Alia Bhatt: ಕನ್ಪೂಸ್​ ಆಗ್ಬೇಡಿ ಇದು ಐಶ್ವರ್ಯಾ ರೈ ಅಲ್ಲ.. ಆಲಿಯಾ ಭಟ್ ! ಏನಿದು ಅಸಲಿ ಕಥೆ..

Met Gala 2023: ಆಲಿಯಾ ಭಟ್ ಕೆಲ ದಿನಗಳ ಹಿಂದೆ ಜಾಗತಿಕ ಮಟ್ಟದ  ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋಗ್ರಾಫರ್ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ. 

Written by - Zee Kannada News Desk | Last Updated : May 3, 2023, 03:36 PM IST
  • ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಲಿಯಾ ಭಟ್
  • ಆ ವೇಳೆ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ
  • ಸಿನಿಮಾದಿಂದ ದೂರ ಉಳಿದಿರುವ ನಟಿ ಆಲಿಯಾ
Alia Bhatt: ಕನ್ಪೂಸ್​ ಆಗ್ಬೇಡಿ ಇದು ಐಶ್ವರ್ಯಾ ರೈ ಅಲ್ಲ.. ಆಲಿಯಾ ಭಟ್ ! ಏನಿದು ಅಸಲಿ ಕಥೆ.. title=

ಬೆಂಗಳೂರು: ಬಾಲಿವುಡ್‌ ಖ್ಯಾತ ನಟಿ ಆಲಿಯಾ ಭಟ್  ಮದುವೆ ಆದ ಬಳಿಕ  ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಬಾಲಿವುಡ್‌ ಯಾವುದೇ ಕಾರ್ಯಕ್ರಮ ವಿದ್ದರೂ ತಪ್ಪದೇ ಹಾಜರಿರುತ್ತಾರೆ.

ಹೀಗೆಯೆ ಕೆಲವುದಿನಗಳ ಹಿಂದೆ ಜಾಗತಿಕ ಮಟ್ಟದ ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋ ವಿಡಿಯೋ ತೆಗೆಯುವ ವೇಳೆ ಪಾಪರಾಜಿಗಳು ಅಲಿಯಾ ಎಂದು ಕೂಗುವ ಬದಲು ಐಶ್ವರ್ಯಾ ರೈ ಎಂದು ಕೂಗಿದ್ದಾರೆ. 

ಇದನ್ನು ಕೇಳಿಸಿಕೊಂಡ ಬಾಲಿವುಡ್‌ ಕ್ಯೂಟ್‌ ಬೆಡಗಿ ಆಲಿಯಾ ಒಂದು ಬಾರಿ ಆಶ್ಚರ್ಯಚಕಿತಳಾಗಿ ಏನು ಪ್ರತಿಕ್ರಿಸದೇ ನಸು ನಗುತ್ತಲೇ ಮುಂದೆ ಸಾಗಿದ್ದಾರೆ. ಆದರೆ ಇಲ್ಲಿ ವಿಶೇಷ ಏನಿದೆ  ಎಂದು ಯೋಚಿಸ ಬಹುದು.

ಮಾಜಿ ವಿಶ್ವ ಸುಂದರಿಯಾಗಿದ್ದರೂ ಇಂದಿಗೂ ಆಕೆಯ ಹೆಸರು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಆಕೆಯ ಹೆಸರು ಹಾಗೆ ಉಳಿದಿದೆ. ಐಶ್ವರ್ಯಾ ರೈ ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆನ್ನುವುದು ಖುಷಿಯ  ವಿಚಾರವಾಗಿದೆ.

ಸದ್ಯ ಆಲಿಯಾ ಭಟ್​ ರಣಬೀರ್​ ಕಪೂರ್​ ಮದುವೆ ಬಳಿಕ ಒಂದು ಮುದ್ದಾದ ಮುಗುವಿನ ತಾಯಿ ಆಗಿರವ ಕ್ಯೂಟ್‌ ಬೆಡಗಿ ಸಿನಿಮಾದಿಂದ ದೂರ ಉಳಿದಿದ್ದಾರೆ. ಸದ್ಯ ಜಾಗತೀಕ ಮಟ್ಟದ ಪ್ರತಿಷ್ಠಿತ ಬ್ರ್ಯಾಂಡ್​ಗಳ ಜಾಹೀರಾತಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News