ಯಾವ ಬಾಲಿವುಡ್ ಸಾಂಗ್ ಗೂ ಕಮ್ಮಿ ಇಲ್ಲ ಕಬ್ಜ ಸಿನಿಮಾದ ನಮಾಮಿ‌‌ ಸಾಂಗ್ ....!

ಕಿನ್ನಲ್ ರಾಜ್ ಹಾಡಿಗೆ ಸಾಹಿತ್ಯ ಬರೆದಿದ್ದರೆ,ಐಶ್ವರ್ಯ ರಂಗರಾಜನ್ ಹಾಡನ್ನ ಹಾಡಿದ್ದಾರೆ. ಹಾಡು ಕೇಳ್ತಾ ಇದ್ರೆ ಮತ್ತೇ ಕೇಳಬೇಕು ಅನ್ನೋ ಲೆವೆಲ್ಲಿಗೆ ಹ್ಯಾಪಿ ಎನಿಸುತ್ತೆ. ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ.

Written by - YASHODHA POOJARI | Edited by - Manjunath N | Last Updated : Feb 16, 2023, 09:07 PM IST
  • ಕಿನ್ನಲ್ ರಾಜ್ ಹಾಡಿಗೆ ಸಾಹಿತ್ಯ ಬರೆದಿದ್ದರೆ,ಐಶ್ವರ್ಯ ರಂಗರಾಜನ್ ಹಾಡನ್ನ ಹಾಡಿದ್ದಾರೆ.
  • ಹಾಡು ಕೇಳ್ತಾ ಇದ್ರೆ ಮತ್ತೇ ಕೇಳಬೇಕು ಅನ್ನೋ ಲೆವೆಲ್ಲಿಗೆ ಹ್ಯಾಪಿ ಎನಿಸುತ್ತೆ.
  • ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ.
 ಯಾವ ಬಾಲಿವುಡ್ ಸಾಂಗ್ ಗೂ ಕಮ್ಮಿ ಇಲ್ಲ ಕಬ್ಜ ಸಿನಿಮಾದ ನಮಾಮಿ‌‌ ಸಾಂಗ್ ....!  title=
file photo

ಬೆಂಗಳೂರು: ಬಹು ನಿರೀಕ್ಷೆಯ ಕಬ್ಜ ಸಿನಿಮಾದ  ನಮಾಮಿ‌‌ ಸಾಂಗ್ ರಿಲೀಸ್  ಆಗಿದ್ದು ಭರ್ಜರಿಯಾಗಿ ಕಿಕ್ ಕೊಡುತ್ತಿದೆ.ಯಾವ ಬಾಲಿವುಡ್ ಸಾಂಗ್ ಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡಿದೆ.

ಸಖತ್ ರಿಚ್ ಆಗಿ ಮೂಡಿ ಬಂದಿರೋ ಸಾಂಗ್ ನೋಡಿ ಉಪ್ಪಿ ಫ್ಯಾನ್ಸ್ ಅಂತೂ ಫುಲ್ ತಕಧಿಮಿತಾ ಅಂತ ಕುಣಿಯುತ್ತಿದ್ದಾರೆ.ನಾಯಕಿ ಶ್ರೀಯಾ ನಟರಾಜನನ್ನ ಆರಾಧಿಸೋ ಹಾಡು ಇದಾಗಿದೆ. ಇದರಲ್ಲಿ ನಾಯಕಿ ಶ್ರೀಯಾ ಲುಕ್ ಮತ್ತು ಡ್ಯಾನ್ಸ್ ತುಂಬಾ ಅದ್ಭುತವಾಗಿದೆ. ರವಿಬಸ್ರೂರು ಸಂಗೀತ ನಿರ್ದೆಶನದ ಈ ಹಾಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಖಂಡಿತವಾಗಿ ಯಶ್  ಕಾಣೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ10 ಲಕ್ಷಕ್ಕೂ ಅಧಿಕ ಡಿಜಿಟಲ್‌ ಮೀಟರ್‌ ಅಳವಡಿಕೆ : ಗ್ರಾಹಕರಿಗೆ ತಪ್ಪದ ಹೆಚ್ವಿನ ಹೊರೆ

ಕಿನ್ನಲ್ ರಾಜ್ ಹಾಡಿಗೆ ಸಾಹಿತ್ಯ ಬರೆದಿದ್ದರೆ,ಐಶ್ವರ್ಯ ರಂಗರಾಜನ್ ಹಾಡನ್ನ ಹಾಡಿದ್ದಾರೆ. ಹಾಡು ಕೇಳ್ತಾ ಇದ್ರೆ ಮತ್ತೇ ಕೇಳಬೇಕು ಅನ್ನೋ ಲೆವೆಲ್ಲಿಗೆ ಹ್ಯಾಪಿ ಎನಿಸುತ್ತೆ. ಆರ್ ಚಂದ್ರು ಆಕ್ಷನ್ ಕಟ್ ಹೇಳಿರೋ ಕಬ್ಜ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್  ನಟನಟಿಯರು ಕೂಡ ಕಾದುಕುಳಿತಿದ್ದಾರೆ.ರವಿ ಬಸ್ರೂರ್ ಸಂಗೀತದ ಮೂಲಕ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡ್ತಿದೆ ಕಬ್ಜ ಹಾಡು.

ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಖುದ್ದು ಪರಿಶೀಲನೆ ನಡೆಸಿದ ನ್ಯಾ‌.ಬಿ.ಎಸ್.ಪಾಟೀಲ್

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News