೊಂಡು ಎಲ್ಲರಿಗೂ ಶುಭಾಶಯದ ಜೊತೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ಪೋಟೋಗಳಲ್ಲಿ ನಿಕ್‌ ಜೋನಸ್‌, ಮಗಳು ಮಾಲ್ತಿಯನ್ನು ತಮ್ಮ ತೊಡೆಯ ಮೇಲೆ ಕುಳಿಸಿಕೊಂಡು ಪುಸ್ತಕ ತೋರಿಸುತ್ತಾ ಪಾಠ ಹೇಳಿಕೊಡುತ್ತಿದ್ದಾರೆ. 

ಜೊತೆಗೆ ನಟಿ ಪ್ರಿಯಾಂಕಾ ಚೋಪ್ರಾ ಐ ಲವ್‌ ಯು, ನಿನ್ನನ್ನು ಪಡೆದ ನಾನು ಅದೃಷ್ಟವಂತೆ ಎಂದು ನಿಕ್‌ಗೆ, ನೀವು ಇಂದು ಎಂದೆಂದಿಗೂ ಬಹಳ ನನಗೆ ಬಹಳ ಸ್ಪೇಷಲ್‌ ಎಂದು ಮಾವನನ್ನು ಕುರಿತು ಬರೆದುಕೊಂಡು, ಮಿಸ್‌ ಯು ಅಪ್ಪ ಎಂದು ತಮ್ಮ ತಂದೆಯನ್ನು ನೆನೆದಿದ್ದಾರೆ. 

ಇದನ್ನೂ ಓದಿ-ರಜನಿಕಾಂತ್‌, ಪ್ರಭಾಸ್‌ ಇಬ್ಬರೂ ಅಲ್ಲ; ಭಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಬಾರಿ 200 ಕೋಟಿ ಗಳಿಸಿದ್ದು ಈ ನಟನ ಸಿನಿಮಾಗಳು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News