"ಉಗ್ರಂ ರೀಮೇಕ್ ಅಂದ್ರು ಪರವಾಗಿಲ್ಲ.. ಅದೇ 'ಸಲಾರ್'": ಪ್ರಶಾಂತ್‌ ನೀಲ್‌!

Prashanth Neel: ಸ್ಯಾಂಡಲ್‌ವುಡ್‌ ನಿರ್ದೇಶಕ 'KGF' ಸರಣಿ ಬಳಿಕ 'ಉಗ್ರಂ' ರೀಮೆಕ್ ಯಾಕೆ? ನೀಲ್ ತಲೆ ಖಾಲಿ ಆಯ್ತಾ? ತೆಲುಗಿನಲ್ಲಿ ಈ ಸಿನಿಮಾ ಮಾಡಿದ್ಯಾಕೆ? ಎಂದು ಕೆಲವರು ಮೂದಲಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸದ್ಯ ವೈರಲ್ ಆಗುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 24, 2023, 11:32 AM IST
  • 'ಸಲಾರ್‌' ಸಿನಿಮಾ 'ಉಗ್ರಂ' ರೀಮೆಕ್ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದ್ದು, ಆದರೆ ಚಿತ್ರದ ರಿಲೀಸ್ ಹೊಸ್ತಿಲಲ್ಲೇ, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿದ್ದರು.
  • ಪ್ಯಾಷನ್ ಕಥೆ ಎಲ್ಲಿಂದ ಬರುತ್ತೆ ಹೇಳಿ. ಸಿನಿಮಾ ಈಗ ನನಗೆ ಬ್ಯುಸಿನೆಸ್ ಎಂದು ಪ್ರಶಾಂತ್‌ ನೀಲ್‌ ಮಾತನಾಡಿದ್ದಾರೆ.
  • 'ಉಗ್ರಂ', 'KGF' ಬಿಟ್ರೆ ಇವನಿಗೆ ಏನು ಗೊತ್ತಿಲ್ಲ ಅಂದ್ರು ಪರವಾಗಿಲ್ಲ. 'ಸಲಾರ್' ನನಗೋಸ್ಕರ ಮಾಡಿದ್ದು. ಅದಕ್ಕೆ ಖುಷಿಯಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
"ಉಗ್ರಂ ರೀಮೇಕ್ ಅಂದ್ರು ಪರವಾಗಿಲ್ಲ.. ಅದೇ 'ಸಲಾರ್'": ಪ್ರಶಾಂತ್‌ ನೀಲ್‌! title=

Prashanth Neel talks About Ugram and Salaar: ಟಾಲಿವುಡ್‌ ಸ್ಟಾರ್‌ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಮೊದಲ ದಿನವೇ ಚಿತ್ರ 170 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.'ಸಲಾರ್‌' ಸಿನಿಮಾ 'ಉಗ್ರಂ' ರೀಮೆಕ್ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದ್ದು, ಆದರೆ ಚಿತ್ರದ ರಿಲೀಸ್ ಹೊಸ್ತಿಲಲ್ಲೇ, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಒಪ್ಪಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಪ್ರಶಾಂತ್‌ ನೀಲ್‌, "ಉಗ್ರಂ ನನ್ನ ಮೊದಲ ಸಿನಿಮಾ. ಸಾಕಷ್ಟು ಕಷ್ಟಪಟ್ಟು ಮಾಡಿದ್ದೆ. ನನ್ನ ಒಂದು ಮನೆ ಮಾರಿಕೊಂಡಿದ್ದೆ. ಆದರೆ ಸಿನಿಮಾ ವಿತರಣೆಗೆ ಯಾರು ಮುಂದೆ ಬರಲಿಲ್ಲ. ಆಗ ದರ್ಶನ್ ಸರ್, ದಿನಕರ್ ಸರ್ ಬಂದ್ರು. ಸಿನಿಮಾ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ 20 ದಿನಕ್ಕೆ ಸಿನಿಮಾ ಪೈರಸಿ ಆಯಿತು. 99ರಷ್ಟು ಜನ ನನ್ನ ಚಿತ್ರವನ್ನು ಮೊಬೈಲ್‌ನಲ್ಲಿ ನೋಡಿದ್ರು. ಅಥವಾ ಯೂಟ್ಯೂಬ್‌ನಲ್ಲಿ ನೋಡಿದ್ರು." ಬೇಸರ ಹೊರಹಾಕಿದರು.

