Trending News: ಮೆಗಾಸ್ಟಾರ್ ಚಿರಂಜೀವಿಗೆ ಕೇಕ್’ನಲ್ಲಿ ವಿಷ ಬೆರೆಸಿ ತಿನ್ನಿಸಿದ ಅಭಿಮಾನಿ! ಮುಂದೇನಾಯ್ತು?

Megastar Chiranjeevi Poison Case: ಮೆಗಾಸ್ಟಾರ್ ಚಿರಂಜೀವಿ ಕೇವಲ ತೆಲುಗು ಇಂಡಸ್ಟ್ರೀ ಮಾತ್ರವಲ್ಲ, ಕನ್ನಡದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ಅವರು 1988ರಲ್ಲಿ ‘ಮರಣ ಮೃದಂಗಂ’ ಎಂಬ ಸಿನಿಮಾ ಶೂಟಿಂಗ್’ನಲ್ಲಿ ಬ್ಯುಸಿ ಇದ್ದರು. ಈ ಸಿನಿಮಾದ ಚಿತ್ರೀಕರಣ ಮದ್ರಾಸ್ (ಈಗ ಚೆನ್ನೈ)ನಲ್ಲಿ ನಡೆಯುತ್ತಿತ್ತು. ಈ ವೇಳೆ ನೂರಾರು ಅಭಿಮಾನಿಗಳು ಶೂಟಿಂಗ್ ಸ್ಪಾಟ್‌’ಗೆ ಆಗಮಿಸಿದ್ದರು. ವಿಷಯ ತಿಳಿದ ಚಿರಂಜೀವಿ ಅವರನ್ನು ಭೇಟಿಯಾಗಲು ಅಲ್ಲಿಗೆ ತೆರಳಿ ಎಲ್ಲರಿಗೂ ಶೇಕ್ ಹ್ಯಾಂಡ್ ಕೊಟ್ಟು ಮುಂದೆ ಸಾಗಿದರು.

Written by - Bhavishya Shetty | Last Updated : Mar 27, 2023, 03:09 PM IST
    • ಸಿನಿಮಾ ಲೋಕಕ್ಕೆ ಸಂಬಂಧಿಸಿದ ಅದೆಷ್ಟೋ ಸುದ್ದಿಗಳು ಮುನ್ನೆಲೆಗೆ ಬರುತ್ತಿರುತ್ತವೆ.
    • ಅವುಗಳಲ್ಲಿ ಕೆಲವು ಧನಾತ್ಮಕವಾಗಿರುತ್ತವೆ, ಇನ್ನೂ ಕೆಲವು ನಕಾರಾತ್ಮಕವಾಗಿರುತ್ತವೆ.
    • ನಾಯಕ, ನಾಯಕಿಯರ ಬಗ್ಗೆ ಬರುವ ಸುದ್ದಿಗಳಿಗೆ ಮಿತಿಯೇ ಇಲ್ಲ.
Trending News: ಮೆಗಾಸ್ಟಾರ್ ಚಿರಂಜೀವಿಗೆ ಕೇಕ್’ನಲ್ಲಿ ವಿಷ ಬೆರೆಸಿ ತಿನ್ನಿಸಿದ ಅಭಿಮಾನಿ! ಮುಂದೇನಾಯ್ತು? title=
Megastar Chiranjeevi

