ನಿಕ್ ಜೊತೆ ಪ್ರಿಯಾಂಕ ಚೋಪ್ರಾ ಎಂಗೇಜ್ಮೆಂಟ್!

ಭಾರತೀಯ ಸಂಪ್ರದಾಯದಂತೆ ನಡೆದ ನಿಶ್ಚಿತಾರ್ಥದಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಪ್ರಿಯಂಕ ಕಂಗೊಳಿಸಿದರೆ, ನಿಕ್ ಜಾನ್ಸ್ ಶ್ವೇತ ವರ್ಣದ ಜುರ್ತಾ ಧರಿಸಿ ಎಲ್ಲರ ಗಮನ ಸೆಳೆದರು. 

Last Updated : Aug 18, 2018, 05:33 PM IST
ನಿಕ್ ಜೊತೆ ಪ್ರಿಯಾಂಕ ಚೋಪ್ರಾ ಎಂಗೇಜ್ಮೆಂಟ್! title=

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೇರಿಕಾ ಗಾಯಕ ನಿಕ್ ಜೋನ್ಸ್ ಕಡೆಗೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದುವರೆಗೂ ಅಭಿಮಾನಿಗಳಲ್ಲಿ ಪ್ರಿಯಾಂಕ ಮತ್ತು ನಿಕ್ ಸಂಬಂಧದ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೂ ಈಗ ಬ್ರೇಕ್ ಬಿದ್ದಂತಾಗಿದೆ. 

ಮುಂಬೈನಲ್ಲಿರುವ ಪ್ರಿಯಾಂಕಾ ನಿವಾಸದಲ್ಲಿ ಭಾರತೀಯ ಸಂಪ್ರದಾಯದಂತೆ ನಡೆದ ನಿಶ್ಚಿತಾರ್ಥದಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಪ್ರಿಯಂಕ ಕಂಗೊಳಿಸಿದರೆ, ನಿಕ್ ಜಾನ್ಸ್ ಶ್ವೇತ ವರ್ಣದ ಕುರ್ತಾ ಧರಿಸಿ ಎಲ್ಲರ ಗಮನ ಸೆಳೆದರು. ಇದೀಗ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜಾನ್ಸ್ ಅವರು 2016ರಲ್ಲಿ ಮೆಟ್ ಗಾಲಾ ದಲ್ಲಿ ಮೊದಲಬಾರಿಗೆ ಪರಸ್ಪರ ಭೇಟಿಯಾಗಿದ್ದರಾದರೂ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಈ ವರ್ಷದ ಕಳೆದ ಮೇ ತಿಂಗಳಿನಿಂದ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೆ ಅವರಿಬ್ಬರೂ ಜೊತೆಯಾಗಿ ಹಲವು ಸಮಾರಂಭಗಳಲ್ಲಿ ತೆಗೆಸಿಕೊಂಡಿದ್ದ ಫೋಟೋಗಳು ಕಾರಣವಾಗಿದ್ದವು. 

ಹೀಗೆ ಕಳೆದ 6 ತಿಂಗಳನಿಂದ ಪ್ರಿಯಾಂಕ ಮತ್ತು ನಿಕ್ ಜೊತೆ ಜೊತೆಯಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಇಬ್ಬರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದರು. ಇಂದು ಅಧಿಕೃತವಾಗಿ ವಿವಾಹದ ಮೊದಲ ಹೆಜ್ಜೆಯನ್ನು ಇರಿಸಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

Trending News