ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!

Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ. ಆದರೆ ಪ್ರಿಯಾಂಕಾ ಚೋಪ್ರಾ ಮೊದಲು ಅವಕಾಶ ಪಡೆದಿದ್ದು ಬಾಲಿವುಡ್‌ನಲ್ಲಿ ಅಲ್ಲ. ದಕ್ಷಿಣದ ಈ ಸಿನಿಮಾದಲ್ಲಿ... 

Written by - Chetana Devarmani | Last Updated : Apr 14, 2024, 08:44 AM IST
  • ಪ್ರಿಯಾಂಕಾ ಚೋಪ್ರಾ ಸಿನಿ ಜರ್ನಿ
  • ಪ್ರಿಯಾಂಕಾ ಚೋಪ್ರಾ ಮೊದಲ ಸಿನಿಮಾ
  • ಪ್ರಿಯಾಂಕಾ ಚೋಪ್ರಾ ನಟಿಸಿದ ತಮಿಳು ಸಿನಿಮಾ
ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ! title=

Priyanka Chopra First Movie: ನಟಿ ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ ಸಿನಿಮಾ ತಮಿಳು ಚಿತ್ರ 'ತಮಿಜನ್'. 22 ವರ್ಷಗಳ ಹಿಂದೆ ಈ ಚಿತ್ರ ತೆರೆಕಂಡಿತ್ತು. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಮೂಲಕ ಈ ವಿಚಾರ ಹಂಚಿಕೊಂಡಿದ್ದಾರೆ. 

ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 'ತಮಿಜನ್' ಚಿತ್ರದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ 22 ವರ್ಷಗಳ ಹಿಂದೆ ಬಣ್ಣದ ಲೋಕದ ಪ್ರಯಾಣ ಆರಂಭಿಸಿದರು. ಇದೀಗ ಆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ಇದನ್ನೂ ಓದಿ: Rachitha Ram: 40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್: ಕಲ್ಟ್ ರೋಲ್‌ ಒಪ್ಪಿಕೊಂಡಿದ್ದೇಕೆ ನಟಿ!

ಪ್ರಿಯಾಂಕಾ ಚೋಪ್ರಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದರು. ಎರಡು ವರ್ಷಗಳ ನಂತರ ‘ತಮಿಜನ್’ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು. ಮರುವರ್ಷವೇ ಅವರು 'ಅಂದಾಜ್' ಚಿತ್ರದ ಮೂಲಕ ಹಿಂದಿ ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದರು. ಅಕ್ಷಯ್ ಕುಮಾರ್ ಮತ್ತು ಲಾರಾ ದತ್ತಾ ಕೂಡ ಈ ಚಿತ್ರದಲ್ಲಿದ್ದಾರೆ.

ಪ್ರಿಯಾಂಕಾ ತಮ್ಮ ಮುಂಬರುವ ಚಿತ್ರ 'ಹೆಡ್ಸ್ ಆಫ್ ಸ್ಟೇಟ್ಸ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರ ಚಿತ್ರೀಕರಣ ಫ್ರಾನ್ಸ್‌ನಲ್ಲಿ ನಡೆಯುತ್ತಿದೆ. 'ತಮಿಜನ್'ಗೆ ಸಂಬಂಧಿಸಿದ ಫೋಟೋಗಳ ಜೊತೆಗೆ, ಪ್ರಿಯಾಂಕಾ ತಮ್ಮ ಪೋಸ್ಟ್‌ನಲ್ಲಿ ಮಗಳು ಮಾಲ್ತಿ ಮೇರಿಯ ಫೋಟೋ ಸಹ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News