BBK OTT : ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್​ ಬಾಸ್ ಸ್ಪರ್ಧಿ.. ಕಣ್ಣೀರು ತರಿಸುತ್ತೆ ಈ ಕಲಾವಿದನ ಕಥೆ!

Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿಯ ಬಹು ನಿರೀಕ್ಷಿತ ಗ್ರ್ಯಾಂಡ್ ಪ್ರೀಮಿಯರ್ ನಿನ್ನೆ ರಾತ್ರಿ ನಡೆಯಿತು. ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. 

Written by - Chetana Devarmani | Last Updated : Aug 7, 2022, 11:06 AM IST
  • ಬಿಗ್ ಬಾಸ್ ಕನ್ನಡ ಒಟಿಟಿಯ ಕಂಟೆಸ್ಟಂಟ್‌
  • ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್​ ಬಾಸ್ ಸ್ಪರ್ಧಿ
  • ಕಣ್ಣೀರು ತರಿಸುತ್ತೆ ಈ ಕಲಾವಿದನ ಕಥೆ
BBK OTT : ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್​ ಬಾಸ್ ಸ್ಪರ್ಧಿ.. ಕಣ್ಣೀರು ತರಿಸುತ್ತೆ ಈ ಕಲಾವಿದನ ಕಥೆ! title=
ಲೋಕೇಶ್ ಕುಮಾರ್

Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿಯ ಬಹು ನಿರೀಕ್ಷಿತ ಗ್ರ್ಯಾಂಡ್ ಪ್ರೀಮಿಯರ್ ನಿನ್ನೆ ರಾತ್ರಿ ನಡೆಯಿತು. ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಹಲವು ಕಂಟೆಸ್ಟಂಟ್‌ಗಳ ಹಿಂದೆ ನೋವಿನ ಕಥೆ ಇರುತ್ತದೆ. ಜೀವನದಲ್ಲಿ ಹತ್ತಾರು ಕಷ್ಟಗಳನ್ನು ಎದುರಿಸಿ, ನೋವನ್ನು ನುಂಗಿ ಬದುಕಿನಲ್ಲಿ ಸಾಧನೆಗೈದಿರುತ್ತಾರೆ. ಅದೇ ರೀತಿ ಈಗ ಬಿಗ್ ಬಾಸ್​​ ಕನ್ನಡ ಒಟಿಟಿ ಶುರುವಾಗಿದೆ. ಅದರಲ್ಲಿ ಸಹ ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿ ಜೀವನ ಕಟ್ಟಿಕೊಂಡವರು ಇದ್ದಾರೆ. ಅಂಥವರಲ್ಲಿ ಒಬ್ಬರು ಹಾಸ್ಯನಟ ಲೋಕೇಶ್. ಇವರ ಹಿಂದೆಯೂ ಒಂದು ಕಣ್ಣೀರ ಕಥೆ ಇದೆ, ನೋವಿನ ವ್ಯಥೆ ಇದೆ. ಈ ಕಲಾವಿದನ ಜೀವನಗಾಥೆ ಕೇಳಿದ್ರೆ ಕಲ್ಲು ಮನಸ್ಸಿನವರ ಕಣ್ಣಲ್ಲಿಯೂ ನೀರು ಬರುತ್ತದೆ. ಪೇಪರ್ ಆಯ್ದು, ಭಿಕ್ಷೆ ಬೇಡಿ ಬದುಕು ಕಟ್ಟಿಕೊಂಡ ಈ ಕಲಾವಿದ ನಡೆದು ಬಂದ ಹಾದಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಇದನ್ನೂ ಓದಿ: ಬಿಗ್‌ಬಾಸ್ ಒಟಿಟಿ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಎಂಟ್ರಿ!

ನಿನ್ನೆ ನಡೆದ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ 6 ನೇ ಸ್ಪರ್ಧಿಯಾಗಿ ಮನೆಯೊಳಗೆ ಹೋದ ಲೋಕೇಶ್ ಕುಮಾರ್, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಹೆಸರುವಾಸಿಯಾದವರು. 9 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಓಡಿಬಂದ ಬಾಲಕ ಇಂದು ಹಾಸ್ಯನಟನಾಗಿ ಜನಮನ ಗೆದ್ದಿದ್ದಾರೆ. ಈ ಬಗ್ಗೆ ವೇದಿಕೆಯ ಮೇಲೆ ಕಿಚ್ಚ ಸುದೀಪ್‌ ಎದುರು ಮಾತನಾಡಿದ ಲೋಕೇಶ್‌, "ನನ್ನ ಕಂಡರೆ ಮೊದಲು ಎಲ್ಲರೂ ನೆಗ್ಲೆಟ್ ಮಾಡುತ್ತಿದ್ರು. ಆದರೆ ಈಗ ಜನ ಅವರೇ ಬಂದು ಸೆಲ್ಫೀ ಕೇಳುತ್ತಾರೆ. ನನ್ನ ಕಥೆಯಿಂದ ಒಂದಷ್ಟು ಜನರ ಬದುಕಿಗೆ ಸ್ಫೂರ್ತಿ ಸಿಗಬಹುದು. ನನ್ನ ಅಪ್ಪನ ಮೊದಲ ಹೆಂಡತಿ ತೀರಿಕೊಂಡ ಬಳಿಕ ಅವರು ಮತ್ತೊಂದು ಮದುವೆಯಾದರು. ಆ ಜೋಡಿಗೆ ಹುಟ್ಟಿದ ಮಗ ನಾನು. 9 ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಬಂದೆ. ರೈಲು ಹತ್ತಿ ಬೇರೆ ಬೇರೆ ಊರುಗಳಿಗೆ ಹೋಗ್ತಿದ್ದೆ. ನಾನು ಪೇಪರ್ ಆಯ್ದುಕೊಂಡು ಜೀವನ ಮಾಡಿದ್ದೀನಿ" ಎಂದು ಹೇಳಿಕೊಂಡರು.

