ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ 

Kannappa movie : ಟಾಲಿವುಡ್‌ ನಟ ಮಂಚು ವಿಷ್ಣು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಕಣ್ಣಪ್ಪ. ಇಂದು ಈ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. 

Written by - Krishna N K | Last Updated : Nov 23, 2023, 11:48 AM IST
  • ನಟ ಮಂಚು ವಿಷ್ಣು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಕಣ್ಣಪ್ಪ.
  • ಇಂದು ಈ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ವೈರಲ್‌ ಆಗಿದೆ.
  • ವಿಷ್ಣು ಹುಟ್ಟು ಹಬ್ಬದ ಪ್ರಯುಕ್ತ ಕಣ್ಣಪ್ಪ ಸಿನಿಮಾದ ಪೊಸ್ಟರ್‌ ಬಿಡುಗಡೆ ಮಾಡಲಾಗಿದೆ.
ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ʼಕಣ್ಣಪ್ಪʼ ಸಿನಿಮಾ...! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌  title=

Kannappa Movie : ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್‌ ಬಾಬು ಅವರ ಪುತ್ರ ಮಂಚು ವಿಷ್ಣು ನಟನೆಯ ಕಣ್ಣಪ್ಪ ಸಿನಿಮಾ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಣ್ಣಪ್ಪ ಸಿನಿಮಾ, ಶಿವ ಭಕ್ತ ಬೇಡರ ಕಣ್ಣಪ್ಪನ ಜೀವನ ಚರಿತ್ರೆ ಆಧಾರಿತ ಚಿತ್ರವಾಗಿದೆ. ಇಂದು ವಿಷ್ಣು ಹುಟ್ಟು ಹಬ್ಬದ ಪ್ರಯುಕ್ತ ಕಣ್ಣಪ್ಪ ಸಿನಿಮಾದ ಪೊಸ್ಟರ್‌ ರಿಲೀಸ್‌ ಆಗಿದ್ದು, ಸಂಚಲನ ಸೃಷಿಸುತ್ತಿದೆ.

ಇತ್ತೀಚೆಗಷ್ಟೇ ಮಾ (Movie Artists Association) ಚುನಾವಣೆ ಮೂಲಕ ವಿಷ್ಣು ಸುದ್ದಿಯಲ್ಲಿದ್ದರು. ಇದೀಗ ಬಿಗ್ ಬಜೆಟ್ ಸಿನಿಮಾ ಕಣ್ಣಪ್ಪ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಮಂಚು ವಿಷ್ಣು ಮತ್ತು ಮೋಹನ್ ಬಾಬು ಅವರ ಕನಸಿನ ಯೋಜನೆಯಾಗಿದ್ದು, ಈ ಪ್ರಾಜೆಕ್ಟ್ ಘೋಷಣೆಯಾದಾಗಿನಿಂದಲೂ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. 

ಇದನ್ನೂ ಓದಿ:BBK 10: ʼಸಂಗೀತಾ ಅವಕಾಶವಾದಿ, ಸಮಯ ಸಾಧಕಿʼ:ದೊಡ್ಮನೆಯಲ್ಲಿ ಗುಡುಗಿದ ಮೈಕಲ್!

ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ಪ್ರಭಾಸ್, ಶಿವರಾಜ್‌ ಕುಮಾರ್‌, ಮೋಹನ್ ಲಾಲ್, ನಯನತಾರಾ ಮುಂತಾದವರು ನಟಿಸುತ್ತಿರುವುದು ವಿಶೇಷವಾಗಿದೆ. ಈ ಸಿನಿಮಾದ ರೇಂಜ್ ಹೇಗಿರಲಿದೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಮಂಚು ವಿಷ್ಣು ತಮ್ಮ ಹುಟ್ಟುಹಬ್ಬದ ಪ್ರಯುಕ್ತ (ನವೆಂಬರ್ 23) ಪೋಸ್ಟರ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಪೋಸ್ಟರ್‌ನಲ್ಲಿ ವಿಷ್ಣು ಕಣ್ಣಪ್ಪನಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ಕಣ್ಣಪ್ಪ ಗೆಟಪ್‌ನಲ್ಲಿರುವ ಮಂಚು ವಿಷ್ಣು ಹಿಂಭಾಗದಿಂದ ಬೆಟ್ಟಗಳ ನಡುವಿನ ನೀರಿನಲ್ಲಿ ಶಿವನ ಆಕಾರವನ್ನು ಕಾಣುವಂತೆ ಪೋಸ್ಟರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ಲೇಡೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: BBK 10: ನೊಂದು ಬೆಂದರವರ ಗುಂಪಿಗೆ ನಾಯಕರಾದ ಕಾರ್ತಿಕ್‌ ಮಹೇಶ್!‌

ಈ ಚಿತ್ರದ ಸಂಪೂರ್ಣ ಶೂಟಿಂಗ್ ಕೂಡ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿದೆ. 80ರಷ್ಟು ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಈ ಸಿನಿಮಾ ವಿಶುವಲ್ ವಂಡರ್ ಆಗಲಿದೆಯಂತೆ. ಒಟ್ಟಾರೆಯಾಗಿ ಬ್ರೇಕ್‌ಗಾಗಿ ಕಾಯುತ್ತಿರುವ ವಿಷ್ಣುಗೆ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್‌ ನೀಡುತ್ತಾ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News