ಬಿಗ್‌ ಬಾಸ್ ಚೆಲುವೆ ಜೊತೆ ಸ್ಟಾರ್‌ ನಟ ಅಫೇರ್‌... ದಿನಕ್ಕೆ 50 ಸಾವಿರ..! ಶಾಕಿಂಗ್‌ ವಿಚಾರ ರಿವೀಲ್‌

Raj tarun and Lavanya : ಟಾಲಿವುಡ್‌ ಖ್ಯಾತ ನಟ ರಾಜ್ ತರುಣ್ ವಿಚಾರ ದಿನದಿಂದ ದಿನಕ್ಕೆ ಹೊಸ ಹೊಸ ತಿರುವ ಪಡೆಯುತ್ತಿದೆ. ಲಾವಣ್ಯ ನೀಡುತ್ತಿರುವ ಹೇಳಿಕೆ ತೆಲುಗು ಸಿನಿರಂಗದಲ್ಲಿ ಸಂಚನಲ ಸೃಷ್ಟಿಸುತ್ತಿದೆ. ಇದೀಗ ಈಕೆ ನಟನಿಗೆ ಸಂಬಂಧಿಸಿದ ಶಾಕಿಂಗ್‌ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ.. 

Written by - Krishna N K | Last Updated : Jul 12, 2024, 06:20 PM IST
    • ನಟ ರಾಜ್ ತರುಣ್ ವಿಚಾರ ದಿನದಿಂದ ದಿನಕ್ಕೆ ಹೊಸ ಹೊಸ ತಿರುವ ಪಡೆಯುತ್ತಿದೆ.
    • ಲಾವಣ್ಯ ನೀಡುತ್ತಿರುವ ಹೇಳಿಕೆ ತೆಲುಗು ಸಿನಿರಂಗದಲ್ಲಿ ಸಂಚನಲ ಸೃಷ್ಟಿಸುತ್ತಿದೆ.
    • ಇದೀಗ ಈಕೆ ನಟನಿಗೆ ಸಂಬಂಧಿಸಿದ ಶಾಕಿಂಗ್‌ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ..
ಬಿಗ್‌ ಬಾಸ್ ಚೆಲುವೆ ಜೊತೆ ಸ್ಟಾರ್‌ ನಟ ಅಫೇರ್‌... ದಿನಕ್ಕೆ 50 ಸಾವಿರ..! ಶಾಕಿಂಗ್‌ ವಿಚಾರ ರಿವೀಲ್‌ title=
Raj tarun lavanya

Raj tarun and lavanya news : ಯಂಗ್ ಹೀರೋ ರಾಜ್ ತರುಣ್ ಮತ್ತು ಲಾವಣ್ಯ ಅಫೇರ್ ಟಾಲಿವುಡ್‌ನಲ್ಲಿ ದೊಡ್ಡ ಬಿರುಗಾಳಿಯಂತೆ ಬೀಸುತ್ತಿದೆ. ಇದರಿಂದಾಗಿ ರಾಜ್ ತರುಣ್ ಗಂಭೀರ ಸಂಕಷ್ಟದಲ್ಲಿ ಸಿಲುಕಿದಂತೆ ಕಾಣುತ್ತಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದ, ರಾಜ್ ತರುಣ್ ವಿರುದ್ಧ ಲಾವಣ್ಯ ನೀಡುತ್ತಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.

ರಾಜ್ ತರುಣ್ ನನಗೆ ಬೇಕು, ಈಗಲೂ ಅತನನ್ನು ಪ್ರೀತಿಸುತ್ತಿದ್ದೇನೆ ಅಂತ ಲಾವಣ್ಯ ಧೈರ್ಯವಾಗಿ ಹೇಳುತ್ತಿದ್ದಾರೆ. ಅಲ್ಲದೆ, ರಾಜ್ ತರುಣ್ ಜೊತೆ ಆಡಿಯೋ ಕಾಲ್, ಚಾಟಿಂಗ್ ಹೀಗೆ ಹಲವು ಸಾಕ್ಷ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಇದೀಗ ನಟನ ಕುರಿತು ಹೊಸ ವಿಚಾರವೊಂದನ್ನು ಬಯಲಿಗೆಳೆದಿದ್ದಾಳೆ..

ಇದನ್ನೂ ಓದಿ:ನನ್ನ ನೋಡ್ಬೇಕು ಅಂದ್ರೆ ಅದನ್ನ ತೋರಿಸಬೇಕು..! ಸಂಸದೆ ಕಂಗನಾ ಹೊಸ ರೂಲ್ಸ್‌

ರಾಜ್ ತರುಣ್ ಅವರಿಂದ ಲಾವಣ್ಯಗೆ ಎರಡು ಬಾರಿ ಗರ್ಭಪಾತವಾಗಿಯಂತೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನೂ ಲಾವಣ್ಯ ಬಹಿರಂಗಪಡಿಸಿದ್ದಾರೆ. ರಾಜ್ ತರುಣ್ ಕೂಡ ಲಾವಣ್ಯ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಲಾವಣ್ಯ ಮಾಧ್ಯಮಗಳಿಗೆ ಹೆಚ್ಚು ಸಂದರ್ಶನ ನೀಡಿ ಹೆಚ್ಚು ಸಂಚಲನ ಮೂಡಿಸುತ್ತಿದ್ದಾರೆ. 

