ಪ್ರಿಯದರ್ಶಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಿನಿಮಾ ವಿತರಕ ರೂಪೇಶ್ ಬಿ.ಎನ್.

Rupesh B.N. defamation case against Priyadarshini : ಕನ್ನಡ ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ವಿತರಣೆ ಮಾಡುತ್ತಾ ಬಂದವರು ರೂಪೇಶ್ ಬಿ.ಎನ್. ಕರ್ನಾಟಕದಲ್ಲಿ ಹೆಸರು ಮಾಡಿದ ಸಿನಿಮಾಗಳನ್ನು ಅನಿವಾಸಿ ಕನ್ನಡಿಗರು ನೋಡಬಯಸುತ್ತಾರೆ. 

Written by - YASHODHA POOJARI | Last Updated : Mar 16, 2023, 11:01 AM IST
  • ಪ್ರಿಯದರ್ಶಿನಿ ವಿರುದ್ಧ ಮಾನನಷ್ಟ ಮೊಕದ್ದಮೆ
  • ಮಾನನಷ್ಟ ಮೊಕದ್ದಮೆ ಸಿನಿಮಾ ವಿತರಕ ರೂಪೇಶ್ ಬಿ.ಎನ್.
  • ಆಸ್ಟ್ರೇಲಿಯಾದಲ್ಲಿ ಕನ್ನಡ ಸಿನಿಮಾ ವಿತರಣೆ ಮಾಡುವವರು ರೂಪೇಶ್ ಬಿ.ಎನ್.
ಪ್ರಿಯದರ್ಶಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಿನಿಮಾ ವಿತರಕ ರೂಪೇಶ್ ಬಿ.ಎನ್. title=
Rupesh B.N. defamation case against Priyadarshini

Rupesh B.N. defamation case against Priyadarshini : ಕನ್ನಡ ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ವಿತರಣೆ ಮಾಡುತ್ತಾ ಬಂದವರು ರೂಪೇಶ್ ಬಿ.ಎನ್. ಕರ್ನಾಟಕದಲ್ಲಿ ಹೆಸರು ಮಾಡಿದ ಸಿನಿಮಾಗಳನ್ನು ಅನಿವಾಸಿ ಕನ್ನಡಿಗರು ನೋಡಬಯಸುತ್ತಾರೆ. ಇಲ್ಲಿಂದ ಸಿನಿಮಾ ವಿತರಣೆ ಹಕ್ಕು ಪಡೆದು ಆಸ್ಟ್ರೇಲಿಯಾದಂಥ ದೇಶದಲ್ಲಿ ಪ್ರದರ್ಶನ ಏರ್ಪಡಿಸುವುದು ಕಷ್ಟದ ಕೆಲಸ. ಲಾಭ, ನಷ್ಟಗಳ ಹೊರತಾಗಿಯೂ ಈ ವೃತ್ತಿಯನ್ನು ಇಷ್ಟಪಟ್ಟು ಮಾಡುತ್ತಾ ಬಂದವರು ರೂಪೇಶ್. 

