ಧೂಳೆಬ್ಬಿಸಲು ತಯಾರಿ ನಡೆಸಿದ್ದಾರೆ ನೋರಾ ಫತೇಹಿ ಮತ್ತು ಗುರು ರಾಂಧವ, Video Viral

'ನಾಚ್ ಮೇರಿ ರಾಣಿ' ಹಾಡನ್ನು ಪೂರ್ವಾಭ್ಯಾಸ ಮಾಡುವಾಗ ನೋರಾ ಫತೇಹಿಯ ವಿಡಿಯೋ ವೈರಲ್ ಆಗುತ್ತಿದೆ.  

Last Updated : Oct 15, 2020, 02:08 PM IST
  • ನೋರಾ ಫತೇಹಿ ಮತ್ತು ಗುರು ರಾಂಧವಾ ಅವರ ವಿಡಿಯೋ ರಾಕಿಂಗ್ ಆಗಿದೆ
  • ಗುರು ರಾಂಧವ ಅವರ ಮುಂಬರುವ ಹಾಡಿನ ಪೂರ್ವಾಭ್ಯಾಸಕ್ಕಾಗಿ ವೀಡಿಯೊ
  • ಈ ವಿಡಿಯೋವನ್ನು ನೋಡಿರುವ ಜನರು ನೃತ್ಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಧೂಳೆಬ್ಬಿಸಲು ತಯಾರಿ ನಡೆಸಿದ್ದಾರೆ ನೋರಾ ಫತೇಹಿ ಮತ್ತು ಗುರು ರಾಂಧವ, Video Viral title=
Pic Courtesy: Instagram

ನವದೆಹಲಿ: ಬಾಲಿವುಡ್‌ನ ಟಾಪ್ ನರ್ತಕಿ ಮತ್ತು ನಟಿ ನೋರಾ ಫತೇಹಿ ಪ್ರತಿ ಬಾರಿಯೂ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಈಗ ನೋರಾ ಫತೇಹಿ ಅವರ ಹಾಡು ಈಗಾಗಲೇ ಪುನರಾಗಮನವನ್ನು ಮಾಡುತ್ತಿದೆ. ವಾಸ್ತವವಾಗಿ ಪಂಜಾಬಿ ಪಾಪ್ ತಾರೆ ಗುರು ರಾಂಧಾವಾ ಅವರ 'ನಾಚ್ ಮೇರಿ ರಾಣಿ' (Nach Meri Rani Video) ಹಾಡನ್ನು ಪೂರ್ವಾಭ್ಯಾಸ ಮಾಡುವಾಗ ನೋರಾ ಫತೇಹಿ  (Nora Fatehi) ಅವರ ವಿಡಿಯೋ ಶೇರ್ ಮಾಡಿದ್ದಾರೆ.

ಈ ವೀಡಿಯೊವನ್ನು ನೋರಾ ಫತೇಹಿ (Nora Fatehi) ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ಮುಂಬರುವ 'ನಾಚ್ ಮೇರಿ ರಾಣಿ ವಿಡಿಯೋ' ಗೀತೆಗೆ ಗುರು ರಾಂಧವ ಅವರೊಂದಿಗೆ ನೃತ್ಯ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದರೆ ಪೂರ್ವಾಭ್ಯಾಸದಲ್ಲಿ ಅವರ ಅದ್ಭುತವಾದ  ನೃತ್ಯ ಜನರ ಹೃದಯವನ್ನು ಗೆಲ್ಲುತ್ತಿವೆ.

ಈ ವೀಡಿಯೊವನ್ನು ಹಂಚಿಕೊಳ್ಳುವಾಗ ನೋರಾ ಫತೇಹಿ, 'ಹೇ ಭಗವಾನ್' ಯಾರೋ ನಾಚ್ ಮೇರಿ ರಾಣಿ 'ಹುಕ್‌ಲೈನ್‌ನೊಂದಿಗೆ ಪೂರ್ವಾಭ್ಯಾಸದ ವೀಡಿಯೊವನ್ನು ಸೋರಿಕೆ ಮಾಡಿದ್ದಾರೆ. ಈಗ ಅದು ಹೊರಬಂದಿದ್ದರೆ, ಅದರ ಅಧಿಕೃತ ಬಿಡುಗಡೆಯ ಮೊದಲು ನಾವು ಅದನ್ನು ಏಕೆ ಹಿಟ್ ಮಾಡಬಾರದು. ನಾವಿದನ್ನು ಮಾಡೋಣ ನಿಮ್ಮ ನಡೆ ಮತ್ತು ಪ್ರೀತಿಯನ್ನು ನನಗೆ ತೋರಿಸಿ, ಐಜಿ ಅಥವಾ ರೀಲ್ ವೀಡಿಯೊ ಮಾಡಿ ಮತ್ತು ವೀಡಿಯೊವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.

ಕಡಲತೀರದಲ್ಲಿ ಅದ್ಭುತವಾಗಿ ಕುಣಿದು ಕುಪ್ಪಳಿಸಿದ ನೋರಾ ಫತೇಹಿ, ವಿಡಿಯೋ ಆಯ್ತು ವೈರಲ್

ಈ ವಿಡಿಯೋವನ್ನು ನೋಡಿರುವ ಜನರು ನೃತ್ಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ ಕೆಲವರು ಈ ಹಾಡಿಗಾಗಿ ಇನ್ನು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಕೆಲಸದ ಮುಂಭಾಗದ ಬಗ್ಗೆ ಮಾತನಾಡುಡುವುದಾದರೆ ಅಜಯ್ ದೇವಗನ್ ಅಭಿನಯದ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ.

Viral Video: ಹಲವು ಡಾನ್ಸರ್ ಗಳ ಜೊತೆಗೆ ನೇರ ಪೈಪೋಟಿಗಿಳಿದ Nora Fatehi

Trending News