ಈಗ ಪ್ರಿಯಾಂಕಾ ಚೋಪ್ರಾ ಜಗತ್ತಿನಲ್ಲಿ ಏಷ್ಯಾದ ಅತಿ ಸೆಕ್ಸಿಯಸ್ಟ್ ನಟಿ !

    

Last Updated : Dec 7, 2017, 06:48 PM IST
ಈಗ ಪ್ರಿಯಾಂಕಾ ಚೋಪ್ರಾ ಜಗತ್ತಿನಲ್ಲಿ ಏಷ್ಯಾದ ಅತಿ ಸೆಕ್ಸಿಯಸ್ಟ್ ನಟಿ ! title=

ಲಂಡನ್: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಜಗತ್ತಿನಲ್ಲಿ ಏಷ್ಯಾದ  ಅತಿ ಸೆಕ್ಸಿಯಸ್ಟ್ ನಟಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾಳೆ.

ಲಂಡನ್ ಮೂಲದ  ವೀಕ್ಲಿ ಪತ್ರಿಕೆ 'ಇಷ್ಟರ್ನ್ ಐ' ಮಾಡಿದೆ ಸಮೀಕ್ಷೆಯಲ್ಲಿ ಈ ನಟಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾಳೆ. ಕ್ವಾಂಟಿಕೋ ಟಿವಿಯ ಸರಣಿ ಕಾರ್ಯಕ್ರಮದ ಮೂಲಕ ಹಾಲಿವುಡ್ ನ ಅಂಗಳಕ್ಕೆ ಕಾಲಿಟ್ಟ ಈ ನಟಿ,  ಸತತ  ಐದು ಬಾರಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾಳೆ. ಈ ಕಳೆದ ಬಾರಿ ಟಾಪ್ ಪಟ್ಟಿಯಲ್ಲಿದ್ದ ದೀಪಿಕಾ ಪಡುಕೋಣೆಯನ್ನು ಹಿಂದಿಕ್ಕಿದ್ದಾಳೆ. ಅಲ್ಲದೆ ಈ ಹಿಂದೆ 2014  ಮತ್ತು 2015 ರಲ್ಲಿ ಯೂ ಕೂಡಾ ಪ್ರಿಯಾಂಕಾ ಮೊದಲ ಸ್ಥಾನವನ್ನು ಪಡೆದಿದ್ದನ್ನು ನಾವು ಗಮನಿಸಬಹುದು. 

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ "ಈ ಪ್ರಶಸ್ತಿ ಬಂದಿದ್ದಕ್ಕೆ ನಾನು ಮೊದಲು ತಂದೆ ಮತ್ತು ತಾಯಿಗಳಿಗೆ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ ಎಂದು ಹಾಸ್ಯ ಮಾಡಿದ್ದಾರೆ, ಮತ್ತು ಪ್ರತಿ ಕ್ಷಣದಲ್ಲಿ ನೀವು ತೋರಿಸಿರುವ ಪ್ರೀತಿಯು ನನ್ನನ್ನು ಕಳೆದ 5 ಸಾರಿ ಈ ಪಟ್ಟಿಯಲ್ಲಿ  ಬರುವ ಹಾಗೆ ಮಾಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

Trending News