ಇದನ್ನೂ ಓದಿ : ಶಿವಾಜಿ ಸುರತ್ಕಲ್ 2 ಚಿತ್ರದ ಟ್ವಿಂಕಲ್ ಸಾಂಗ್ ರಿಲೀಸ್

ಪ್ರಿಯದರ್ಶಿನಿ ಎಂಬುವವರು 2019ರ ಸುಮಾರಿಗೆ ರೂಪೇಶ್ ಅವರಿಗೆ ಪರಿಚಯಗೊಂಡಿದ್ದರು. ನಂತರ ರೂಪೇಶ್ ಅವರ ಸಿನಿಮಾ ವಿತರಣೆ ವ್ಯವಹಾರದಲ್ಲಿ ಪಾಲುದಾರರೂ ಆದರು. ಪ್ರಿಯದರ್ಶಿನಿ ಅವರೊಂದಿಗೆ ಪಾಲುದಾರಿಕೆಗೆ ಮೊದಲೇ ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಸೇರಿದಂತೆ   ಕನ್ನಡದ ನೂರಕ್ಕೂ ಅಧಿಕ ಸಿನಿಮಾಗಳು ಮತ್ತು ಇತರೆ ಭಾಷೆಯ ಐವತ್ತು ಚಿತ್ರಗಳನ್ನು ವಿತರಿಸಿ ಯಶಸ್ವೀ ವಿತರಕ ಎನಿಸಿಕೊಂಡಿದ್ದವರು ರೂಪೇಶ್. ಪ್ರಿಯದರ್ಶಿನಿ ಪಾಲುದಾರಿಕೆಯಲ್ಲಿ ದಿ ವಿಲನ್, ಕಥೆಯೊಂದು ಶುರುವಾಗಿದೆ, ರಾಂಬೋ 2 , ಪ್ರೀಮಿಯರ್ ಪದ್ಮಿನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಲಯಾಳಂನ ಕಾಯಂಕುಲಂ ಕೊಚುನ್ನಿ, ತೊಂಡಿಮುತಲುಂ ದೃಕ್ಷಸಾಕ್ಷಿಯುಂ ಸಿನಿಮಾಗಳನ್ನು ವಿತರಿಸಿದರು. ಬಹುತೇಕ ಚಿತ್ರಗಳು ಯಶಸ್ವೀ ಪ್ರದರ್ಶನ ಕಂಡವು. ಆದರೆ ಇವರಿಬ್ಬರೂ ಸೇರಿ ವಿತರಣೆ ಮಾಡಿದ್ದ ಮಲಯಾಳಂನ ʻಶುಭ ರಾತ್ರಿʼ ಎನ್ನುವ ಸಿನಿಮಾ ನಿರೀಕ್ಷಿಸಿದ ಲಾಭವನ್ನು ಮಾಡಲಿಲ್ಲ. ಪ್ರಿಯದರ್ಶಿನಿ ಮಾತ್ರ ನಷ್ಟವನ್ನು ಭರಸಿಲು ಸಿದ್ದರಿರಲಿಲ್ಲ. 

ಇದನ್ನೂ ಓದಿ : ಸಲ್ಮಾನ್ ಖಾನ್ ಪತ್ನಿಯಾಗಬೇಕಿತ್ತು ಜೂಹಿ ಚಾವ್ಲಾ! ಈ ಒಂದೇ ಕಾರಣಕ್ಕೆ ನಡೆಯಲಿಲ್ಲ ಮದುವೆ

ನಂತರ ರೂಪೇಶ್ ಅವರಿಗೆ ಹಣ ನೀಡುವಂತೆ ಪೀಡಿಸಿದ್ದರು. ರೂಪೇಶ್ ವಿರುದ್ಧ ಮೇಲೆ ವೈಯಕ್ತಿಕ ನಿಂದನೆ ಮಾಡಿ, ಸುಳ್ಳು ಆರೋಪಗಳ ದೂರು ನೀಡಿದ್ದರು. 2020ರ ಮಾರ್ಚ್ 5ರಂದು ರೂಪೇಶ್ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಸುಳ್ಳು ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು. ರೂಪೇಶ್ ವಿರುದ್ದ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 384 ಮತ್ತು 506 ರ ಅಡಿ ಪ್ರಿಯದರ್ಶಿನಿ ದೂರು ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿದ ನಂದಿನಿ ಲೇಔಟ್ ಪೊಲೀಸರು ʻರೂಪೇಶ್ ಬಿ.ಎನ್. ಅವರು ಯಾವುದೇ ತಪ್ಪು ಮಾಡಿಲ್ಲ. ಇದು ಪ್ರಿಯದರ್ಶಿನಿ ನೀಡಿರುವ ತಪ್ಪು ಮಾಹಿತಿʼ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈಗ ನ್ಯಾಯಾಲಯ ಕೂಡಾ ರೂಪೇಶ್ ನಿರಪರಾಧಿ ಎಂದು ತೀರ್ಪು ನೀಡಿದೆ.

ಪ್ರಿಯದರ್ಶಿನಿ ಅವರಿಂದ ಉಂಟಾದ ಮಾನಸಿಕ ವೇದನೆ, ಅವಮಾನಗಳಿಂದ ರೂಪೇಶ್ ಅವರ ಇಡೀ ಕುಟುಂಬ ನೊಂದಿದೆ. ಸದ್ಯ ಪ್ರಿಯದರ್ಶಿನಿ ವಿರುದ್ಧ ರೂಪೇಶ್ ಬಿ.ಎನ್. ಒಂದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News