Nayanthara: ಲೇಡಿ ಸೂಪರ್​ಸ್ಟಾರ್ ನಯನತಾರಾ ಸಂಭಾವನೆ ಎಷ್ಟು ಗೊತ್ತಾ..?

ಖ್ಯಾತ ನಿರ್ದೇಶಕ ಮೋಹನ್ ರಾಜಾ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ‘ಗಾಡ್​ಫಾದರ್’ ಚಿತ್ರದಲ್ಲಿ ನಟಿಸುವುದಕ್ಕೆ ನಯನತಾರಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಡಿಮಾಂಡ್ ಮಾಡಿದ್ದಾರಂತೆ.

Written by - Puttaraj K Alur | Last Updated : Nov 22, 2021, 10:50 AM IST
  • ಭಾರೀ ಸಂಭಾವನೆ ಹೆಚ್ಚಿಸಿಕೊಂಡ ಲೇಡಿ ಸೂಪರ್​ಸ್ಟಾರ್ ನಯನತಾರಾ
  • ‘ಗಾಡ್‌ಫಾದರ್’ ಸಿನಿಮಾಗೆ 4 ಕೋಟಿ ರೂ. ಡಿಮ್ಯಾಂಡ್ ಮಾಡಿದ ನಟಿ
  • ಚಿರಂಜೀವಿ ಜೊತೆಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ವಿಶೇಷ ಪಾತ್ರ
Nayanthara: ಲೇಡಿ ಸೂಪರ್​ಸ್ಟಾರ್ ನಯನತಾರಾ ಸಂಭಾವನೆ ಎಷ್ಟು ಗೊತ್ತಾ..? title=
4 ಕೋಟಿ ರೂ. ಡಿಮ್ಯಾಂಡ್ ಮಾಡಿದ ನಟಿ

ನವದೆಹಲಿ: ಲೇಡಿ ಸೂಪರ್​ಸ್ಟಾರ್ ನಯನತಾರಾ(Lady Superstar Nayanthara)ಗುರುವಾರ(ನ.18)ವಷ್ಟೇ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಗಾಡ್‌ಫಾದರ್ ಚಿತ್ರತಂಡವು ನಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ. ತೆಲುಗು, ತಮಿಳು ಚಿತ್ರರಂಗದಲ್ಲಿ ನಾಯಕರ ಜೊತೆಗೆ ನಾಯಕಿಯರು ಕೂಡ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ನಯನತಾರಾ ಕೂಡ ತಮ್ಮ ಹೊಸ ಸಿನಿಮಾಗೆ ಭಾರೀ ಮೊತ್ತದ ಸಂಭಾವಣೆ ಪಡೆದುಕೊಳ್ಳುತ್ತಿದ್ದಾರಂತೆ.

ಹೌದು, ಖ್ಯಾತ ನಿರ್ದೇಶಕ ಮೋಹನ್ ರಾಜಾ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ(Chiranjeevi) ನಟಿಸಲಿರುವ ‘ಗಾಡ್​ಫಾದರ್’ ಚಿತ್ರದಲ್ಲಿ ನಟಿಸುವುದಕ್ಕೆ ನಯನತಾರಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಡಿಮಾಂಡ್ ಮಾಡಿದ್ದಾರಂತೆ. ಕೆಲವು ದಿನಗಳ ಹಿಂದೆ ಅವರು ‘ಗಾಡ್​ಫಾದರ್’ ಆಫರ್ ತಿರಸ್ಕರಿಸಿದ್ದರು ಎಂಬ ಗಾಳಿಸುದ್ದಿಗಳು ಹರಡಿದ್ದವು. ಅಂತಿಮವಾಗಿ ಅವರು ‘ಗಾಡ್‌ಫಾದರ್‌’(Godfather)ನಲ್ಲಿ ನಟಿಸಲಿದ್ದಾರೆಂದು ಖಚಿತಪಡಿಸಲಾಗಿದೆ. ಈಗ ಈ ಚಿತ್ರಕ್ಕೆ  ನಯನತಾರಾ ತೆಗೆದುಕೊಳ್ಳುತ್ತಿರುವ ಸಂಭಾವನೆಯ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: 'ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಸಕಾಲ'

ಈಗಾಗಲೇ ನಯನತಾರಾ ಕೇಳಿದಷ್ಟು ಹಣ(Nayanthara Remuneration) ನೀಡಲು ನಿರ್ಮಾಣ ಸಂಸ್ಥೆಯೂ ಒಪ್ಪಿಕೊಂಡಿದೆಯಂತೆ. ಇದು ತೆಲುಗಿನಲ್ಲಿ ಇದುವರೆಗಿನ ನಾಯಕಿಯರು ತೆಗೆದುಕೊಳ್ಳುತ್ತಿರುವ ಗರಿಷ್ಠ ಮೊತ್ತವಾಗಿದೆ. ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಲೆಡಿ ಸೂಪರ್ ಸ್ಟಾರ್ ಹಲವಾರು ಮಹಿಳಾ ಕೇಂದ್ರಿತ ಚಲನಚಿತ್ರಗಳ ಭಾಗವಾಗಿದ್ದಾರೆ.ಅವರಿಗೆ ಸಾಲು ಸಾಲು ಆಫರ್ ಗಳು ಬರುತ್ತಿದ್ದು, ಸಖತ್ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ‘ಗಾಡ್‌ಫಾದರ್‌’ ಶೂಟಿಂಗ್​ ಶುರುವಾಗಲಿದ್ದು, ನಯನ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಅಂದಹಾಗೆ ‘ಗಾಡ್​ಫಾದರ್’ ಮಲಯಾಳಂನಲ್ಲಿ ತೆರೆಗೆ ಬಂದಿದ್ದ ‘ಲೂಸಿಫರ್’ ಚಿತ್ರದ ರಿಮೇಕ್. ಮೂಲ ಚಿತ್ರದಲ್ಲಿ ಮೋಹನ್​ಲಾಲ್ ಪ್ರಧಾನ ಪಾತ್ರದಲ್ಲಿದ್ದರು. ತೆಲುಗಿನಲ್ಲಿ ಚಿರಂಜೀವಿ ಈ ಪಾತ್ರವನ್ನು ನಿಭಾಯಿಸಲಿದ್ದಾರೆ. ಮಲಯಾಳಂ ಹೊರತುಪಡಿಸಿ ಬೇರೆಬೇರೆ ಭಾಷೆಗೂ ಈ ಸಿನಿಮಾ ಡಬ್ ಆಗಿ 2022ರ ಮಧ್ಯೆದಲ್ಲಿ ತೆರೆಗೆ ಬರಲಿದೆಯಂತೆ.

ಇದನ್ನೂ ಓದಿ: ಗೆಳತಿಯ ವಿವಾಹ ಸಂಗೀತ್ ಕಾರ್ಯಕ್ರಮದಲ್ಲಿ ಆಲಿಯಾಭಟ್ ಜಬರ್ ದಸ್ತ್ ಡಾನ್ಸ್ , ಇಲ್ಲಿದೆ ವಿಡಿಯೋ

ಚಿರಂಜೀವಿ ಜೊತೆಗೆ ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸತ್ಯದೇವ್ ಅವರು ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದು, ತಮನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಜಂಟಿಯಾಗಿ ಎನ್‌.ವಿ.ಪ್ರಸಾದ್ ಮತ್ತು ರಾಮ್ ಚರಣ್ ಬಂಡವಾಳ ಹೂಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News