'ಮದುವೆಯಾಗಲು ಬರಿ ಲವ್ ಸಾಕಾಗಲ್ಲ'

ಬಾಲಿವುಡ್ ನಟ ಅಜಯ್ ದೇವಗನ್ ಅವರು ನಟಿ ಕಾಜೋಲ್ ಅವರನ್ನು ಮದುವೆಯಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ. ಈಗ ಈ ಜೋಡಿಗೆ ನೈಸಾ ದೇವಗನ್ (19 ವರ್ಷ) ಮತ್ತು ಯುಗ್ ದೇವಗನ್ (11 ವರ್ಷ) ಎನ್ನುವ ಇಬ್ಬರು ಮಕ್ಕಳಿದ್ದಾರೆ.ಈಗ ತಮ್ಮ ಈ ಸುದೀರ್ಘ ದಾಂಪತ್ಯದ ಕುರಿತಾಗಿ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ ಅವರೊಂದಿಗೆ ಮಾತನಾಡುತ್ತಾ ಕೇವಲ ಪ್ರೀತಿಯಿಂದ ಮಾತ್ರ ದಾಂಪತ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Apr 27, 2022, 04:16 PM IST
  • ಪ್ರೀತಿ ರೂಪಾಂತರವಾಗಿ ಇದು ಪಾಲುದಾರಿಕೆ, ಜವಾಬ್ದಾರಿ, ಹಾಗೂ ಕಾಳಜಿಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.
  • ಇನ್ನು ಮುಂದುವರೆದು ಅವರು ಇದೆಲ್ಲವೂ ಕೂಡ ಪ್ರೀತಿಗಿಂತ ಬಲಶಾಲಿಯಾಗಿದೆ.
  • ಏಕೆಂದರೆ ಅದು ಕೇವಲ ಪ್ರೀತಿಯಾಗಿದ್ದರೆ, ಅದು ಉಳಿಯುವುದಿಲ್ಲ”.ಎಂದು ದೇವಗನ್ ಅವರು ಹೇಳಿದರು.
'ಮದುವೆಯಾಗಲು ಬರಿ ಲವ್ ಸಾಕಾಗಲ್ಲ' title=

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರು ನಟಿ ಕಾಜೋಲ್ ಅವರನ್ನು ಮದುವೆಯಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ.ಈಗ ಈ ಜೋಡಿಗೆ ನೈಸಾ ದೇವಗನ್ (19 ವರ್ಷ) ಮತ್ತು ಯುಗ್ ದೇವಗನ್ (11 ವರ್ಷ) ಎನ್ನುವ ಇಬ್ಬರು ಮಕ್ಕಳಿದ್ದಾರೆ.ಈಗ ತಮ್ಮ ಈ ಸುದೀರ್ಘ ದಾಂಪತ್ಯದ ಕುರಿತಾಗಿ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ ಅವರೊಂದಿಗೆ ಮಾತನಾಡುತ್ತಾ ಕೇವಲ ಪ್ರೀತಿಯಿಂದ ಮಾತ್ರ ದಾಂಪತ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರೀತಿ ರೂಪಾಂತರವಾಗಿ ಇದು ಪಾಲುದಾರಿಕೆ, ಜವಾಬ್ದಾರಿ, ಹಾಗೂ ಕಾಳಜಿಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಇನ್ನು ಮುಂದುವರೆದು ಅವರು ಇದೆಲ್ಲವೂ ಕೂಡ ಪ್ರೀತಿಗಿಂತ ಬಲಶಾಲಿಯಾಗಿದೆ. ಏಕೆಂದರೆ ಅದು ಕೇವಲ ಪ್ರೀತಿಯಾಗಿದ್ದರೆ, ಅದು ಉಳಿಯುವುದಿಲ್ಲ”.ಎಂದು ದೇವಗನ್ ಅವರು ಹೇಳಿದರು.

ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?