ಉಗ್ರಂ ಚಿತ್ರ ರಿಲೀಸ್‌ ಸಂದರ್ಭದ ಬಗ್ಗೆ ಇನ್ನಷ್ಟು ಮಾತನಾಡುತ್ತಾ "ನನ್ನ ಉಗ್ರಂ ಸಿನಿಮಾನೇ ನನಗೆಲ್ಲ. ನಾನು ಅದರಿಂದ ಸಾಕಷ್ಟು ಕಲಿತೆ. ಜೀವನದಲ್ಲೂ ಸಾಕಷ್ಟು ಕಲಿತೆ. ಅಂದಿನಿಂದ ನಾನು ನಮ್ಮ ಕುಟುಂಬವನ್ನು ಸಂತೋಷವಾಗಿ ಇಡಲು ಏನು ಮಾಡಬೇಕೊ ಅದನ್ನು ಮಾಡ್ತಿದ್ದೀನಿ. ಆ ಬಳಿಕ ನಾನು 10 ಮನೆ ಖರೀದಿಸಿದೆ. ಆದರೆ ನಾನು ಮನೆ ಮಾರಿದ್ದೆ. ಆ 4 ವರ್ಷ ಸಾಲದಲ್ಲಿದ್ದೆ. ವಿಜಯ್ ಸರ್, ಯಶ್ ಸರ್ ನನ್ನನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಬಂದ್ರು"  ಎಂದು ಪ್ರಶಾಂತ್‌ ನೀಲ್‌ ಮಾತನಾಡಿದ್ದಾರೆ.

ಇದನ್ನೂ ಓದಿ: Salar: ಭರ್ಜರಿ ವರ್ಲ್ಡ್ ವೈಡ್ ಕಲೆಕ್ಷನ್.. ಬಾಲಿವುಡ್ ಗೆ ಮತ್ತೆ ಟೆನ್ಶನ್!

ನೀಲ್‌ ತಮ್ಮ ಸಿನಿಮಾಗಳ ಬಗ್ಗೆ ಮತ್ತಷ್ಟು ಹೇಳುತ್ತಾ, "ಪ್ಯಾಷನ್ ಕಥೆ ಎಲ್ಲಿಂದ ಬರುತ್ತೆ ಹೇಳಿ. ಸಿನಿಮಾ ಈಗ ನನಗೆ ಬ್ಯುಸಿನೆಸ್. ಅದರಲ್ಲಿ ನನ್ನ ಬೆಸ್ಟ್ ನಾನು ಮಾಡ್ತೀನಿ. ನಾನು ಇಲ್ಲಿ ರಂಜಿಸೋಕೆ ಇದ್ದೀನಿ ಅಷ್ಟೆ. ಸೇವೆ ಮಾಡುವುದಕ್ಕೆ ಅಲ್ಲ. ನಾನು ಇವತ್ತು ಏನೇ ಆಗಿದ್ದರೂ ಕನ್ನಡ ಚಿತ್ರರಂಗದಿಂದ. ಆದ್ರೆ ನನ್ನಿಂದಲೇ ಕನ್ನಡ ಚಿತ್ರರಂಗ ಅಲ್ಲ. ಅದು ಸಾಧ್ಯವೂ ಇಲ್ಲ. ಮತ್ಯಾರಿಂದಲೂ ಅಲ್ಲ. ಪ್ಯಾಷನ್ ಬಹಳ ಹಿಂದೆ ಸತ್ತು ಹೋಯ್ತು. ನಾನು ಉಗ್ರಂ ಚಿತ್ರದಿಂದ ಸಾಕಷ್ಟು ಕಲಿತೆ. ಒಳ್ಳೆ ಸಿನಿಮಾ ಮಾಡಿದಾಗ ಅದನ್ನು ನೋಡಲು ಜನ ಥಿಯೇಟರ್‌ಗೆ ಬರಬೇಕು. ಮೊಬೈಲ್‌ನಲ್ಲಿ ನೋಡೊದಲ್ಲ. ಅದಕ್ಕಾಗಿ ನಾವು ಅಷ್ಟು ಕಷ್ಟಪಟ್ಟಿಲ್ಲ. ಅವತ್ತಿಗೆ ನಾನು ಬೆಸ್ಟ್ ಕ್ಯಾಮರಾ ಬಳಸಿದ್ದೆ. ಪ್ಯಾನವೇಷನ್ ಕ್ಯಾಮರಾ ಬಳಸಿದ್ದೆ. ಯಾರೂ ಅದನ್ನು ನೋಡಲಿಲ್ಲ. ಮೊಬೈಲ್‌ನಲ್ಲಿ ನೋಡೋಕಾ ಅಷ್ಟೆಲ್ಲ ಮಾಡಿದ್ದು" ಎಂದಿದ್ದಾರೆ.

