'Madagaja' Movie Success Celebration : 'ಮದಗಜ'ದ ಸಕ್ಸಸ್‌ ಸೆಲೆಬ್ರೇಷನ್: ರೋರಿಂಗ್‌ ಸ್ಟಾರ್ ಶ್ರೀಮುರಳಿ ಹೇಳಿದ್ದೇನು?

ಚಿತ್ರ ಓಟಿಟಿಯಲ್ಲಿ ರಿಲೀಸ್‌ ಆಗಿದ್ದರೂ ಸಿನಿ ಮಂದಿರಗಳಲ್ಲಿ ಹಾಫ್‌ ಸೆಂಚ್ಯುರಿ ಭಾರಿಸಿತ್ತು. ಇದೀಗ ಸಿನಿಮಾ ಸಕ್ಸಸ್ ಸಂಭ್ರಮವನ್ನು ಸಕ್ಸಸ್‌ ಮೀಟ್ ಮೂಲಕ ʼಮದಗಜʼ‌ ತಂಡ ಹಂಚಿಕೊಂಡಿದೆ.

Written by - Malathesha M | Last Updated : Feb 13, 2022, 06:29 PM IST
  • ರೋರಿಂಗ್‌ ಸ್ಟಾರ್‌ ಶ್ರೀಮುರಳಿ ʼಮದಗಜʼದಲ್ಲಿ ಅಬ್ಬರಿಸಿದ್ದರು
  • ಚಿತ್ರ ಓಟಿಟಿಯಲ್ಲಿ ರಿಲೀಸ್‌ ಆಗಿದ್ದರೂ ಸಿನಿ ಮಂದಿರಗಳಲ್ಲಿ ಹಾಫ್‌ ಸೆಂಚ್ಯುರಿ
  • ಇದಿಷ್ಟೇ ಅಲ್ಲ, ಮತ್ತೊಂದು ಸಿನಿಮಾ ಬಗ್ಗೆಯೂ ಶ್ರೀಮುರಳಿ ಹಿಂಟ್‌ ಕೊಟ್ಟಿದ್ದಾರೆ
'Madagaja' Movie Success Celebration : 'ಮದಗಜ'ದ ಸಕ್ಸಸ್‌ ಸೆಲೆಬ್ರೇಷನ್: ರೋರಿಂಗ್‌ ಸ್ಟಾರ್ ಶ್ರೀಮುರಳಿ ಹೇಳಿದ್ದೇನು? title=

ಬೆಂಗಳೂರು : ರೋರಿಂಗ್‌ ಸ್ಟಾರ್‌ ಶ್ರೀಮುರಳಿ ʼಮದಗಜʼದಲ್ಲಿ ಅಬ್ಬರಿಸಿದ್ದರು. ಪ್ರತಿ ಸೀನ್‌ಗೂ ಪ್ರೇಕ್ಷಕರು ಜೈಹೋ ಎಂದಿದ್ದರು. ಚಿತ್ರ ಓಟಿಟಿಯಲ್ಲಿ ರಿಲೀಸ್‌ ಆಗಿದ್ದರೂ ಸಿನಿ ಮಂದಿರಗಳಲ್ಲಿ ಹಾಫ್‌ ಸೆಂಚ್ಯುರಿ ಭಾರಿಸಿತ್ತು. ಇದೀಗ ಸಿನಿಮಾ ಸಕ್ಸಸ್ ಸಂಭ್ರಮವನ್ನು ಸಕ್ಸಸ್‌ ಮೀಟ್ ಮೂಲಕ ʼಮದಗಜʼ‌ ತಂಡ ಹಂಚಿಕೊಂಡಿದೆ.

ಅದೇನ್‌ ಖದರ್‌, ಅದೇನ್‌ ಡೈಲಾಗ್.‌ ಒಂದೊಂದು ಸೀನ್‌ ಕೂಡ ಅದ್ಭುತ.. ಹೀಗೆ ʼಮದಗಜʼ ಸಿನಿಮಾ(Madagaja Movie) ನೋಡಿ ಬಂದ ಪ್ರೇಕ್ಷಕರು ಎಕ್ಸೈಟ್‌ ಆಗಿದ್ರು. ಕಡೆಗೆ ಓಟಿಟಿಯಲ್ಲಿ ಸಿನಿಮಾ ಬಹುಬೇಗ ರಿಲೀಸ್‌ ಆದರೂ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಂಡಿತ್ತು. ಹಿಂಗೆ ಸಖತ್‌ ಸಕ್ಸಸ್‌ ಕಂಡ ಹಿನ್ನೆಲೆಯಲ್ಲಿ ಮದಗಜ ಚಿತ್ರತಂಡ ಸಕ್ಸಸ್ ಸಂಭ್ರಮವನ್ನು ಪ್ರೇಕ್ಷಕ ಪ್ರಭುವಿನ ಎದುರು ಹಂಚಿಕೊಂಡಿದೆ.