ಬಾಲಿವುಡ್ ನಟಿ ಕಾಜೋಲ್ ಅವರೊಂದಿಗಿನ ಮದುವೆಯ ಬಗ್ಗೆ ಮಾತನಾಡಿದ ಅವರು, "ಇದು ತುಂಬಾ ಚೆನ್ನಾಗಿ ಉಳಿದಿದೆ. ಪ್ರತಿ ದಾಂಪತ್ಯದಲ್ಲಿ  ಭಿನ್ನಾಭಿಪ್ರಾಯಗಳಂತಹ ಏರಿಳಿತಗಳಿರುತ್ತವೆ.ಆದರೆ ನೀವು ಆ ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಬೇಕು...ಎರಡು ಮನಸ್ಸುಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ, ಆದರೆ ನಂತರ ಇದೆಲ್ಲವನ್ನು ನಾವು ಹೇಗೆ ಕಾರ್ಯನಿರ್ವಹಿಸಬಹುದು ಎನ್ನುವುದರ ಕುರಿತಾಗಿ ಚರ್ಚಿಸುತ್ತೇವೆ’ ಎಂದು ಅವರು ಹೇಳಿದರು.ಇದೇ ವೇಳೆ ತಪ್ಪು ಮಾಡಿದ್ದರೆ ಅದಕ್ಕೆ ಕ್ಷಮೆ ಕೇಳುವುದಕ್ಕೆ ಯಾವುದೇ ಅಹಂಕಾರ ಇರಬಾರದು ಎಂದು ಅವರು ಕಿವಿ ಮಾತು ಕೇಳಿದರು.

 
 
 
 

 
 
 
 
 
 
 
 
 
 
 

A post shared by Kajol Devgan (@kajol)

ಇದನ್ನೂ ಓದಿ: 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್

ಕಾಜೋಲ್ ಅವರೊಂದಿಗೆ ಡೇಟಿಂಗ್ ಮಾಡುವ ಆರಂಭಿಕ ದಿನಗಳ ಬಗ್ಗೆ ಮಾತನಾಡುತ್ತಾ, “ನನಗೆ ನಿಜವಾಗಿಯೂ ಗೊತ್ತಿಲ್ಲ..ನಾವು ಭೇಟಿಯಾಗಿಚೆನ್ನಾಗಿ ಜೊತೆಯಾಗಿದ್ದೆವು.ನಾವು ಪ್ರಪೋಸ್ ಮಾಡದೆ ಪರಸ್ಪರ ನೋಡಲು ಪ್ರಾರಂಭಿಸಿದೆವು. ಅದರಲ್ಲೂ ನಮ್ಮಿಬ್ಬರ ಆಲೋಚಗಳು ಒಂದೇ ಆಗಿದ್ದರಿಂದಾಗಿ ನಾವು ಪರಸ್ಪರ ಮದುವೆಯಾಗುವುದಕ್ಕೆ ನಿರ್ಧರಿಸಿದೆವು' ಎಂದು ಅವರು ಹೇಳಿದರು.

ಸದ್ಯ ಅಜಯ್ ದೇವಗನ್ ಅವರ ಮುಂಬರುವ ಚಿತ್ರ 'ರನ್‌ವೇ 34' ಬಿಡುಗಡೆಗೆ ಸಜ್ಜಾಗುತ್ತಿದೆ, ಇದರಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ.ಈ ಚಿತ್ರವು ಏಪ್ರಿಲ್ 29 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.ವಿಶೇಷವೆಂದರೆ ಈ ಚಿತ್ರದ ನಿರ್ದೇಶನ ಮತ್ತು ಪ್ರೊಡಕ್ಷನ್ ಜವಾಬ್ದಾರಿಯನ್ನು ಅಜೇಯ್ ದೇವಗನ್ ನಿರ್ವಹಿಸಿದ್ದಾರೆ.ಆ ಮೂಲಕ ಈಗ ಅವರು ಹೊಸ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News