Megastar Chiranjeevi Poison Case: ಸಿನಿಮಾ ಲೋಕಕ್ಕೆ ಸಂಬಂಧಿಸಿದ ಅದೆಷ್ಟೋ ಸುದ್ದಿಗಳು ಮುನ್ನೆಲೆಗೆ ಬರುತ್ತಿರುತ್ತವೆ. ಅವುಗಳಲ್ಲಿ ಕೆಲವು ಧನಾತ್ಮಕವಾಗಿರುತ್ತವೆ, ಇನ್ನೂ ಕೆಲವು ನಕಾರಾತ್ಮಕವಾಗಿರುತ್ತವೆ. ನಾಯಕ, ನಾಯಕಿಯರ ಬಗ್ಗೆ ಬರುವ ಸುದ್ದಿಗಳಿಗೆ ಮಿತಿಯೇ ಇಲ್ಲ. ಕೆಲವೊಮ್ಮೆ ನಾಯಕಿಯ ಹಾಟ್ ಫೋಟೋ ವೈರಲ್ ಅಂತಾ ಬಂದರೆ, ಮತ್ತೊಮ್ಮೆ ನಾಯಕನ ಸಂಭಾವನೆ ಬಗ್ಗೆ ವದಂತಿಗಳು ನಾನಾ ರೀತಿಯಲ್ಲಿ ಹಬ್ಬುತ್ತವೆ. ಅವು ನಿಜವೋ ಅಲ್ಲವೋ ಯಾರಿಗೂ ಗೊತ್ತಿಲ್ಲ. ಆದರೆ ಚಿತ್ರರಂಗದ ಮೇರುನಟ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಒಂದು ಸುದ್ದಿ ಹರಿದಾಡಿದೆ.

ಇದನ್ನೂ ಓದಿ: WPL 2023 : ಮೊದಲ WPL ಚಾಂಪಿಯನ್ ತಂಡವಾದ ಮುಂಬೈ : ಧೋನಿಗೆ ಸರಿಸಾಟಿ ಹರ್ಮನ್‌ಪ್ರೀತ್!

ಮೆಗಾಸ್ಟಾರ್ ಚಿರಂಜೀವಿ ಕೇವಲ ತೆಲುಗು ಇಂಡಸ್ಟ್ರೀ ಮಾತ್ರವಲ್ಲ, ಕನ್ನಡದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ಅವರು 1988ರಲ್ಲಿ ‘ಮರಣ ಮೃದಂಗಂ’ ಎಂಬ ಸಿನಿಮಾ ಶೂಟಿಂಗ್’ನಲ್ಲಿ ಬ್ಯುಸಿ ಇದ್ದರು. ಈ ಸಿನಿಮಾದ ಚಿತ್ರೀಕರಣ ಮದ್ರಾಸ್ (ಈಗ ಚೆನ್ನೈ)ನಲ್ಲಿ ನಡೆಯುತ್ತಿತ್ತು. ಈ ವೇಳೆ ನೂರಾರು ಅಭಿಮಾನಿಗಳು ಶೂಟಿಂಗ್ ಸ್ಪಾಟ್‌’ಗೆ ಆಗಮಿಸಿದ್ದರು. ವಿಷಯ ತಿಳಿದ ಚಿರಂಜೀವಿ ಅವರನ್ನು ಭೇಟಿಯಾಗಲು ಅಲ್ಲಿಗೆ ತೆರಳಿ ಎಲ್ಲರಿಗೂ ಶೇಕ್ ಹ್ಯಾಂಡ್ ಕೊಟ್ಟು ಮುಂದೆ ಸಾಗಿದರು.

ಅದೇ ಸಮಯದಲ್ಲಿ ಒಬ್ಬ ಯುವಕ ಅಲ್ಲಿಗೆ ಬಂದು, ಇಂದು ನನ್ನ ಹುಟ್ಟುಹಬ್ಬ ಎಂದು ಹೇಳಿದ್ದಾನೆ. ತಕ್ಷಣ ಚಿರು ಯುವಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಯುವಕ ತನ್ನೊಂದಿಗೆ ತಂದ ಕೇಕ್ ಅನ್ನು ಕತ್ತರಿಸಲು ಚಿರುಗೆ ಮನವಿ ಮಾಡುತ್ತಾನೆ. ಮೆಗಾಸ್ಟಾರ್ ತಕ್ಷಣ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಎಲ್ಲರ ಚಪ್ಪಾಳೆಗಳ ನಡುವೆ ಕೇಕ್’ನ್ನು ಕತ್ತರಿಸುತ್ತಾರೆ ಚಿರು. ಸಾಮಾನ್ಯವಾಗಿ ಯಾರಾದರೂ ಕೇಕ್ ತಿನ್ನಿಸಲು ಬಂದರೆ ಅದಕ್ಕೆ ಚಿರು ಸಮ್ಮತಿಸುವುದಿಲ್ಲ. ಈ ಸ್ವಭಾವ ಅವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಎಂದು ಅವರೇ ಹೇಳಿದ್ದಾರೆ.

