Mrunal Thakur: "ಇಷ್ಟ ಇಲ್ಲ ಅಂತಾರೆ.. ಮತ್ತೆ ಅದನ್ನೇ ನೋಡ್ತಾರೆ".. ಮೃಣಾಲ್ ಹಾಟ್ ಕಾಮೆಂಟ್

Mrunal Thakur hot Comment: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸದ್ಯ ಹಾಟ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..    

Written by - Savita M B | Last Updated : Jan 26, 2024, 02:46 PM IST
  • ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಮೃಣಾಲ್
  • ಮೃಣಾಲ್ ಗೆ ಟಾಲಿವುಡ್ ನಲ್ಲಿ ಸಾಲು ಸಾಲು ಆಫರ್ ಗಳು ಬರುತ್ತಿವೆ.
  • ಇದಲ್ಲದೇ ಸದ್ಯ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ..
Mrunal Thakur: "ಇಷ್ಟ ಇಲ್ಲ ಅಂತಾರೆ.. ಮತ್ತೆ ಅದನ್ನೇ ನೋಡ್ತಾರೆ".. ಮೃಣಾಲ್ ಹಾಟ್ ಕಾಮೆಂಟ್ title=

Mrunal Thakur: ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಮೃಣಾಲ್ ಗೆ ಟಾಲಿವುಡ್ ನಲ್ಲಿ ಸಾಲು ಸಾಲು ಆಫರ್ ಗಳು ಬರುತ್ತಿವೆ. ಈ ಚಿತ್ರದ ಯಶಸ್ಸಿನ ನಂತರ ನಟಿ ಇತ್ತೀಚೆಗೆ ಹೈ ನನ್ನ ಚಿತ್ರದಿಂದ ಅಭಿಮಾನಿಗಳ ಮುಂದೆ ಬಂದಿದ್ರು.. ಇದಲ್ಲದೇ ಸದ್ಯ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ..

ಇದೇ ವೇಳೆ.. ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮೃಣಾಲ್ ಕೆಲವು ಮಹತ್ವದ ಕಾಮೆಂಟ್‌ಗಳನ್ನು ಮಾಡಿದ್ದಾರೆ."ನಾನು ವೃತ್ತಿಯಲ್ಲಿ ಬೆಳೆಯುತ್ತಿದ್ದರೂ ಹಿಂದಿಯಲ್ಲಿ ದೊಡ್ಡ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ.. ಅದರಲ್ಲೂ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಆಫರ್ ಬರುತ್ತಿಲ್ಲ.. ಆದರೆ ಎಲ್ಲರೂ ಅಂತಹ ಸಿನಿಮಾಗಳನ್ನೇ ನೋಡುತ್ತಾರೆ" ಎಂದಿದ್ದಾರೆ... ಸದ್ಯ ಮೃಣಾಲ್ ಅವರ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ-Vijay Raghavendra: ಪೋಲೀಸ್‌ ಪಾತ್ರದ ಮೇಲಿನ ಒಲವನ್ನು ಮೆಲುಕು ಹಾಕಿದ ಚಿನ್ನಾರಿ ಮುತ್ತಾ!

ಇನ್ನು ನಟಿ ಮೃಣಾಲ್‌ ಅಭಿನಯದ ಇತ್ತೀಚಿನ ಚಿತ್ರ ಹಾಯ್ ನನ್ನ ಚಿತ್ರ ಡಿಸೆಂಬರ್ 07, 2023 ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. ಸೀತಾರಾಮ್ ಚಿತ್ರದ ಮೂಲಕ ಒಳ್ಳೆ ಫಾರ್ಮ್ ಗೆ ಬಂದ ಮೃಣಾಲ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಿಂದ ಸದ್ದು ಮಾಡುತ್ತಿದ್ದಾರೆ. ಅದರ ಭಾಗವಾಗಿ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ... ಈ ಹಾಯ್ ನನ್ನ ಚಿತ್ರಕ್ಕಾಗಿ ಅವರು ಸುಮಾರು 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.. 

ಮೃಣಾಲ್ ತೆಲುಗು ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಮೊದಲು ವಿಜಯ್ ಎದುರು ನಾಯಕಿಯಾಗಿ ಪೂಜಾ ಹೆಗಡೆಯನ್ನು ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಇತ್ತು.. ಆದರೆ ಕಾರಣಾಂತರಗಳಿಂದ ಸೀತಾರಾಮ್ ಖ್ಯಾತಿಯ ಮೃಣಾಲ್ ಠಾಕೂರ್ ಅವರ ಸ್ಥಾನಕ್ಕೆ ಬಂದಿದ್ದಾರೆ. ಈ ಚಿತ್ರಕ್ಕೆ ಫ್ಯಾಮಿಲಿ ಸ್ಟಾರ್ ಎಂಬ ಟೈಟಲ್‌ನ್ನು ಅಂತಿಮಗೊಳಿಸಲಾಗಿದೆ.. 

ಇದನ್ನೂ ಓದಿ-ಐಶ್ವರ್ಯಾ ರೈ, ಕಾಜೋಲ್‌ಗಿಂತ ಹೆಚ್ಚು ಕ್ರೇಜ್ ಪಡದಿದ್ದ ನಟಿ.. ಆದರೆ ಆ ಒಂದು ತಪ್ಪಿನಿಂದ ವೃತ್ತಿಜೀವನ ನಾಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News