ವಿರಾಟ್ ಕೊಹ್ಲಿ ಅಲ್ಲ.. ಅನುಷ್ಕಾ ಶರ್ಮಾ ಮೊದಲು ಪ್ರೀತಿಸಿದ್ದು ಈತನನ್ನು!! ಯಾರು ಗೊತ್ತಾ ಆ ವ್ಯಕ್ತಿ?

Anushka Sharma First Love: ಬಾಲಿವುಡ್‌ ನಟಿ ಅನುಷ್ಕಾ ಇತ್ತೀಚೆಗಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು.. ಸದ್ಯ ಲಂಡನ್‌ನಲ್ಲಿರುವ ಅನುಷ್ಕಾ ಶರ್ಮಾ ಪತಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಐಪಿಎಲ್ ಕಾರಣ ಭಾರತದಲ್ಲಿದ್ದಾರೆ. ಇದೇ ವೇಳೆ ನಟಿ ಅನುಷ್ಕಾ ಪ್ರೀತಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ..   

Written by - Savita M B | Last Updated : Mar 23, 2024, 04:31 PM IST
  • 2017 ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹವಾದರು..
  • ರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು, ಅನುಷ್ಕಾ ಶರ್ಮಾ ಅವರ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತ್ತು..
ವಿರಾಟ್ ಕೊಹ್ಲಿ ಅಲ್ಲ.. ಅನುಷ್ಕಾ ಶರ್ಮಾ ಮೊದಲು ಪ್ರೀತಿಸಿದ್ದು ಈತನನ್ನು!! ಯಾರು ಗೊತ್ತಾ ಆ ವ್ಯಕ್ತಿ?   title=

Anushka Sharma-Virat Kohli: 2017 ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹವಾದರು.. ಮದುವೆಗೂ ಮುನ್ನ ಅನುಷ್ಕಾ ಮತ್ತು ವಿರಾಟ್ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಡೇಟಿಂಗ್ ಮಾಡಿದ ನಂತರವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು, ಅನುಷ್ಕಾ ಶರ್ಮಾ ಅವರ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತ್ತು..  

ಮಾಹಿತಿಯ ಪ್ರಕಾರ ಜೊಹೈಬ್ ಯೂಸುಫ್ ಮತ್ತು ಅನುಷ್ಕಾ ಶರ್ಮಾ ಅವರ ಸಂಬಂಧದ ಬಗ್ಗೆ ಮಾತನಾಡುವುದಾದರೇ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ.. 

ಇದನ್ನೂ ಓದಿ-ಕಾಂತಾರದಲ್ಲಿನ ರಿಷಬ್‌ ಸ್ಟೈಲ್‌ ಎನ್‌ಟಿಆರ್‌ ‘ದೇವರ’ ಸಿನಿಮಾದಲ್ಲಿ..! ಹಾಗಿದ್ರೆ ಸಿನಿಮಾ ಕಥೆ ಅದೇನಾ..?

ಮಾಧ್ಯಮ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಇಬ್ಬರೂ ಭೇಟಿಯಾದರು.  ಇದಾದ ನಂತರ ಇಬ್ಬರೂ ಒಟ್ಟಿಗೆ ಮುಂಬೈಗೆ ಬಂದಿದ್ದರು. ಅನುಷ್ಕಾ ಶರ್ಮಾರನ್ನು ಮುಂಬೈಗೆ ಕರೆತಂದಿದ್ದು ಜೊಹೆಬ್ ಯೂಸುಫ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಮುಂಬೈಗೆ ಬಂದು ತಮ್ಮ ವೃತ್ತಿಯನ್ನು ಮಾಡಲು ಬಯಸಿ.. ಮುಂಬೈನಲ್ಲಿ ವಾಸಿಸಲು ಸಾಕಷ್ಟು ಕಷ್ಟಪಟ್ಟಿದ್ದರು. ಅಲ್ಲದೇ ಅನೇಕ ಜಾಹೀರಾತುಗಳು ಮತ್ತು ಚಲನಚಿತ್ರಗಳಿಗೆ ಆಡಿಷನ್ ನೀಡಿದ್ದರು.. ಆದರೆ ಆಕೆಯ ಗೆಳೆಯ ಜೋಹೆಬ್‌ಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. 

ಇದನ್ನೂ ಓದಿ-ಈ ಸ್ಟಾರ್ ನಟಿಯ ಬಾಯ್‌ಫ್ರೆಂಡ್‌ "ಅನುಷ್ಕಾ ಶರ್ಮಾ ಸಹೋದರ", ಖ್ಯಾತ ನಿರ್ಮಾಪಕ.. ಕರ್ನಾಟಕದೊಂದಿಗೆ ಇದೆ ಆತ್ಮೀಯ ನಂಟು!!

ಅನುಷ್ಕಾ ಶರ್ಮಾಗೆ 'ರಬ್ ನೆ ಬನಾ ದಿ ಜೋಡಿ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಆದರೆ ಆಕೆಯ ಗೆಳೆಯ ಜೊಹೈಬ್ ಯೂಸುಫ್ ಗೆ ಇಂಡಸ್ಟ್ರಿಯಲ್ಲಿ ಯಾವುದೇ ಕೆಲಸ ಸಿಗಲಿಲ್ಲ. ನಂತರ ಜೋಹೆಬ್ ಬೆಂಗಳೂರಿಗೆ ಮರಳಲು ನಿರ್ಧರಿಸಿದರು.. ಆದರೂ ಜೋಹೆಬ್ ಅವರಿಗೆ ಅನುಷ್ಕಾ ಜೊತೆಗೆ ಇರಬೇಕು ಎನ್ನುವ ಆಸೆಯಿತ್ತು.. ದುರಾದೃಷ್ಟವಶಾತ್‌ ಅನುಷ್ಕಾ ಸಿನಿಮಾ ಆಫ್‌ರ್‌ ಬಂದ ತಕ್ಷಣ ಗೆಳೆಯ ಜೋಹೈಬ್ ಯೂಸುಫ್ ನನ್ನು ಇಗ್ನೋರ್‌ ಮಾಡಲು ಸ್ಟಾರ್ಟ್‌ ಮಾಡಿದ್ದರು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. 

ಸಿನಿಮಾಗಳಲ್ಲಿ ನಾಯಕಿಯಾದ ನಂತರವೂ ಅನುಷ್ಕಾ ಶರ್ಮಾ ಹೆಸರು ರಣವೀರ್ ಸಿಂಗ್, ಶಾಹಿದ್ ಕಪೂರ್, ರಣಬೀರ್ ಕಪೂರ್ ಸೇರಿದಂತೆ ಹಲವು ನಟರೊಂದಿಗೆ ತಳುಕುಹಾಕಿಕೊಂಡಿತ್ತು... ಆದರೆ ನಟಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ವಿವಾಹವಾದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News