No description available.

ಇದನ್ನೂ ಓದಿ : By Two Love Movie : ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಲವ್‌ ಸ್ಟೋರಿ: 'ಬೈ ಟು ಲವ್' ಟ್ರೇಲರ್‌ ರಿಲೀಸ್‌ಗೆ ಕೌಂಟ್‌ಡೌನ್..!

ಮಗುವಿನ ಜೊತೆ ಮುದ್ದಾಟ

ಇದಷ್ಟೇ ಅಲ್ಲದೆ ಸಿನಿಮಾ ಸಕ್ಸಸ್‌ ಆಗಲು ಕಾರಣರಾದ ತಂತ್ರಜ್ಞರು ಹಾಗೂ ಪ್ರತಿ ಸಿಬ್ಬಂದಿಯನ್ನೂ ಚಿತ್ರತಂಡದ ವತಿಯಿಂದ ಅಭಿನಂದಿಸಲಾಯಿತು. ಈ ವೇಳೆ ಮಗುವಿನ ಜೊತೆ ರೋರಿಂಗ್‌ ಸ್ಟಾರ್‌ ಶ್ರೀಮುರಳಿ(Roaring Star Sri Murali) ಆಡಿದ ಮುದ್ದಾದ ಮಾತುಗಳು ಎಲ್ಲರ ಗಮನ ಸೆಳೆಯಿತು.

No description available.

ಸ್ಟಾರ್‌ಗಳ ಸಂಗಮ

‘ಮದಗಜ’ ಸಿನಿಮಾದಲ್ಲಿ ದೊಡ್ಡ ಸ್ಟಾರ್‌ ಕಾಸ್ಟ್‌ ಇತ್ತು. ಜಗಪತಿ ಬಾಬು, ದೇವಯಾನಿ, ರಂಗಾಯಣ ರಘು, ಆಶಿಕಾ ರಂಗನಾಥ್, ಶಿವರಾಜ್ ಕೆ.ಆರ್. ಪೇಟೆ, ಕೆಜಿಎಫ್ ಸಿನಿಮಾ(KGF Movie)ದ ವಿಲನ್ ಗರುಡ ರಾಮ್, ಅನಿಲ್ ಕುಮಾರ್ ಸೇರಿ ಹಲವು ಘಟಾನುಘಟಿ ನಟರು ಆಕ್ಟ್‌ ಮಾಡಿದ್ದರು. ಇನ್ನು ಮದಗಜ ಚಿತ್ರವನ್ನ 74 ದಿನಗಳ ಕಾಲ ವಾರಾಣಸಿ, ಬೆಂಗಳೂರು, ಮೈಸೂರು ಹೀಗೆ ಹಲವು ಲೊಕೇಷನ್‌ಗಳಲ್ಲಿ ಶೂಟ್‌ ಮಾಡಲಾಗಿತ್ತು.

No description available.

ಇದನ್ನೂ ಓದಿ : Karnataka Hijab Row : ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಹುಡುಗಿಗೆ ಸಲ್ಮಾನ್-ಅಮೀರ್ ಕೊಟ್ಟರಾ 3 ಕೋಟಿ? ಸತ್ಯ ಇಲ್ಲಿದೆ!

ಇದಿಷ್ಟೇ ಅಲ್ಲ, ಮತ್ತೊಂದು ಸಿನಿಮಾ ಬಗ್ಗೆಯೂ ಶ್ರೀಮುರಳಿ(Sri Murali) ಹಿಂಟ್‌ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುವ ಭರವಸೆ ನೀಡಿದ್ದಾರೆ. ಮತ್ತೊಂದ್ಕಡೆ ಮದಗಜ ತಂಡದಿಂದಲೇ ಇನ್ನೊಂದು ಸಿನಿಮಾ ಸೆಟ್ಟೇರಲಿದ್ದು, ಇದಕ್ಕಾಗಿ ಪೂರ್ವ ತಯಾರಿ ಕೂಡ ಸಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News