Leo Movie: ಮಾಸ್ಟರ್ ನಂತರ ವಿಜಯ್ ಮತ್ತು ಲೋಕೇಶ್ ಕನಕರಾಜ್ ಜೊತೆಯಾದ ಎರಡನೇ ಚಿತ್ರ ಲಿಯೋ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪರವಾಗಿ ಲಲಿತ್ ಕುಮಾರ್ ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ.
ಚಿತ್ರದಲ್ಲಿ ತ್ರಿಷಾ ನಟ ವಿಜಯ್ ಜೊತೆ ನಟಿಸಿದ್ದಾರೆ. ಸಂಜಯ್ ದತ್, ಮಿಶ್ಕಿನ್, ಅರ್ಜುನ್, ಸ್ಯಾಂಡಿ ಮಾಸ್ಟರ್, ಮ್ಯಾಥ್ಯೂ ಥಾಮಸ್, ಬಿಗ್ ಬಾಸ್ ಜನನಿ, ಪ್ರಿಯಾ ಆನಂದ್, ಗೌತಮ್ ಮೆನನ್ ದೊಡ್ಡ ತಾರೆಯರು ಚಿತ್ರ ತಾರಾಬಳಗಲ್ಲಿದ್ದಾರೆ.
ಇದನ್ನೂ ಓದಿ-Shilpa Shetty: ಗಂಡನಂತೆ ಪೂರ್ತಿ ಮುಖ ಮುಚ್ಚಿಕೊಂಡ ಕರಾವಳಿ ಬೆಡಗಿ..! ಕಾರಣ ಏನು ಗೊತ್ತಾ?
ಇದಲ್ಲದೇ ಅನಿರುದ್ಧ್ ಸಂಗೀತ, ಮನೋಜ್ ಪರಮಹಂಸ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ ಹೀಗೆ ಹಲವು ಅನುಭವಿ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದು, ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಹಚ್ಚಿಸುತ್ತಿದೆ. ಲಿಯೋ ಬಿಡುಗಡೆಗೆ ಕೇವಲ 3 ದಿನಗಳು ಬಾಕಿ ಉಳಿದಿದ್ದು, ವಿಶ್ವದಾದ್ಯಂತ ಇದರ ಬುಕಿಂಗ್‌ಗಳು ಬಿರುಸಿನಿಂದ ನಡೆಯುತ್ತಿವೆ. ಕಳೆದ ತಿಂಗಳು ವಿದೇಶದಲ್ಲಿ ಪ್ರಾರಂಭವಾದ ಪ್ರೀ ಬುಕ್ಕಿಂಗ್... ಕಳೆದ ವಾರ ಭಾರತದಲ್ಲಿ ಪ್ರಾರಂಭವಾಯಿತು.
ಟಿಕೆಟ್ ಮಾರಾಟ ಆರಂಭವಾದ ಕೂಡಲೇ ಬಹುತೇಕ ಸ್ಥಳಗಳಲ್ಲಿ ಲಿಯೋ ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ತಮಿಳುನಾಡು ಮಾತ್ರವಲ್ಲದೆ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ಲಿಯೋ ಚಿತ್ರದ ಟಿಕೆಟ್‌ಗೆ ಭಾರಿ ಬೇಡಿಕೆ ಇದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಲಿಯೋಗೆ ಮುಂಜಾನೆ ಪ್ರದರ್ಶನಕ್ಕೆ ಅನುಮತಿ ನೀಡದ ಕಾರಣ, ಮುಂಜಾನೆ ಪ್ರದರ್ಶನವನ್ನು ವೀಕ್ಷಿಸಲು ಅಭಿಮಾನಿಗಳು ಆಂಧ್ರಪ್ರದೇಶ ಮತ್ತು ಕೇರಳಕ್ಕೆ ತೆರಳಲು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ-ಪಾಕ್ ಕ್ರಿಕೆಟಿಗನನ್ನು ಮದುವೆಯಾಗಲು ಸಿನಿಮಾ ಬಿಟ್ಟ ಭಾರತದ ನಟಿ ಈಕೆ!
ಇನ್ನು ಲಿಯೋ ಸಿನಿಮಾದ ಬುಕಿಂಗ್ ಜೋರಾಗಿ ನಡೆಯುತ್ತಿದ್ದು, ಸಿನಿಮಾದ ಕಲೆಕ್ಷನ್ ಸ್ಟೇಟಸ್ ಈಗ ಇಂಟರ್ ನೆಟ್ ನಲ್ಲಿ ಪ್ರಕಟವಾಗಿದೆ. ಅದರಂತೆ ಲಿಯೋ ಚಿತ್ರ ಕೇವಲ ಪ್ರೀ ಬುಕ್ಕಿಂಗ್ ಮೂಲಕವೇ 60 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದರಲ್ಲಿ ತಮಿಳುನಾಡಿನಲ್ಲಿ 6.25 ಕೋಟಿ, ಕೇರಳದಲ್ಲಿ 7 ಕೋಟಿ, ಕರ್ನಾಟಕದಲ್ಲಿ 6.25 ಕೋಟಿ, ಇತರೆ ರಾಜ್ಯಗಳಲ್ಲಿ 1 ಕೋಟಿ, ಭಾರತವೊಂದರಲ್ಲೇ 20.5 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲದೇ ಹೊರ ದೇಶಗಳಲ್ಲಿ 6 ವಾರ ಮುಂಚಿತವಾಗಿಯೇ ಬುಕ್ಕಿಂಗ್ ಆಗುತ್ತಿರುವುದರಿಂದ ಅಲ್ಲಿ 39.5 ಕೋಟಿ ರೂ.ಗಳ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೆಲ್ಲವನ್ನು ಗಮನಿಸಿದರೆ ಲಿಯೋ ಚಿತ್ರದ ಮೊದಲ ದಿನದ ವಿಶ್ವಾದ್ಯಂತ ಕಲೆಕ್ಷನ್ ಖಂಡಿತಾ 100 ಕೋಟಿ ರೂ.ಗೂ ಅಧಿಕವಾಗಲಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ರಜನಿಕಾಂತ್ ಅವರ 2.0 ತಮಿಳಿನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಉಳಿಸಿಕೊಂಡಿದ್ದು, ಲಿಯೋ ಅದನ್ನು ಮುರಿಯುವ ಸಾಧ್ಯತೆಯಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.