ʻಹೊಸತರʼದ ಮೂಲಕ ಚಂದನವನಕ್ಕೆ ಹೊಸ ನಿರ್ದೇಶಕ ಎಂಟ್ರಿ !

Sandalwood Movie: ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್(ಸೂಪರ್ ಸ್ಟಾರ್ಸ್), "ಹೊಸತರ" ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. 

Written by - YASHODHA POOJARI | Last Updated : Apr 21, 2024, 11:48 AM IST
  • ಚಂದನವನಕ್ಕೆ ಹೊಸ ನಿರ್ದೇಶಕ ಎಂಟ್ರಿ !
  • ವಿಭಿನ್ನ ಕತೆ ಹೇಳಲು ಬರುತ್ತಿದೆ "ಹೊಸತರ" ಸಿನಿಮಾ
  • ಸಿನಿಮಾದಲ್ಲೊಂದು ಸಿನಿಮಾ ಇದೆ
ʻಹೊಸತರʼದ ಮೂಲಕ ಚಂದನವನಕ್ಕೆ ಹೊಸ ನಿರ್ದೇಶಕ ಎಂಟ್ರಿ !  title=

Sandalwood Movie: ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್(ಸೂಪರ್ ಸ್ಟಾರ್ಸ್), "ಹೊಸತರ" ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅಫ್ಜಲ್ ಅವರೆ ಬರೆದಿದ್ದಾರೆ. ಇತ್ತೀಚಿಗೆ ಚಿತ್ರದ ಶೀರ್ಷಿಕೆ ಅನಾವರಣಾವಾಗಿದ್ದು, "ಹೊಸತರ" ಎಂದು ಹೆಸರಿಡಲಾಗಿದೆ.

ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಹೊಸತರ" ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದಲ್ಲೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಇದೆ. ಕಾಮಿಡಿ ಸ್ವಲ್ಪ ಹೆಚ್ಚಾಗಿದೆ.  ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿದೆ. 

ಇದನ್ನೂ ಓದಿ: 50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ! 

ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ಗನೇಸನ್ ಛಾಯಾಗ್ರಹಣ,  ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೇರಿಕಾದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ.  

ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಿವುದಾಗಿ ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.

ಇದನ್ನೂ ಓದಿ: Max: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News