Custody trailer : ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ನಟನೆಯ ʼಕಸ್ಟಡಿʼ ಟ್ರೈಲರ್‌ ಮೇ5 ರಂದು ರಿಲೀಸ್‌..!

Custody trailer : ಬಂಗಾರ ರಾಜು ಚಿತ್ರದ ಮೂಲಕ ಒಂದಾಗಿದ್ದ ನಾಗ ಜೈತನ್ಯ ಮತ್ತು ಕೃತಿ ಶೆಟ್ಟಿ ಮತ್ತೆ ಒಂದಾಗಿದ್ದಾರೆ. ಇಬ್ಬರು ʼಕಸ್ಟಡಿʼ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ.  ಈ ಚಿತ್ರವು ಮೇ 12 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.  

Written by - Krishna N K | Last Updated : May 3, 2023, 09:07 PM IST
  • ʼಕಸ್ಟಡಿʼ ಸಿನಿಮಾ ಟ್ರೈಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌.
  • ನಟ ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ನಟನೆಯ ಸಿನಿಮಾ.
  • ತಮಿಳು-ತೆಲುಗು ದ್ವಿಭಾಷಾ ಚಿತ್ರ ʼಕಸ್ಟಡಿʼ ಮೇ 12 ರಂದು ರಿಲೀಸ್‌.
Custody trailer : ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ನಟನೆಯ ʼಕಸ್ಟಡಿʼ ಟ್ರೈಲರ್‌ ಮೇ5 ರಂದು ರಿಲೀಸ್‌..! title=

Naga Chaitanya : ಟಾಲಿವುಡ್‌ ನಟ ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ನಟನೆಯ ಮುಂಬರುವ ತಮಿಳು-ತೆಲುಗು ದ್ವಿಭಾಷಾ ಚಿತ್ರ ʼಕಸ್ಟಡಿʼ ಸಿನಿಮಾದ ಟ್ರೈಲರ್‌ಗೆ ಡೇಟ್‌ ಫಿಕ್ಸ್‌ ಆಗಿದೆ. ಬಹು ನಿರೀಕ್ಷಿತ ಚಿತ್ರದ ಟ್ರೈಲರ್‌ ಮೇ 5 ರಂದು ಬಿಡುಗಡೆಯಾಗಲಿದೆ.

ಈ ಕುರಿತು ʼಕಸ್ಟಡಿʼ ನಿರ್ಮಾಪಕರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ ಡೇಟ್‌ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಮೇ 5 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರವು ಮೇ 12 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸಿದ್ದಾರೆ ಮತ್ತು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಚಿತ್ತೂರಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಮತ್ತೊಬ್ಬ ತೆಲುಗು ನಟನ ಜೊತೆ ʼರಶ್ಮಿಕಾ ಡೇಟಿಂಗ್‌ʼ..! ಕೊನೆಗೂ ಗುಟ್ಟು ರಟ್ಟು..

ಈ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲಿ ನಾಗ ಚೈತನ್ಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟೀಸರ್‌ ನೋಡಿದ್ರೆ, ಇದೊಂದು ಪೋಲಿಸ್‌ ಅಧಿಕಾರಿಯ ಜೀವನದ ಸುತ್ತ ನಡೆಯುವ ಘಟನೆ ಆಧಾರಿತ ಸಿನಿಮಾ ಎಂದು ತಿಳಿದು ಬರುತ್ತದೆ. ಸದ್ಯ ಕಸ್ಟಡಿ ಟ್ರೈಲರ್ ಮೇ 5 ರಂದು ರಿಲೀಸ್‌ ಆಗಲಿದ್ದು, ನಾಗ ಚೈತನ್ಯ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

ಕಸ್ಟಡಿ ಸಿನಿಮಾದಲ್ಲಿ ನಾಗಚೈತನ್ಯಗೆ ಜೊತೆಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಅರವಿಂದ್ ಸ್ವಾಮಿ ಪ್ರತಿನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶರತ್‌ಕುಮಾರ್, ಸಂಪತ್ ರಾಜ್, ಪ್ರೇಮ್‌ಜಿ, ವೆನ್ನೆಲ ಕಿಶೋರ್ ಮತ್ತು ಪ್ರೇಮಿ ವಿಶ್ವನಾಥ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಮಾಂತ್ರಿಕ ಇಳಯರಾಜ ಮತ್ತು ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಕರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News