ಉಗ್ರಂ ಹಾಗೂ ಸಲಾರ್‌ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, "ಉಗ್ರಂ ಥಿಯೇಟರ್‌ಗೆ ಅಂತ ಮಾಡಿದ್ದ ಸಿನಿಮಾ. ನನಗೆ ಅದೊಂದು ಕೊರಗಿತ್ತು. 'KGF' ಸರಣಿ ಬಳಿಕ ನಾನು ಸಾಕಷ್ಟು ಕಥೆಗಳನ್ನು ಸಿನಿಮಾ ಮಾಡಬೇಕು ಎಂದುಕೊಂಡೆ. ಆದರೆ 'ಉಗ್ರಂ' ಚಿತ್ರವನ್ನು ಸಿನಿಮಾ ಪ್ರಪಂಚಕ್ಕೆ ತೋರಿಸಬೇಕಿತ್ತು. ಅದನ್ನು ಉಗ್ರಂ ರೀಮೇಕ್ ಅಂದ್ರು ಪರವಾಗಿಲ್ಲ. ಆ ಕಥೆಯನ್ನು ಮತ್ತೆ ಹೇಳಬೇಕು ಎಂದುಕೊಂಡೆ. ಥಿಯೇಟರ್‌ಗಳನ್ನು ತುಂಬಿಸಬೇಕು ಎಂದುಕೊಂಡೆ. ಯಾರು ಏನೇ ಹೇಳಲಿ. 'ಉಗ್ರಂ' ನನ್ನ ಸಿನಿಮಾ. ನಾನು ಮಾಡ್ತಿದ್ದೀನಿ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳಬೇಕು ಅಂತ ಅಲ್ಲ. ನನಗೆ 'ಉಗ್ರಂ' ಕಥೆಯನ್ನು ನೋಡಲು ಜನ ಥಿಯೇಟರ್ ತುಂಬ ತುಂಬಬೇಕು ಎಂದುಕೊಂಡೆ. ಅದೇ 'ಸಲಾರ್'. ಇದರಲ್ಲಿ ಸಾಕಷ್ಟು ವಿಚಾರ ಬದಲಿಸಿದ್ದೇನೆ. ಸಾಕಷ್ಟು ನಾನು ಈಗ ಕಲಿತ್ತಿದ್ದೇನೆ. 'ಉಗ್ರಂ', 'KGF' ಬಿಟ್ರೆ ಇವನಿಗೆ ಏನು ಗೊತ್ತಿಲ್ಲ ಅಂದ್ರು ಪರವಾಗಿಲ್ಲ. 'ಸಲಾರ್' ನನಗೋಸ್ಕರ ಮಾಡಿದ್ದು. ಅದಕ್ಕೆ ಖುಷಿಯಿದೆ" ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News