/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Twist In Me Too Case, Arjun Sarja, Shruti Hariharan:  ಮೂರು ವರ್ಷಗಳ ಹಿಂದೆ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ "ಮೀ ಟೂ" ಪ್ರಕರಣ, ಸ್ಯಾಂಡಲ್​ವುಡ್​ನಲ್ಲಿಯೂ ತಲ್ಲಣವನ್ನೇ ಸೃಷ್ಟಿಸಿತ್ತು. ದಕ್ಷಿಣ ಭಾರತದ ಸುಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಪುತ್ರ, ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಎಂಟ್ರಿ ಕೊಟ್ಟು ಆಕ್ಷನ್ ಕಿಂಗ್ ಎಂದೇ ಪ್ರಸಿದ್ಧರಾಗಿರುವ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿರುವ ನಟ ಅರ್ಜುನ್ ಸರ್ಜಾ ವಿರುದ್ಧ "ಮೀ ಟೂ" (Me Too) ಆರೋಪ ಕೇಳಿಬಂದಿತ್ತು. ಆದರೆ, ಪ್ರಕರಣ ದಾಖಲಾಗಿ ಮೂರು ವರ್ಷಗಳು ಕಳೆದರೂ ಸಹ ನಟ ಅರ್ಜುನ್​ ಸರ್ಜಾ  ವಿರುದ್ಧ ಸೂಕ್ತ ಸಾಕ್ಷಿ ಸಿಗದ ಕಾರಣ ನಟಿ ಶ್ರುತಿ ಹರಿಹರನ್‌ಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಹೌದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಮೀಟೂ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದ್ದು, ಆಕ್ಷನ್ ಕಿಂಗ್ ನಟ ಅರ್ಜುನ್​ ಸರ್ಜಾ  ವಿರುದ್ಧದ  ನಟಿ ಶೃತಿ ಹರಿಹರನ್ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ.  ಹೀಗಾಗಿ ಸಿ‌ಆರ್‌ಪಿ‌ಸಿ ನಿಯಮಾನುಸಾರ ಫಾರ್ಮ್​ ನಂಬರ್ 159ರ ಅಡಿಯಲ್ಲಿ ಪೊಲೀಸರು ನಟಿ ಶ್ರುತಿ ಹರಿಹರನ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದಲ್ಲದೆ, ಬಿ ರಿಪೋರ್ಟ್​ ಸಿದ್ಧತೆಗೂ ಕೂಡ ಕಬ್ಬನ್​ ಪಾರ್ಕ್​ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Om Raut kisses Kriti: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!

ಏನಿದು ಪ್ರಕರಣ?
‘ವಿಸ್ಮಯ’ ಸಿನಿಮಾ ಚಿತ್ರೀಕರಣ ವೇಳೆ ಲೈಂಗಿಕ ಕಿರುಕುಳ ಆಗಿತ್ತು ಎಂದು ನಟಿ ಶ್ರುತಿ ಹರಿಹರನ್​ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಿ ಸಿಗದ ಕಾರಣ ಅರ್ಜುನ್​ ಸರ್ಜಾ ಅವರಿಗೆ ಈ ಕೇಸ್​ನಿಂದ ಬಿಗ್​ ರಿಲೀಫ್​ ಸಿಗುವ ಸಾಧ್ಯತೆ ಇದೆ. 

ವಾಸ್ತವವಾಗಿ, ವಿಸ್ಮಯ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಇಬ್ಬರೂ ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಕೆಲವರು ನಟಿ ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್​ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ಕೂಡ ಈ ಬಗ್ಗೆ ಸಭೆ ನಡೆಸಲಾಗಿತ್ತು.

ಇದನ್ನೂ ಓದಿ- Chiru's Death Anniversary: ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ರೆಬೆಲ್​ ಸ್ಟಾರ್ ಅಂಬರೀಷ್​ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ನಟಿ ಶ್ರುತಿ ಹರಿಹರನ್​ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಈ ಸಂದರ್ಭದಲ್ಲಿ ತಾವು ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಅರ್ಜುನ್​ ಸರ್ಜಾ ವಿರುದ್ಧ ಶೃತಿ ಹರಿಹರನ್ ದೂರು ನೀಡಿದ್ದರು. 

ಮಹಿಳೆಯ ಗೌರವಕ್ಕೆ ಧಕ್ಕೆ 354, 509ಲೈಂಗಿಕ ಕಿರುಕುಳ, ಐಪಿಸಿ 354ಎ ಹಾಗೂ ಜೀವಬೆದರಿಕೆ ಐಪಿಸಿ 506 ಆರೋಪದಡಿ ಕೇಸ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಾಗಿ ಯುಬಿ ಸಿಟಿ, ದೇವನಹಳ್ಳಿ ಹಾಗೂ ಇತರೆ ಜಾಗದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು.
ಮೂರು ವರ್ಷ ಕಳೆದರೂ ಶ್ರುತಿ ಹರಿಹರನ್​ ಮಾಡಿದ್ದ ಆರೋಪಕ್ಕೆ ಸೂಕ್ತ ಸಾಕ್ಷಿ ಸಿಕ್ಕಿಲ್ಲ. 
ಹಾಗಾಗಿ ಇದೀಗ ಬಿ ರಿಪೋರ್ಟ್​ ನೀಡಲು ಪೊಲೀಸರು ಸಿದ್ಧರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Lack of witnesses against Arjun Sarja in Me Too case: Police issues notice to Shruti Hariharan
News Source: 
Home Title: 

ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಸಾಕ್ಷಿಗಳ ಕೊರತೆ: ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ

ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಸಾಕ್ಷಿಗಳ ಕೊರತೆ:  ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ
Caption: 
Me Too Case
Yes
Is Blog?: 
No
Tags: 
Facebook Instant Article: 
Yes
Highlights: 

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಮೀಟೂ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ 

ಆಕ್ಷನ್ ಕಿಂಗ್ ನಟ ಅರ್ಜುನ್​ ಸರ್ಜಾ  ವಿರುದ್ಧದ  ನಟಿ ಶೃತಿ ಹರಿಹರನ್ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ.

ಹೀಗಾಗಿ ಸಿ‌ಆರ್‌ಪಿ‌ಸಿ ನಿಯಮಾನುಸಾರ ಫಾರ್ಮ್​ ನಂಬರ್ 159ರ ಅಡಿಯಲ್ಲಿ ಪೊಲೀಸರು ನಟಿ ಶ್ರುತಿ ಹರಿಹರನ್‌ಗೆ ನೋಟಿಸ್ ಜಾರಿ

Mobile Title: 
ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಸಾಕ್ಷಿಗಳ ಕೊರತೆ: ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ
Yashaswini V
Publish Later: 
No
Publish At: 
Thursday, June 8, 2023 - 10:36
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No
Word Count: 
379