ರಾಜ್ ತರುಣ್ ಕೆಲವು ನಾಯಕಿಯರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ತನ್ನತ್ತ ಗಮನ ಹರಿಸುತ್ತಿಲ್ಲ ಎಂದಿದ್ದಾರೆ ಲಾವಣ್ಯ. ಆ ನಾಯಕಿಯರ ಹೆಸರನ್ನೂ ಹೇಳಿದ್ದಾರೆ. ಶಾಲಿನಿ ಪಾಂಡೆ, ರಿದ್ಧಿ ಕುಮಾರ್ ಮತ್ತು ಮಾಳವಿ ಮಲ್ಹೋತ್ರಾ ಜೊತೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅರಿಯಾನಾ ಹೆಸರು ಕೂಡ ಹೇಳಿದ್ದಾರೆ. 

ಇದನ್ನೂ ಓದಿ:ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್‌ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯ

ರಾಜ್ ತರುಣ್ ಜೊತೆ ಅರಿಯಾನಾ ಅನೈತಿಕ ಸಂಬಂಧ ಹೊಂದಿದ್ದು ಹೇಗೆ ಗೊತ್ತಾಯಿತು ಎಂದು ಸಂದರ್ಶನವೊಂದರಲ್ಲಿ ಆ್ಯಂಕರ್ ಕೇಳಿದಾಗ ಲಾವಣ್ಯ ಉತ್ತರಿಸಿದ್ದಾರೆ. ಅರಿಯಾನಾ ಜೊತೆ ಸಂಬಂಧ ಶುರುವಾದ ನಂತರ ರಾಜ್ ಮನೆಗೆ ಬಂದಿರಲಿಲ್ಲ. ನನ್ನ ಮೇಲೆ ಅರಿಯಾನ ವರ್ತನೆಯೂ ಬದಲಾಯಿತು. ಒಬ್ಬ ಹುಡುಗಿಯಾಗಿ ಇದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. 

ರಾಜ್ ಮಣಿಕೊಂಡದಲ್ಲಿರುವ ಅರಿಯಾನ ಅಪಾರ್ಟ್ ಮೆಂಟ್‌ಗೆ ಹೋಗುತ್ತಿದ್ದರು. ಅವರಿಬ್ಬರ ಫೋಟೋಗಳನ್ನೂ ನಾನು ನೋಡಿದ್ದೇನೆ. ಒಂದು ದಿನ ನಾನು ಗೋವಾದಲ್ಲಿದ್ದಾಗ ರಾಜ್ ಫೋನ್‌ನಿಂದ ಅರಿಯಾನ ನನಗೆ ಕರೆ ಮಾಡಿದ್ದಳು. ತುಂಬಾ ಅವಮಾನಕರವಾಗಿ ಮಾತಾಡಿದಳು. ನಿನಗೆ ಸಂಬಳ ಎಷ್ಟು ಅಂತ ಕೇಳಿದಳು.. ನಾನು ಈಗ ಕೆಲಸ ಮಾಡುತ್ತಿದ್ದೇನೆ.. ವೇತನ ಕಡಿಮೆ ಇದೆ ಅಂದ್ರೆ, ಅದಕ್ಕೆ ಆಕೆ ನನಗೆ ದಿನಕ್ಕೆ 50 ಸಾವಿರದಿಂದ 1 ಲಕ್ಷ ಸಿಗುತ್ತೆ ಅಂತ ಹೀಯಾಳಿಸಿ ಮಾತನಾಡಿದಳು ಅಂತ ಲಾವಣ್ಯ ತಿಳಿಸಿದ್ದಾರೆ..

ಇದನ್ನೂ ಓದಿ:

ಆಗ ನನಗೆ ಅರ್ಥವಾಯಿತು.. ರಾಜ್ ನನಗೆ ಕೌಂಟರ್ ನೀಡಲು ಅರಿಯಾನಾ ಅವರನ್ನು ಬಳಸಿಕೊಂಡರು ಅಂತ ಲಾವಣ್ಯ ಸೆನ್ಸೇಷನಲ್ ಕಾಮೆಂಟ್ಸ್ ಮಾಡಿದ್ದಾರೆ. ಅದರ ನಂತರ ನಾನು ಅರಿಯಾನಾಗೆ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಅರಿಯಾನಾ ಕೂಡ ನನ್ನ ಬಳಿ ಕ್ಷಮೆ ಯಾಚಿಸಿದರು. ಆ ಕಾಲ್ ರೆಕಾರ್ಡ್ ಗಳೂ ಇವೆ ಎಂದು ಲಾವಣ್ಯ ಹೇಳಿಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News