ಇಂದು ನಿನ್ನ ಹುಟ್ಟುಹಬ್ಬ ಆದ್ದರಿಂದ ನೀನೇ ಮೊದಲು ಕೇಕ್ ತಿನ್ನಬೇಕು ಎಂದು ಯುವಕನಿಗೆ ಚಿರು ಹೇಳಿದ್ದಾರೆ. ಆದರೆ ಯುವಕ ಒಪ್ಪಲಿಲ್ಲ. ಮೇಲಿಂದ ಮೇಲೆ ಚಿರಂಜೀವಿಗೆ ಕೇಕ್ ತಿನ್ನಿಸಲು ಪ್ರಯತ್ನಿಸುತ್ತಾನೆ. ಕಡೆಗೆ ಕೇಕ್ ತಿನ್ನುತ್ತಿದ್ದಂತೆ, ಏನೋ ಕಹಿ ಅನುಭವವಾಗಿ ಆ ಕೇಕ್’ನ್ನು ಉಗುಳುತ್ತಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಪರೀಕ್ಷೆ ನಡೆಸಿದಾಗ ಅದರೊಳಗೆ ಪೌಡರ್ ರೀತಿಯ ವಸ್ತು ಕಂಡುಬರುತ್ತದೆ.  ಅನುಮಾನಾಸ್ಪದ ವಸ್ತು ಕಂಡ ತಕ್ಷಣವೇ ಆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಗ ಕೇಕ್’ನಲ್ಲಿ ವಿಷವಿತ್ತು ಎಂಬ ವದಂತಿ ಅದಾಗಲೇ ಎಲ್ಲೆಡೆ ಹಬ್ಬಿತ್ತು. ನಂತರ ತೆಲುಗು ಇಂಡಸ್ಟ್ರಿಯಲ್ಲಿ ನಂಬರ್ ಒನ್ ಆಗಿ ಮುಂದುವರಿದಿರುವ ಚಿರಂಜೀವಿ ಹತ್ಯೆಗೆ ಸಂಚು ನಡೆದಿದೆ ಎಂಬ ಸುದ್ದಿ ವೈರಲ್ ಆಯಿತು. ಆದರೆ ವಿಚಾರಣೆ ಬಳಿಕ ಅದು ವಾಮಾಚಾರ ನಡೆಸಿರುವುದು ಎಂದು ತಿಳಿದುಬಂತು. ಆ ಯುವಕ ಕೇರಳದಲ್ಲಿ ವಶೀಕರಣ ಮಾಡಿಸಿಕೊಂಡು ಬಂದು ಚಿರಂಜೀವಿ ಅವರಿಗೆ ತಿನ್ನಿಸಲು ಮುಂದಾಗಿದ್ದನಂತೆ.

ಇದನ್ನೂ ಓದಿ: Team India : ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ! ತಂಡದಿಂದ ಕೈಬಿಟ್ಟ ಆಯ್ಕೆಗಾರರು

ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದಾಗಿ ಮಾತನಾಡಿದ ಮೆಗಾಸ್ಟಾರ್, ತಮಗಾದ ಕಹಿ ಅನುಭವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಸಂದರ್ಶನದ ತುಣುಕು ಇಲ್ಲಿದೆ:  https://youtube.com/shorts/bKBNcY6IhSs?feature=share

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News