"ಬದುಕು ನಡೆಸಲು ಭಿಕ್ಷೆ ಬೇಡಿದ್ದೀನಿ. ನನ್ನ ನಟನೆ ಕೂಡ ಭಿಕ್ಷೆ ಬೇಡುತ್ತಲೇ ಆರಂಭವಾಯಿತು. ಬೆಂಗಳೂರಿನ ಕಬ್ಬನ್ ಪಾರ್ಕ್​ನಲ್ಲಿ ಮೂಕ ಎಂದು ಹೇಳಿಕೊಂಡು ಹಣ ಕೇಳಿದ್ದೀನಿ. ನನ್ನನ್ನು ಮೂಕ ಎಂದು ತಿಳಿದು ಎಲ್ಲರೂ ದುಡ್ಡು ಹಾಕ್ತಿದ್ದರು. ಭಿಕ್ಷೆ ಬೇಡ್ತಿದ್ದೆ ನನಗೆ ಒಂದು ಟ್ರಸ್ಟ್​​ನವರು ಕರೆದುಕೊಂಡು ಹೋಗಿ ಆಶ್ರಯ ನೀಡಿದರು. ಆ ಟ್ರಸ್ಟ್‌ ಇರಲಿಲ್ಲ ಎಂದರೆ ನಾನು ಜೀವನದಲ್ಲಿ ಇಲ್ಲಿಯವರೆಗೆ ಬರುತ್ತಲೇ ಇರಲಿಲ್ಲ" ಎಂದು ತಮ್ಮ ಜೀವನಗಾಥೆಯನ್ನು ಹೇಳಿಕೊಂಡರು. 

ಇದನ್ನೂ ಓದಿ: ಬಿಗ್‌ಬಾಸ್‌ OTT ಗೆ ಎಂಟ್ರಿ ನೀಡಿದ ಸೋನು ಶ್ರೀನಿವಾಸ್ ಗೌಡ! 

"ಬದುಕು ನಡೆಸಲು ಭಿಕ್ಷೆ ಬೇಡಿದ್ದೀನಿ. ನನ್ನ ನಟನೆ ಕೂಡ ಭಿಕ್ಷೆ ಬೇಡುತ್ತಲೇ ಆರಂಭವಾಯಿತು. ಬೆಂಗಳೂರಿನ ಕಬ್ಬನ್ ಪಾರ್ಕ್​ನಲ್ಲಿ ಮೂಕ ಎಂದು ಹೇಳಿಕೊಂಡು ಹಣ ಕೇಳಿದ್ದೀನಿ. ನನ್ನನ್ನು ಮೂಕ ಎಂದು ತಿಳಿದು ಎಲ್ಲರೂ ದುಡ್ಡು ಹಾಕ್ತಿದ್ದರು. ಭಿಕ್ಷೆ ಬೇಡ್ತಿದ್ದೆ ನನಗೆ ಒಂದು ಟ್ರಸ್ಟ್​​ನವರು ಕರೆದುಕೊಂಡು ಹೋಗಿ ಆಶ್ರಯ ನೀಡಿದರು. ಆ ಟ್ರಸ್ಟ್‌ ಇರಲಿಲ್ಲ ಎಂದರೆ ನಾನು ಜೀವನದಲ್ಲಿ ಇಲ್ಲಿಯವರೆಗೆ ಬರುತ್ತಲೇ ಇರಲಿಲ್ಲ. ಯಾವ ಪಾತ್ರ ಸಿಕ್ಕರೂ ಮಾಡಲು ಸಿದ್ಧನಿದ್ದೇನೆ. ಸೆಲೆಬ್ರಿಟಿ ಲೈಫ್ ಕೆಲವೊಮ್ಮೆ ಚುಚ್ಚುತ್ತೆ. ಬಿಗ್‌ ಬಾಸ್‌ನಲ್ಲಿ ಸಿಕ್ಕಿರುವ ಈ ಅವಕಾಶದಿಂದ ಜೀವನ ಬದಲಾಗಬಹುದು ಎಂಬ ಉದ್ದೇಶ ಇದೆ" ಎಂದಿದ್ದಾರೆ. ಕೆಲವು ದಿನಗಳ ನಂತರ, ನಾವೇ ಭಾಗ್ಯವಂತರು, ಅಂಬುಜ, ಪ್ರಯಾಣಿಕರ ಗಮನಕ್ಕೆ, ಶ್ಯಾಡೋ, ಸೀತಾರಾಮ ಕಲ್ಯಾಣ ಮುಂತಾದ ಸಿನಿಮಾಗಳಲ್ಲಿ ಲೋಕೇಶ್ ಅಭಿನಯಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಲೋಕೇಶ್ ಸ್ಪರ್ಧಿಸಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಲೋಕೇಶ್ ಸ್ಪರ್ಧಿಯಾಗಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News